ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಕುರಿತು ಮನವಿಯನ್ನು ಸಹ ಸಲ್ಲಿಸಲಾಯಿತು.

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ
 ವತಿಯಿಂದ ಇಂದು  ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ  ಶಾಸಕರಾದ  ಅಬ್ಬಯ್ಯ ಪ್ರಸಾದ ಅವರನ್ನು ಭೇಟಿಯಾಗಿ ಸತತ ಮೂರನೇ ಬಾರಿ ಆಯ್ಕೆ ಆಗಿದ್ದಕ್ಕೆ ಸನ್ಮಾನ ಮಾಡಲಾಯಿತು. ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಕುರಿತು ಮನವಿಯನ್ನು ಸಹ  ಸಲ್ಲಿಸಲಾಯಿತು. 
ಮಾನ್ಯ ಶಾಸಕರು ಮನವಿಯನ್ನು ಸ್ವೀಕರಿಸಿ ಈ ಕುರಿತು ತಾವು ತುಂಬಾ ಸಕಾರಾತ್ಮಕ ನಿಲುವನ್ನು ಹೊಂದಿದ್ದು, ಹಿಂದಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಕ್ಕೆ ಯಾರೊಬ್ಬರೂ ಸ್ಪಂದಿಸಲಿಲ್ಲ ಹಾಗೂ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಲು ಬಿಜೆಪಿ ಶಾಸಕರು ಸದನದಲ್ಲಿ ಧ್ವನಿ ಎತ್ತಲಿಲ್ಲ.  ನನಗೆ, ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡುವ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಇದೆ. ಆದಷ್ಟು ಬೇಗ ಜಿಲ್ಲಾ ಸಚಿವರಾದ ಸಂತೋಷ್ ಲಾಡ್ ಅವರೊಂದಿಗೆ ಚರ್ಚೆ ಮಾಡಿ, ಮಹಾನಗರದ ಇತರ ಶಾಸಕರೊಂದಿಗೆ ಸೇರಿ ಮುಖ್ಯ ಮಂತ್ರಿಗಳಿಗೂ ಸಹ ವಿಷಯವನ್ನು ಪ್ರಸ್ತಾಪ ಮಾಡಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಿಯೇ ಮಾಡುತ್ತೇವೆ ಎಂದು ಖಚಿತ ಭರವಸೆ ನೀಡಿದರು. 
ವೇದಿಕೆಯ ಅಧ್ಯಕ್ಷರಾದ ವೆಂಕಟೇಶ ಮಾಚಕನೂರ, ಪ್ರಧಾನ ಕಾರ್ಯದರ್ಶಿ ರವಿಕುಮಾರ ಮಾಳಿಗೇರ, ಉಪಾಧ್ಯಕ್ಷರಾದ   ವಿಠ್ಠಲ್ ಕಮ್ಮಾರ, ಎಸ್ ಸಿ ನೀರಾವರಿ, ಪದಾಧಿಕಾರಿಗಳಾದ  ಭೀಮಸೇನ ಕಾಗಿ, ಶಾಂತವೀರ ಬೆಟಗೇರಿ ಶಾಂತವೀರ, ನಾಗೇಶ್ ಕಟಕೊಳ  ಇವರರು  ನಿಯೋಗ ದಲ್ಲಿ ಇದ್ದರು.

ಸುದ್ದಿಗಳು ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ:9945564891.
ನವೀನ ಹಳೆಯದು

نموذج الاتصال