ಬ್ರಹ್ಮಪುರಿ ಸಾಂಸ್ಕೃತಿಕ ಬಳಗ ಹೆಬ್ಬಳ್ಳಿ ಹಾಗೂ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ವತಿಯಿಂದ ಹೆಬ್ಬಳ್ಳಿಯಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರಗಳ ವಿತರಣೆ.
ಹೆಬ್ಬಳ್ಳಿ :
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ಮತ್ತು ಜನತಾ ಪ್ಲಾಟನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಮತ್ತು ಎರಡನೇ ತರಗತಿಯ ಮಕ್ಕಳಿಗೆ, ಸ್ಥಳೀಯ ಬ್ರಹ್ಮಪುರಿ ಸಾಂಸ್ಕೃತಿಕ ಬಳಗ ಹಾಗೂ ಧಾರವಾಡದ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ವತಿಯಿಂದ, ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ಹಾಗೂ ಹೆಬ್ಬಳ್ಳಿಯ ಜನತಾ ಪ್ಲಾಟನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ, ಒಂದು ಮತ್ತು ಎರಡನೇ ತರಗತಿಯ ಮಕ್ಕಳಿಗೆ ಧಾರವಾಡದ ಸಮಾಜಸೇವಕರಾದ ಮಹೇಶ ಗೋಲಪ್ಪನವರ ಸಹಯೋಗದೊಂದಿಗೆ, ಸರಕಾರಿ ಶಾಲೆಯ ಮಕ್ಕಳಿಗೆ ಉಚಿತ ಸಮವಸ್ತ್ರಗಳನ್ನು ವಿತರಿಸಲಾಯಿತು, ಈ ಸಂದರ್ಭದಲ್ಲಿ ಗ್ರಾಮದ ಬ್ರಹ್ಮಪುರಿ ಸಾಂಸ್ಕ್ರತಿಕ ಬಳಗದ ಕಾರ್ಯಾದ್ಯಕ್ಷರು ಮತ್ತು ಪಂಚಾಯತ ಸದಸ್ಯರೂ ಆಗಿರುವ ಮಂಜುನಾಥ ವಾಸಂಬಿ ಹಾಜರಿದ್ದು, ರೈತರು ಭೂಮಿಗೆ ಭೀಜ ಹಾಕುವ ಸಮಯ ಜೂನ ತಿಂಗಳು, ಹಾಗೆಯೇ ಮಕ್ಕಳಿಗೆ ಶಾಲೆಯಲ್ಲಿ ಅಕ್ಷರ ಬಿತ್ತುವುದು ಸಹ ಜೂನ ತಿಂಗಳು, ಜೂನ ತಿಂಗಳಲ್ಲಿ ಜಮೀನಿನಲ್ಲಿ ಬೀಜ ಬಿತ್ತಿದರೆ ಒಳ್ಳೆಯ ಫಸಲು ಬರಲಿದೆ, ಅದೇ ರೀತಿ ಮಕ್ಕಳಿಗೆ ಜೂನ ತಿಂಗಳಿನಲ್ಲಿ ಅಕ್ಷರ ಬಿತ್ತಿದರೆ ಒಳ್ಳೆಯ ಫಸಲು ಬರುವುದು ಎಂದರು, ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ಧಾರವಾಡ ಜಿಲ್ಲಾ ಅದ್ಯಕ್ಷರಾದ ಮಲ್ಲಪ್ಪ ಹೊಸಕೇರಿ ಮಾತನಾಡಿ, ಇದು ನಮ್ಮದು ಅಲ್ಪಸಹಾಯ, ಸಮಾಜಸೇವಾ ಮನೋಭಾವದಿಂದ ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನರವರ ಪ್ರೇರಣೆಯಿಂದ ನಾನು ಈ ವರ್ಷ ಈ ಒಂದು ಸಣ್ಣ ಕಾರ್ಯ ಮಾಡಿರುವೆ ಎಂದರು.
ಶಿಕ್ಷಕ ಎಲ್ ಐ ಲಕ್ಕಮ್ಮನವರ ಮುಖ್ಯ ಶಿಕ್ಷಕಿ ಗೀತಾ ದೊಡಮನಿ, ಬಿ ಎಂ ಸುತಾರ, ಎಲ್ಲಾ ಶಿಕ್ಷಕರು ಹಾಜರಿದ್ದು ಸಹಕರಿಸಿದರು.