ಜರ್ನಲಿಸ್ಟ್ ಗಿಲ್ಡ್‌ನ ಕ್ರೀಡಾಕೂಟ-೨೦೨೩ ಸಂಪನ್ನ
ಪಠಾತ್, ಪಾಟೀಲ್ ವೀರಾಗ್ರಣಿ : ನಿಜಗುಣಿ,ರವಿಕುಮಾರ್ ರನ್ನರ್‍ಸ್ ಅಪ್
ಧಾರವಾಡ : ಧಾರವಾಡ ಜರ್ನಲಿಸ್ಟ ಗಿಲ್ಡ್ ನ ೨೦೨೩ನೇ ಸಾಲಿನ ಕ್ರೀಡಾಕೂಟ ಸಂಪನ್ನಗೊಂಡಿದ್ದು, ಸಾಮಾನ್ಯ ವಿಭಾಗದಲ್ಲಿ
ಅತ್ಯುತ್ತಮ ಕ್ರೀಡಾ ಪ್ರದರ್ಶನದ ಮೂಲಕ ಛಾಯಾಗ್ರಾಹಕರಾದ ಬಸವರಾಜ ಪಟಾತ್ ಮತ್ತು ೪೫ವರ್ಷ ಮೇಲ್ಪಟ್ಟ ಹಿರಿಯರ ವಿಭಾಗದಲ್ಲಿ ಶಿವಲಿಂಗಯ್ಯ ಪಾಟೀಲ್ ಅವರು ೨೦೨೩ನೇ ಸಾಲಿನ ವೀರಾಗ್ರಣಿ ಯಾಗಿ ಹೊರಹೊಮ್ಮಿದ್ದಾರೆ.
ಮೂರು ಸ್ಪರ್ಧೆಯಲ್ಲಿ ಪ್ರಥಮ, ಒಂದು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಗಿಲ್ಡ್‌ನ ಕ್ರೀಡಾ ಸಮಿತಿ ಅಧ್ಯಕ್ಷ ನಿಜಗುಣಿ ದಿಂಡಲಕೊಪ್ಪ ಚಾಂಪಿಯನ್ ರನ್ನರ್‍ಸ್ ಅಪ್ ಮತ್ತು ಹಿರಿಯರ ವಿಭಾಗದಲ್ಲಿ ರವಿಕುಮಾರ ಕಗ್ಗಣ್ಣವರ ಚಾಂಪಿಯನ್ ರನ್ನರ್‍ಸ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ೨೦೨೩ನೇ ಸಾಲಿನ ಅತ್ಯುತ್ತಮ ಕ್ರೀಡಾಪಟುವಾಗಿ ಮಂಜುನಾಥ ಅಂಗಡಿ ಹೊರಹೊಮ್ಮಿದರೆ, ಎಲ್ಲ ಕ್ರೀಡೆಗಳಲ್ಲೂ ಸಕ್ರೀಯವಾಗಿ ಪಾಲ್ಗೊಂಡ ಮಹಾಂತೇಶ ಕಣವಿ ಕ್ರೀಡಾಸ್ಪೂರ್ತಿ ಬಹುಮಾನಕ್ಕೆ ಭಾಜನರಾಗಿದ್ದಾರೆ.
ಇನ್ನು ಉಳಿದಂತೆ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ಪಟ್ಟಿ ಇಂತಿದೆ.
ಅಥ್ಲೆಟಿಕ್ಸ್ ಫಲಿತಾಂಶ : ೧೦೦ ಮೀಟರ್ ಓಟದಲ್ಲಿ ಬಸವರಾಜ ಪಟಾತ್ (ಪ್ರಥಮ), ಮಂಜುನಾಥ ಅಂಗಡಿ (ದ್ವಿತೀಯ), ರವೀಶ ಪವಾರ (ತೃತೀಯ), ೧೦೦ ಮೀಟರ್ ಹಿಮ್ಮುಖ ಓಟದಲ್ಲಿ ಬಸವರಾಜ ಪಟಾತ್ (ಪ್ರ), ಮಂಜುನಾಥ ಅಂಗಡಿ (ದ್ವಿ), ರವಿಕುಮಾರ ಕಗ್ಗಣ್ಣವರ (ತೃ),
೨೦೦ ಮೀಟರ್ ಓಟ ಬಸವರಾಜ ಪಟಾತ್ (ಪ್ರ), ರವೀಶ ಪವಾರ (ದ್ವಿ), ಮಂಜುನಾಥ ಅಂಗಡಿ (ತೃ), ಗುಂಡು ಎಸೆತದಲ್ಲಿ ರವೀಶ ಪವಾರ (ಪ್ರ), ನಿಜಗುಣಿ ದಿಂಡಲಕೊಪ್ಪ (ದ್ವಿ), ಬಸವರಾಜ ಪಟಾತ (ತೃ), ಉದ್ದ ಜಿಗಿತದಲ್ಲಿ ಬಸವರಾಜ ಪಟಾತ (ಪ್ರ), ಮಂಜುನಾಥ ಅಂಗಡಿ (ದ್ವಿ), ಮಲ್ಲಿಕಾರ್ಜುನ ಬಾಳನಗೌಡ್ರ(ತೃ), ಎತ್ತರ ಜಿಗಿತದಲ್ಲಿ ಮಲ್ಲಿಕಾರ್ಜುನ ಬಾಳನಗೌಡ್ರ (ಪ್ರ), ಬಸವರಾಜ ಪಟಾತ್ (ದ್ವಿ), ಮಂಜುನಾಥ ಅಂಗಡಿ (ತೃ), ಜಾವೆಲಿನ್ ಥ್ರೋದಲ್ಲಿ ನಿಜಗುಣಿ ದಿಂಡಲಕೊಪ್ಪ (ಪ್ರ), ರಾಯಸಾಬ ಅನಸಾರಿ (ದ್ವಿ), ಸದ್ದಾಂ ಮುಲ್ಲಾ (ತೃ) ಸ್ಥಾನ ಪಡೆದಿದ್ದಾರೆ. ಇನ್ನು ೪೧೦೦ ರಿಲೇಯಲ್ಲಿ ಶಶಿಧರ ಬುದ್ನಿ, ರವೀಶ ಪವಾರ, ಮಲ್ಲಿಕಾರ್ಜುನ ಬಾಳನಗೌಡ್ರ, ಬಸವರಾಜ ಪಟಾತ ನೇತೃತ್ವದ ತಂಡ (ಪ್ರಥಮ), ರಾಯಸಾಬ ಅನಸಾರಿ, ಮಂಜುನಾಥ ಕವಳಿ, ಬಸವರಾಜ ಹಿರೇಮಠ, ಮಂಜುನಾಥ ಅಂಗಡಿ ನೇತೃತ್ವದ ತಂಡ (ದ್ವಿತೀಯ) ಸ್ಥಾನ ಪಡೆದಿದೆ.
ಹಿರಿಯರ ವಿಭಾಗದ ಸ್ಪರ್ಧೆಗಳು : ಇನ್ನು ೪೫ ವರ್ಷ ಮೇಲ್ಪಟ್ಟವರಿಗೆ ಆಯೋಜಿಸಿದ್ದ ೧೦೦ ಮೀಟರ್‌ವೇಗದ ನಡಿಗೆ ರವಿಕುಮಾರ ಕಗ್ಗಣ್ಣವರ (ಪ್ರ), ಶಿವಲಿಂಗಯ್ಯ ಪಾಟೀಲ (ದ್ವಿ), ಮಿಲಿಂದ ಪಿಸೆ (ತೃ), ಜಾವೆಲಿನ್ ಥ್ರೋದಲ್ಲಿ ಶಿವಲಿಂಗಯ್ಯ ಪಾಟೀಲ (ಪ್ರ), ರವಿಕುಮಾರ ಕಗ್ಗಣ್ಣವರ (ದ್ವಿ), ಫಯಾಜ್ ಎಂ (ತೃ), ಗುಂಡು ಎಸೆತದಲ್ಲಿ ಶಿವಲಿಂಗಯ್ಯ ಪಾಟೀಲ (ಪ್ರ), ರವಿಕುಮಾರ ಕಗ್ಗಣ್ಣವರ (ದ್ವಿ), ಫಯಾಜ್ ಎಂ (ತೃತೀಯ) ಸ್ಥಾನ ಪಡೆದಿದ್ದಾರೆ.
ಒಳಾಂಗಣ ಕ್ರೀಡೆ ಫಲಿತಾಂಶ : ಚದುರಂಗ ಸ್ಪರ್ಧೆಯಲ್ಲಿ ನಿಜಗುಣಿ ದಿಂಡಲಕೊಪ್ಪ (ಪ್ರ), ರಾಯಸಾಬ ಅನಸಾರಿ (ದ್ವಿ), ಶಶಿಧರ ಬುದ್ನಿ (ತೃ), ಕೇರಂ ಸಿಂಗಲ್ಸ್‌ನಲ್ಲಿ ವಿಕ್ರಮ ನಾಡಿಗೇರ (ಪ್ರ), ಮಲ್ಲಿಕಾರ್ಜುನ ಹಿರೇಮಠ (ದ್ವಿ), ಶಿವಲಿಂಗಯ್ಯ ಪಾಟೀಲ (ತೃ), ಕೇರಂ ಡಬಲ್ಸ್‌ನಲ್ಲಿ ರಾಯಸಾಬ ಅನಸಾರಿ, ಶಿವಲಿಂಗಯ್ಯ ಪಾಟೀಲ (ಪ್ರ), ಸದ್ದಾಂ ಮುಲ್ಲಾ, ವಿಕ್ರಮ ನಾಡಿಗೈರ (ದ್ವಿ), ನಿಜಗುಣಿ ದಿಂಡಲಕೊಪ್ಪ, ಬಸವರಾಜ ಅಳಗವಾಡಿ (ತೃ),
ಶೆಟಲ್ಸ್ ವಿಭಾಗ : ಶೆಟಲ್ ಸಿಂಗಲ್ಸ್‌ನಲ್ಲಿ ರವೀಶ ಪವಾರ (ಪ್ರ), ಬಸವರಾಜ ಪಟಾತ (ದ್ವಿ), ವಿಕ್ರಮ ನಾಡಿಗೇರ ಹಾಗೂ ಶಿವಲಿಂಗಯ್ಯ ಪಾಟೀಲ (ತೃ), ಡಬಲ್ಸ್‌ನಲ್ಲಿ ರವೀಶ ಪವಾರ, ಶಿವಲಿಂಗಯ್ಯ ಪಾಟೀಲ (ಪ್ರ), ಶಶಿಧರ ಬುದ್ನಿ, ಮಲ್ಲಿಕಾರ್ಜುನ ಬಾಳನಗೌಡರ (ದ್ವಿ), ಮಂಜುನಾಥ ಅಂಗಡಿ, ಬಸವರಾಜ ಪಟಾತ (ತೃ) ಸ್ಥಾನ ಪಡೆದಿದ್ದಾರೆ.
ಕಬ್ಬಡ್ಡಿ,ಕ್ರಿಕೇಟ್ ತುರುಸಿನ ಸ್ಪರ್ಧೆ : ಇನ್ನು ದೇಶಿ ಆಟ ಕಬ್ಬಡ್ಡಿ ಸ್ಪರ್ಧೆಯಲ್ಲಿ ನಾಡೋಜ ಡಾ.ಪಾಟೀಲ ಪುಟ್ಟಪ್ಪ ತಂಡವು ಪಿ.ಲಂಕೇಶ ತಂಡವನ್ನು ಮೂರು ಅಂಕಗಳಿಂದ (೨೨-೧೯)ಮಣಿಸಿ, ಗೆಲುವು ಸಾಽಸಿದರೆ, ಕ್ರಿಕೆಟ್ ಪಂದ್ಯಾವಳಿಯಲ್ಲಿ ನಿಜಗುಣಿ ದಿಂಡಲಕೊಪ್ಪ ನಾಯಕತ್ವದ ಪಂಚಿಂಗ್ ಸ್ಟಾರ್‍ಸ್ ತಂಡವು ೭ ವಿಕೆಟ್ ಅಂತರದಿಂದ, ರೈಸಿಂಗ್ ಸ್ಟಾರ್‍ಸ್ ತಂಡವನ್ನು ಸೋಲಿಸಿತು. ಈ ಪಂದ್ಯಾವಳಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ಪಂಚಿಂಗ್ ಸ್ಟಾರ್‍ಸ್ ತಂಡದ ರಾಯಸಾಬ ಅನಸಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇನ್ನ ಇದೇ ಮೊದಲ ಬಾರಿಗೆ ಜರ್ನಲಿಸ್ಟ್ ಗಿಲ್ಡ್ ನಡೆಸಿದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಗೀಲ್ಡ್‌ನ ಅಧ್ಯಕ್ಷ ಡಾ.ಬಸವರಾಜ್ ಹೊಂಗಲ್ ಪ್ರಥಮ ಸ್ಥಾನ ಪಡೆದರೆ, ಬಸವರಾಜ್ ಪಟಾತ್ ದ್ವಿತೀಯ ಮತ್ತು ಮಂಜುನಾಥ ಅಂಗಡಿ ತೃತೀಯ ಸ್ಥಾನ ಪಡೆದುಕೊಂಡರು. ಈಜು ಸ್ಪರ್ಧೆಯಲ್ಲಿ ನಿಜಗುಣಿ ದಿಂಡಲಕೊಪ್ಪ ಪ್ರಥಮ, ಡಾ.ಬಸವರಾಜ ಹೊಂಗಲ್ ದ್ವಿತೀಯ ಹಾಗೂ ಮಂಜುನಾಥ ಅಂಗಡಿ, ಮಿಲಿಂದ ಪಿಸೆ ತೃತೀಯ ಸ್ಥಾನ ಪಡೆದರು
ಸುದ್ದಿಗಳು ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ:9945564891.