॥ಚನ್ನಮ್ಮಾ ಮೈದಾನ ಮಹಾನಗರ ಪಾಲಿಕೆಯ ಆಸ್ತಿ॥
ಹುಬ್ಬಳ್ಳಿ ನಗರದ ರಾಣಿಚೆನ್ನಮ್ಮ ಮೈದಾನದಲ್ಲಿ ಮುಂಬರುವ ಶ್ರೀ ಗಣೇಶ ಉತ್ಸವವನ್ನು ಆಚರಿಸಲು ನಿಯಮಾವಳಿಗಳಂತೆ ಅನುಮತಿಯನ್ನು ಕೋರಿರುವ ಬಗ್ಗೆ ಮಾನ್ಯ ಆಯುಕ್ತರು , ನಿನ್ನೆ ದಿನದ ಹುಬ್ಬಳ್ಳಿ ಪ್ರವಾಸದಲ್ಲಿರುವ ಕರ್ನಾಟಕ ಸರ್ಕಾರದ ಮಾನ್ಯ ಗೃಹ ಮಂತ್ರಿಗಳ ಸೂಚನೆಯ ಮೇರೆಗೆ ಈ ಕುರಿತು ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವ ಹಂತದಲ್ಲಿರುವದನ್ನು ಗಮನಿಸಲಾಗಿದ್ದು. ಈ ರೀತಿಯ ಕಾರ್ಯವು ಮಾನ್ಯ ಸರ್ವೋಚ್ಛ ನ್ಯಾಯಾಲದ ಆದೇಶದ ಉಲ್ಲಂಘನೆ ಆಗುತ್ತದೆ.
ಈ ಹಿಂದೆ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದು ಅಂಜುಮನ್ ಸಂಸ್ಥೆಯ ಮೇಲ್ಮನಿವಿಯನ್ನು ತಿರಸ್ಕರಿಸಿದ ಮೇರೆಗೆ ಪಾಲಿಕೆಯ ಒಡೆತನದಲ್ಲಿಯೇ ಇರುವ ಸಿಟಿ ಸರ್ವೆ ನಂ 174 ರ 1 ಎಕ್ರೆ 05 ಗುಂಟೆ 76 ಚೌ ಫೂಟ್ ಮೈದಾನವು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಂಪೂರ್ಣ ಸ್ವತ್ತಾಗಿದ್ದು ಸದರ ಆಸ್ತಿಯನ್ನು ಪಾಲಿಕೆಯ ಒಡೆತನದಲ್ಲಿ ಬರುವ ಇನ್ನಿತರೆ ಆಸ್ತಿಗಳನ್ನು ಯಾವ ರೀತಿಯಲ್ಲಿ ಉಪಯೋಗಿಸುತ್ತಿದೆಯೋ ಅದೇ ರೀತಿಯಲ್ಲಿ ಈ ಆಸ್ತಿಯನ್ನೂ ಸಹ ಷರತ್ತಿನ ಆಧಾರದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ನೀಡುವ ಅಧಿಕಾರವನ್ನು ಉಳಿಸಿಕೊಂಡಿರುತ್ತದೆ. ಈ ಆಸ್ತಿಯ ಬಗ್ಗೆ ಮಾನ್ಯ ನ್ಯಾಯಾಲಯಗಳಲ್ಲಿ ನಡೆದಿರುವ ಅಸಲು ದಾವೆ ನಂ. 359/1972 ಆರ್ .ಎ 40/1974 ಆರ್ ಎಸ ಎ 754/1982 ಮತ್ತು ಸಿವಿಲ್ ಅಪೀಲ್ 1019/1995 ಮತ್ತು ಇತರೆ ತೀರ್ಪುಗಳ ಪ್ರಕಾರ The suit is decreed declaring that the transaction of 1921 is only a licence and not a lease ಎಂದು ಆದೇಶ ಮಾಡಿರುವದನ್ನು ದಾಖಲಿಸಲಾಗಿದೆ.
ಈ ಎಲ್ಲ ವಿಷಯಗಳನ್ನು ಪರಿಗಣಿಸಿ ಹಲವಾರು ಬಾರಿ ಚರ್ಚಿಸಿ ಕಳೆದ ವರ್ಷದಲ್ಲಿ ಮಹಾನಗರ ಪಾಲಿಕೆಯು ಮುಸಲ್ಮಾನ ಸಮುದಾಯದ 2 ಬಾರಿ ಸಾಮೂಹಿಕ ಪ್ರಾರ್ಥನೆಗೆ, ಟಿಪ್ಪು ಜಯಂತಿ ಆಚರಿಸಲು , ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಮಹಾನಗರ ಪಾಲಿಕೆಯು ತನ್ನ ಮಾಲೀಕತ್ವದ ಹಕ್ಕಿನಿಂದ ಅನುಮತಿಯನ್ನು ನೀಡಿದ್ದು , ಸೌಜನ್ಯಯುತವಾಗಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಉದಾಹರಣೆಯಾಗಿರುತ್ತದೆ.
ಈ ಸಾಲಿನಲ್ಲಿಯೂ ಕೂಡ ಮುಂಬರುವ ಗಣೇಶ ಉತ್ಸವವನ್ನು ಈ ಹಿಂದಿನ ಸಾಮಾಜಿಕ ಸಂಸ್ಥೆಯವರು ಅನುಮತಿಯನ್ನು ಕೋರಿರುವದನ್ನು ಮನ್ನಿಸಿ ಮಹಾನಗರ ಪಾಲಿಕೆಯ ಹಂತದಲ್ಲಿ ಸೂಕ್ತವಾದ ಅನುಮತಿಯನ್ನು ನೀಡುವದು ಉಚಿತವಾಗಿದ್ದು . ಸರ್ಕಾರದ ಈ ಕುರಿತಾಗಿ ರಾಜ್ಯ ಸರ್ಕಾರದ ಅನುಮತಿಯನ್ನು ಎದುರು ನೋಡುವದು ಸಮಾಜಿಕ ಸಂಘರ್ಷಕ್ಕೆ ಮತ್ತು ಕೋಮು ಸೌಹಾರ್ದತೆಯನ್ನು ಕದಡಲು ಎಡೆಮಾಡಿಕೊಟ್ಟಂತಾಗುತ್ತದೆ ಎನ್ನುವ ಅಭಿಪ್ರಾಯವನ್ನು ನಿಕಟಪೂರ್ವ ಮಹಾಪೌರರಾದ ಶ್ರೀ.ಈರೇಶ್ ಅಂಚಟಗೇರಿ ಯವರು ವ್ಯಕ್ತಪಡಿಸಿರುತ್ತಾರೆ.
ತಮ್ಮ ಸೇವಕ
ಈರೇಶ ಅಂಚಟಗೇರಿ
ಮಾಜಿ ಮಹಾಪೌರರು
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ:9945564891