ಮಹಿಳೆಯರು ಪರಿಸರವನ್ನು ಉಳಿಸುವ ಸಂಕಲ್ಪ ಮಾಡಲು ಕರೆ

ಮಹಿಳೆಯರು ಪರಿಸರವನ್ನು ಉಳಿಸುವ ಸಂಕಲ್ಪ ಮಾಡಲು ಕರೆ
      ಧಾರವಾಡ:--- ಜಿಲ್ಲಾ ಅಭಿಯಾನ ಪರಿಸರ ಸಮಿತಿ ಹಾಗೂ ಹಾಲಭಾವಿ ಸವ೯ದಾನ ಟ್ರಸ್ಟ್ ನ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಧಾರವಾಡದ ರಂಗಾಯಣದಲ್ಲಿ  ಮಹಿಳೆಯರಿಗಾಗಿ ಪರಿಸರ ಗೀತ ಗಾಯನ ಸ್ಪಧೆ೯ಯನ್ನು ಆಯೋಜಿಸಿಲಾಗಿತ್ತು.           
       ಕಾಯ೯ಕ್ರಮದ ಉದ್ಘಾಟನೆಯನ್ನು  ಸಸಿಗೆ ನೀರು ಎರೆದು ಮಾತನಾಡಿದ  ಶ್ರೀಮತಿ ಸವಿತಾ ಅಮರಶೆಟ್ಟಿಯವರು   ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಗಳಲ್ಲಿ ತಮ್ಮನ್ನು ಗುರುತಿಸಿ ಕೊಂಡಿದ್ದಾರೆ. ಆದರೆ ಪರಿಸರ ಕ್ಷೇತ್ರದಲ್ಲಿ ಮಹಿಳೆಯರು ಕಾಣುವುದು ಬೆರಳೆಣಿಕೆಯಷ್ಟು ಮಾತ್ರ. ಇಂದು ವಿಶ್ವ ಪರಿಸರ ದಿನ ಮಹಿಳೆಯರು ಪರಿಸರ ವನ್ನು ಉಳಿಸುವ ಸಂಕಲ್ಪ ಮಾಡಬೇಕಿದೆ . ಪಾಶ್ಚಾತ್ಯ ಸಂಸ್ಕೃತಿಯು ನಮ್ಮ ಸಂಪ್ರದಾಯ, ಸಂಸ್ಕೃತಿ, ಪರಿಸರವನ್ನು  ಅವನತಿಗೆ ಕರೆದುಕೊಂಡು ಹೋಗುತ್ತಿದೆ ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಯ ಕಡೆ ವಾಲುತ್ತಿದ್ದು  ,ಆಹಾರ ಪದ್ಧತಿ ಕೂಡ ಬದಲಾಗುತ್ತಿದೆ. ಸಮಾಜಕ್ಕೆ ಮಾರಕವಾಗುವ ಇಂಥ ಪದ್ಧತಿಗಳನ್ನು ಯುವ ಜನತೆ ಅನುಕರಣೆ ಮಾಡದಂತೆ ತಡೆಯುವ ಶಕ್ತಿ ಇರುವುದು ಮಹಿಳೆಯರಿಗೆ ಮಾತ್ರ ಎಂದು ಮಾಮಿ೯ಕ ನುಡಿದರು.         
       ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತರು, ಧಾರವಾಡದ ಜನ೯ಲಿಸ್ಟ ಗಿಲ್ಡ್ ನ ಅಧ್ಯಕ್ಷ ರಾದ  ಡಾ. ಬಸವರಾಜ ಹೊಂಗಲ್ ಮಾತನಾಡಿ,  ಪತ್ರಿಕೋದ್ಯಮದ ಹಾಗೂ ತಮ್ಮ  ದಿನನಿತ್ಯದ ಅನುಭವದಲ್ಲಿ ಬಂದ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿ ಬರಿ ಗಿಡ ನೆಟ್ಟರೆ ಸಾಲದು ಅದನ್ನು ಬೆಳಸಿ ಸಂರಕ್ಷಿಸುವ ಹೊಣೆಗಾರಿಕೆ ನಮ್ಮದಾಗಬೇಕು. ಸಾವ೯ಜನಿಕರು  ಸ್ವಇಚ್ಛೆಯಿಂದ ಜಾಗೃತಿ ಅಭಿಯಾನಗಳಲ್ಲಿ  ಭಾಗವಹಿಸುವಂತಾಗಬೇಕುತಾಪಮಾನ ಏರಿಕೆಯ ಈ ಸಂದರ್ಭದಲ್ಲಿ ಬಿಸಿಲಿನ ತಾಪಕ್ಕೆ ಮನುಷ್ಯ, ಪ್ರಾಣಿ ಪಕ್ಷಿಗಳು ಬಲಿಯಾಗುತ್ತಿವೆ. ಮುಂದೊಂದು ದಿನ ನೀರಿನ
 ಬಾಟಲಿಗಳ ಹಾಗೆ ಆಮ್ಲಜನಕದ ಬಾಟಲಿಗಳು ಕಾಣುವುದು ಅನಿವಾರ್ಯ ವಾಗಬಹುದು. ಆಮ್ಲಜನಕ ಯಾವುದೇ ಕಾಖಾ೯ನೆಗಳಲ್ಲಿ ಉತ್ಪತ್ತಿ ಯಾಗುವುದಿಲ್ಲ ಗಿಡ ಮರಗಳಿಂದ ಮಾತ್ರ ಅದು ಸಾದ್ಯವಾಗುತ್ತದೆ. ಇದನ್ನು ಅರಿತು ಇತರರಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಈ ನಿಟ್ಟಿನಲ್ಲಿ ಮಹಿಳಾಶಕ್ತಿ ದಿಟ್ಟ ಹೆಜ್ಜೆ ಇಡಬೇಕೆಂದು ನೆರೆದಿದ್ದ ತಾಯಂದಿರಿಗೆ ಮನವಿ ಮಾಡುತ್ತಾ ಕುಟುಂಬ ನಿವ೯ಹಣೆಯಂತೆ ಪ್ರಕೃತಿ ಮಾತೆಯನ್ನು ರಕ್ಷಿಸಬೇಕು ನಾವು ಸದಾ ನಿಮ್ಮೊಂದಿಗೆ ಕೈಜೋಡಿಸುತ್ತೇವೆ ಎಂದು ತಮ್ಮ ಮನದಾಳದ ಆಶಯ ವ್ಯಕ್ತ ಪಡಿಸಿದರು.  
        ಪರಿಸರ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಗೌಳಿಯವರ ಅತಿಥಿಗಳನ್ನು ಸ್ವಾಗತಿಸಿ, ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸಮಿತಿಯಿಂದ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮಗಳು ಸತತವಾಗಿ ನಡೆಯುತ್ತಿದ್ದು,ಪರಿಸರದತ್ತ ಮಹಿಳೆಯರನ್ನು ಆಕಷಿ೯ಸಲು  ವಿಭಿನ್ನ ಕಾಯ೯ಚಟುವಟಿಕೆಗಳನ್ನು ಹಮ್ಮಿಕೊಂಡು  ಪರಿಸರ ಬೆಳೆಸುವ, ಉಳಿಸುವ ರಕ್ಷಿಸುವ ಕುರಿತು   ಜಾಗೃತಿ ಮೂಡಿಸುತ್ತೀದ್ದೆವೆ.ತಮ್ಮ ಪತ್ರಿಕೆಗಳ  ಮೂಲಕ ನಮ್ಮ ಕಾಯ೯ಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸದಲ್ಲಿ ಪತ್ರಿಕಾ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು. ಈ ವೇದಿಕೆಯ  ಮೂಲಕ ಪತ್ರಿಕಾ ಮಾಧ್ಯಮದ ಬಳಗಕ್ಕೆ ನಮ್ಮ ಸಮಿತಿಯಿಂದ ಕೃತಜ್ಞತೆಯನ್ನು ಅಪಿ೯ಸುತ್ತೀದ್ದೇವೆ. ಜಯಶ್ರೀಯವರು ತಮ್ಮ ಮುಂದಿನ ಯೋಜನೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿ ಎಲ್ಲಾ ಮಹಿಳೆಯರು ಕಾಯ೯ಕ್ರಮಗಳಲ್ಲಿ  ಭಾಗವಹಿಸಿ ಸ್ವಚ್ಛ- ಸ್ವಸ್ಥ ಸಮೃದ್ಧ ಭಾರತದ ಕನಸು ನನಸಾಗಿಸಲು ಸ್ವಯಂ  ಪ್ರೇರಣೆಯಿಂದ ದಿಟ್ಟ ಹೆಜ್ಜೆ ಇಡುವಲ್ಲಿ ಮಹಿಳಾ ಶಕ್ತಿ ಯನ್ನು ಬಳಸಿಕೊಂಡು ಸ್ವಸ್ಥ  ಸಮಾಜವನ್ನು ಕಟ್ಟುವ ಜವಾಬ್ದಾರಿಯನ್ನು ಹೊರಬೇಕಿದೆ ಸಮಿತಿ ಯಿಂದ ಇದುವರೆಗೂ ಮಹಿಳೆಯರಿಗೆ ಹೆಚ್ಚು ಸಸಿಗಳನ್ನು ವಿತರಿಸಲಾಗಿದೆ. ಎಂದು ಸಂಕ್ಷಿಪ್ತವಾಗಿ ತಿಳಿಸಿದರು.
ನವೀನ ಹಳೆಯದು

نموذج الاتصال