ಬಹುಮಾನ ವಿತರಣಾ ಸಮಾರಂಭ ವೃತ್ತಿಯೊಂದಿಗೆ ಆರೋಗ್ಯದ ಕಾಳಜಿ ಅಗತ್ಯ ಲಕ್ಷ್ಮಣ ಉಪ್ಪಾರ ಅಭಿಮತ.
ಧಾರವಾಡ : ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಮುಖ್ಯ. ಹಾಗೆಯೇ ಪತ್ರಕರ್ತರು ವೃತ್ತಿಯೊಂದಿಗೆ ವೈಯಕ್ತಿ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದು ಕ್ಲಾಸಿಕ್ ಸಂಸ್ಥೆಯ ಮುಖ್ಯಸ್ಥ ಲಕ್ಷö??ಣ ಉಪ್ಪಾರ ಕಿವಿಮಾತು ಹೇಳಿದರು.
ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಧಾರವಾಡ ಜರ್ನಲಿಸ್ಟ್ ಗಿಲ್ಡ್ ಹಮ್ಮಿಕೊಂಡ ೨೦೨೨-೨೩ನೇ ಸಾಲಿನ ಗಿಲ್ಡ್ನ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರದ್ದು ವಿಶ್ರಾಂತಿ ಇಲ್ಲದ ಹಾಗೂ ಒತ್ತಡದ ಬದುಕು. ಆದರೆ, ಆರೋಗ್ಯದ ನಿಷ್ಕಾಳಜಿ ಸಲ್ಲ. ನಿತ್ಯ ವ್ಯಾಯಾಮ, ಯೋಗ, ಧ್ಯಾನ, ಸಮಯಕ್ಕೆ ಸರಿಯಾಗಿ ಆಹಾರ ಸೇವೆ, ವಿಶ್ರಾಂತಿ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಧುನಿಕ ಬದುಕಿನಲ್ಲಿ ಒತ್ತಡಕ್ಕೆ ಸಿಲುಕಿದ ಎಷ್ಟೋ ಪತ್ರಕರ್ತರು ಖಿನ್ನತೆಗೆ ಒಳಗಾದ ಉದಾಹರಣೆಗಳಿವೆ. ಆದ್ದರಿಂದ ಪತ್ರಕರ್ತರು ಕ್ರೀಡೆಗಳ ಮೂಲಕ ಸದೃಢ ಕಾಯ ಹೊಂದಬೇಕು. ಅದರಂತೆಯೇ ಕುಟುಂಬಕ್ಕೂ ಸಮಯ ಮೀಸಲಿಡಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ವ್ಯವಸ್ಥೆ ಸರಿಪಡಿಸುವ ಈ ರಂಗದ ಪ್ರತಿನಿಧಿಗಳು ತಮ್ಮ ಆರೋಗ್ಯ ಸುವ್ಯವಸ್ಥಿತ ರೀತಿಯಲ್ಲಿ ಇಟ್ಟುಕೊಳ್ಳಲು ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಹೇಳಿದರು.
ಸಮಾರಂಭದಲ್ಲಿ ಲಕ್ಷö್ಮಣ ಉಪ್ಪಾರ, ಎಸ್.ಎಫ್.ಸಿದ್ಧನಗೌಡರ, ಕಾನಿಪ ಕಾಕಾ ಸಮಿತಿಗೆ ಅವಿರೋಧ ಆಯ್ಕೆಯಾದ ಪತ್ರಕರ್ತ ಮಂಜುನಾಥ ಅಂಗಡಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ವಿವಿಧ ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪತ್ರಕರ್ತರ ಗುರುರಾಜ ಜಮಖಂಡಿ ಅಧ್ಯಕ್ಷತೆಯ ನುಡಿಗಳನ್ನಾಡಿದರು. ಗಿಲ್ಡ್ನನ ಅಧ್ಯಕ್ಷ ಡಾ.ಬಸವರಾಜ ಹೊಂಗಲ್ ಪ್ರಾಸ್ತಾವಿಕ ಮಾತನಾಡಿದರು. ಸುಧೀಂದ್ರಪ್ರಸಾದ ನಿರೂಪಿಸಿದರು. ಪುಂಡಲೀಕ ಹಡಪದ ಸ್ವಾಗತಿಸಿದರು. ಬಸವರಾಜ ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಗಿಲ್ಡ್ನ ಸರ್ವರ ಸದಸ್ಯರು ಹಾಗೂ ಕುಟುಂಬಸ್ಥರು ಭಾಗವಹಿಸಿದ್ದು ವಿಶೇಷವಾಗಿತ್ತು.
-
ಸುದ್ದಿ ಹಾಗೂ ಜಾಹೀರಾತುಗಾಗಿ ಸಂರ್ಪಕಿಸಿರಿ :9945564891