ಬಣಜಿಗ ಸಂಘದಿಂದ ಪ್ರತಿಭಾ ಪುರಸ್ಕಾರ 30 ರಂದು

ಬಣಜಿಗ ಸಂಘದಿಂದ ಪ್ರತಿಭಾ ಪುರಸ್ಕಾರ 30 ರಂದು
ಧಾರವಾಡ 28 : ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಘಟಕದವತಿಯಿಂದ  ಜು.30 ರಂದು ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮತ್ತು 
ಸಾಧಕರ‌ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅರುಣ ಶೀಲವಂತ ಹೇಳಿದರು.
ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಈ ಬಾರಿ‌ 25 ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸಮಾಜದ‌ಸಾಧಕರನ್ನು‌ ಸನ್ಮಾನ ಮಾಡಲಾಗುವುದು.ಪುರಸ್ಕಾರಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.ಅದರಂತೆ
ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ.೮೫ ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುವುದು.
ಹಳಿಯಾಳ ರಸ್ತೆಯ ಲಿಂಗಾಯತ ‌ಭವನದಲ್ಲಿ ಬೆಳಗ್ಗೆ 8 ರಿಂದ‌9 ವರೆಗೆ ಲಿಂಗಧಾರಣೆ ಮತ್ತು ಸಹಜ ಶಿವಯೋಗ ಹಮ್ಮಿಕೊಳ್ಳಲಾಗಿದೆ. ಸಾಹಿತಿ ಡಾ.ವೀರಣ್ಣ ರಾಜೂರ ಮತ್ತು‌ಬಸವ ಕೇಂದ್ರದ ಕಾರ್ಯದರ್ಶಿ ಬಸವಂತಪ್ಪ‌ ತೋಟದ ಅನುಭಾವದ ನುಡಿಗಳನ್ನಾಡುವರು.ಬಸವ ಕೇಂದ್ರದ ಅಧ್ಯಕ್ಷ ಶಿವಣ್ಣ ಶರಣ್ಣವರ ಉಪಸ್ಥಿತರಿರುವರು.
ಬೆಳಗ್ಗೆ 11 ಗಂಟೆಗೆ ಮಾಜಿ ಸಿಎಂ, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, 
ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್
ವಿ.ಸಂಕನೂರ,ಮಾಜಿ ಸಭಾಪತಿ ವೀರಣ್ಣ ಮತ್ತೀಕಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಉದ್ದಿಮೆದಾರ ಶಂಕ್ರಣ್ಣ ಮುನವಳ್ಳಿ ಆಗಮಿಸುವರು.
ಅಲ್ಲದೇ ಗಣ್ಯರಾದ ಅಣ್ಣಪ್ಪ‌ ಬಾಗಿ, ಮಲ್ಲಿಕಾರ್ಜುನ ಸಾವಕಾರ, ಜಿಲ್ಲಾ ಸಂಘದ ಅಧ್ಯಕ್ಷ ಶೇಖರ ಕವಳಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗೌರವಿಸಲಾಗುವುದು ಎಂದರು.
ವಿ.ಸಿ.ಸವಡಿ,
ಶಿವಕುಮಾರ ಕುಂಬಾರಿ, ಆರ್.ಎಸ್ .
ಉಪ್ಪಿನ, ರವಿ ಕಪಲಿ,  ಮೃತ್ಯುಂಜಯ ಕರಡಿಗುಡ್ಡ, ಸಂತೋಷ ಪಟ್ಟಣಶೆಟ್ಟಿ, ಡಾ. ಶಿವಕುಮಾರ ಗಾಂಜಿ, ಗಿರೀಶ ಬೆಟಗೇರಿ ಸುದ್ದಿಗೋಷ್ಠಿಯಲ್ಲಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ:  9945564891



ನವೀನ ಹಳೆಯದು

نموذج الاتصال