ಧಾರವಾಡ ಸೆಂಟ್ರಲ್ ಹಾಗೂ ಸೆವೆನ್ ಹಿಲ್ಸ್ ರೋಟರಿ ಕ್ಲಬ್ ಗಳ ಪದಗ್ರಹಣ.

ಧಾರವಾಡ ಸೆಂಟ್ರಲ್ ಹಾಗೂ ಸೆವೆನ್ ಹಿಲ್ಸ್ ರೋಟರಿ ಕ್ಲಬ್ ಗಳ ಪದಗ್ರಹಣ.    
   ಧಾರವಾಡ: ರೋಟರಿ ಕ್ಲಬ್ ಧಾರವಾಡ ಸೆಂಟರ್ ಹಾಗೂ ರೋಟರಿ ಕ್ಲಬ್ 7 ಹಿಲ್ಸ್ ಇವುಗಳಪದಗ್ರಹಣ ಸಮಾರಂಭ  ಧಾರವಾಡದ ಟ್ರಾವೆಲಿನ್ ಹೋಟೆಲ್ ನಲ್ಲಿ ನಡೆಯಿತು.
ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ನ ಅಧ್ಯಕ್ಷರಾಗಿ ರೋಟೇರಿಯನ್ ಇಂಜಿನಿಯರ  ಸುನೀಲ ಗಂಗಾಧರ ಬಾಗೇವಾಡಿ  ಹಾಗೂ ಕಾರ್ಯದರ್ಶಿಯಾಗಿ  ಶ್ರೀಮತಿ. ಶರಯು ಆನಂದ ನಾಯಕ
ಹಾಗೂ ಕೋಶಾಧಿಕಾರಿಯಾಗಿ ರೋಟೇರಿಯನ್ ಮಾಂತೇಶ ಗುಂಜಟ್ಟಿ  ಹಾಗೂ
ರೋಟರಿ ಕ್ಲಬ್ ಸೆವನ್ ಹಿಲ್ಸ್  ಅಧ್ಯಕ್ಷರಾಗಿ  ಸಂಗೀತಾ ಬಾಗೇವಾಡಿ, ಕಾರ್ಯದರ್ಶಿಯಾಗಿ ರೋಟೇರಿಯನ್  , ರಂಜಿತಾ ಜಾದವ ಹಾಗೂ  ಕೋಶಾಧಿಕಾರಿಯಾಗಿ ರೊಟೇರಿಯನ್ ಡಾ. ಕೋಮಲ್ ಕುಲಕರ್ಣಿ  ಪದಗ್ರಹಣ ಮಾಡಿದರು.
ಇನ್ಸ್ಟಾಲಿ0ಗ್ ಆಫೀಸರ್ ಆಗಿ ವಿಜಯವಾಡದಿoದ ಆಗಮಿಸಿದಂತಹ 
ಪಿಡಿಜಿ. ಸ್ಯಾಮ್ ಮೊವ್ವಾ ಪದಗ್ರಹಣ ಕ್ರಿಯೆಯನ್ನು ನೆರವೇರಿಸಿ ಜಗದಾದ್ಯಂತ ರೋಟರಿ ಕ್ಲಬ್  ಸಮಾಜಕ್ಕಾಗಿ ಮಾಡುತ್ತಿರುವ ಕೆಲಸಗಳನ್ನು   ಹಾಗೂ ಮುಂದೆ ತಾವುಗಳು ಮಾಡಬೇಕಾದ ಕೆಲಸಗಳನ್ನು ವಿವರವಾಗಿ ತಿಳಿಸಿದರು
ಒಂದೇ ವರ್ಷದಲ್ಲಿ ಎರಡು ಕ್ಲಬ್ಬಿನ ಅಧ್ಯಕ್ಷ ಸ್ಥಾನವನ್ನು ಇಬ್ಬರೂ ದಂಪತಿಗಳು ಅಲಂಕರಿಸಿರುವುದು ನಮ್ಮ ದೇಶದ ರೋಟರಿ ಕ್ಲಬ್ಬಿನ ಇತಿಹಾಸದಲ್ಲಿ ಮೊದಲು ಎಂದರು.
ಒಂದೇ ವರ್ಷದಲ್ಲಿ ಎರಡು ಕ್ಲಬ್ಬಿನ ಅಧ್ಯಕ್ಷ ಸ್ಥಾನವನ್ನು ಇಬ್ಬರೂ ದಂಪತಿಗಳು ಅಲಂಕರಿಸಿರುವುದು ನಮ್ಮ ದೇಶದ ರೋಟರಿ ಕ್ಲಬ್ಬಿನ ಇತಿಹಾಸದಲ್ಲಿ ಮೊದಲು ಎಂದರು.
ರೊಟೇರಿಯನ್ ಇಂ. ಸುನಿಲ್ ಬಾಗೇವಾಡಿ ಪದಗ್ರಹಣ ಮಾಡಿದ ನಂತರ ಕ್ಲಬ್ಬಿನ ಎಲ್ಲ ಸದಸ್ಯರು ಕೂಡಿ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು ಅರ್ಪಿಸಿ, ಈ ಒಂದು ವರ್ಷದ ಅವಧಿಯಲ್ಲಿ ತಾವು ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಮಕ್ಕಳ ಮಾನಸಿಕ ಆರೋಗ್ಯ, ಸ್ವಚ್ಛತೆಯ ಬಗ್ಗೆ ತಿಳುವಳಿಕೆ, ಮಕ್ಕಳಿಗೆ ಸ್ಕಿಲ್ ಡೆವಲಪ್ಮೆಂಟ ಕಾರ್ಯಾಗಾರ ಹಾಗೂ ಇನ್ನಿತರ ಕಾರ್ಯಕ್ರಮಗಳು ಹೀಗೆ ಅನೇಕ ಕಾರ್ಯಗಳು ನಮ್ಮ ಮುಂದಿವೆ
ಅದೇ ರೀತಿ ಕಟ್ಟಡಗಳಿಗೆ ಸಂಬಂಧಿಸಿದಂತೆ 
ಕಟ್ಟಡ ಸಾಮಗ್ರಿ ತ್ಯಾಜ್ಯ ನಿರ್ವಹಣೆ, ಹಸಿರು ಕಟ್ಟಡದ ಪರಿಕಲ್ಪನೆ,ಇಂತಹ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವಂತಹ ಹಾಗೂ ಇದೇ ರೀತಿ ಕೊಳಚೆ ನಿರ್ಮೂಲನೆ ಹಾಗೂ ಬಡ ಜನರಿಗೆ
ಅದೇ ರೀತಿ ಶ್ರೀಮತಿ ಸಂಗೀತಾ ಬಾಗೇವಾಡಿಯವರು ರೋಟರಿ ಕ್ಲಬ್ ಸೆವೆನ್ ಹಿಲ್ಸ್ ನ  ಅಧ್ಯಕ್ಷ ಪದಗ್ರಹಣ ಮಾಡಿ ಧಾರವಾಡಕ್ಕೆ ವಿದ್ಯಾಕಾಶಿ ಎಂಬ ಬೀರುದು ಇತ್ತೀಚಿನ ದಿನಗಳಲ್ಲಿ  ಬರೀ ಹೆಸರಾಗಿದೆ, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯ ಫಲಿತಾಂಶಗಳು ತುಂಬಾ ಕಡಿಮೆಯಾಗಿದೆ ಆ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದರು.
ಅದೇ ರೀತಿ ಧಾರವಾಡದ ಹಿರಿಯ ನಾಗರಿಕಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಹಸಿರು ಕ್ರಾಂತಿಗಾಗಿ ಒಂದು ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.
 ಇದೇ ರೀತಿ ಸಮಾಜಕ್ಕಾಗಿ ಬೇಕಾದಂತಹ ಅವಶ್ಯಕವಾದ ಚಟುವಟಿಕೆಗಳನ್ನು ಮಾಡುವುದಾಗಿ ತಿಳಿಸಿದವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. .ಉದಯ ಬಾಂದೆ ಹಾಗೂ  ಗಿರಿಜಾ ಹಿರೇಮಠ ವಹಿಸಿಕೊಂಡಿದ್ದರು.
ಕಾರ್ಯಕ್ರಮವನ್ನು ಗುರುರಾಜ ಹಡಗಲಿ ಡಾ.ನಿಶಾ ಗಲಗಲಿ ಹಾಗೂ ಪವನ ಮುಧೋಳಕರ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಗವರ್ನರ  ಡಾಕ್ಟರ್ ಗೌರಿ ತಾವರಗೇರಿ ಹಾಗೂ ಆನಂದ್ ನಾಯಕ್, 
ರೊಟೇರಿಯನ್ಗಳಾದ ಡಾ. ಕವನ್ ದೇಶಪಾಂಡೆ, ಡಾ. ಪಲ್ಲವಿ ದೇಶಪಾಂಡೆ, ಆನಂದ ಅಮರಶೆಟ್ಟಿ , ಸುರೇಶ್ ಬಾಬು,  ಸುಮನ್ ಹೆಬ್ಳಿಕರ್, ಶ್ವೇತಾ ಶೂರಪಾಲಿ, ರೇಣುಕಾ ಸಾಲೊಂಕೆ, ನಂದಾ ಹಂಪಿಹೋಳಿ, ವಾಮನ ಮಂತ್ರಿ ಶಿವರೆಡ್ಡಿ ಸೋಮಾಪುರ, ಗಿರೀಶ್ ಬೆಟಗೇರಿ,ಗಿರೀಶ ಹಂಪಿಹೋಳಿ ಇನ್ನಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ:(M) 9945564891.
ನವೀನ ಹಳೆಯದು

نموذج الاتصال