ಸುಗಮ ಸಂಗೀತ ಕಚೇರಿಗೆ ಒದಗಿಸುವ ಅವಕಾಶಗಳನ್ನು ನೀಡುವ ಸಂಘ-ಸAಸ್ಥೆಗಳು ವಿರಳ, ಆ ನಿಟ್ಟಿನಲ್ಲಿ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಕಾರ್ಯ ಅಭಿನಂದನೀಯ
- ವಾಯಲಿನ ವಾದಕ ಪಂ. ವಾದಿರಾಜ ನಿಂಬರಗಿ
ಸುಗಮ ಸಂಗೀತ ಕಲಾವಿದರು ನಮ್ಮಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಆದರೆ ಅವರಿಗೆ ಬೇಕಾದ ಅವಕಾಶಗಳು ಕಡಿಮೆ. ವೇದಿಕೆ ಒದಗಿಸುವ ಅವಕಾಶಗಳನ್ನು ನೀಡುವ ಸಂಘ - ಸಂಸ್ಥೆಗಳು ವಿರಳ, ಆ ನಿಟ್ಟಿನಲ್ಲಿ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಕಳೆದ 17 ವರ್ಷದಿಂದ ಯುವ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಟ್ಟು ಅವರ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಕಾರ್ಯ ಅಭಿನಂದನೀಯ ಎಂದ ಖ್ಯಾತ ವಾಯ್‌ಲೀನ್ ವಾದಕರಾದ ಪಂ . ವಾದಿರಾಜ ನಿಂಬರಗಿ ಹೇಳಿದರು.
ಅವರು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ(ರಿ) ಧಾರವಾಡ ವತಿಯಿಂದ ಪ್ರತಿಷ್ಠಾನದ 17 ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡು ಸಂಗೀತ ಸಾಧಕ ದಂಪತಿಗಳಾದ ಡಾ. ಶ್ರೀಧರ ಕುಲಕರ್ಣಿ ಮತ್ತು ವಿದುಷಿ ಶೃತಿ ಕುಲಕರ್ಣಿ ಅವರಿಗೆ ಅಭಿನಂದನೆ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ಸಂಗೀತಕ್ಷೇತ್ರ ಎಲ್ಲ ವರ್ಗದವರನ್ನು ಗೌರವಿಸುತ್ತದೆ. ಅದರಲ್ಲಿ ಆಸಕ್ತಿಯಿಂದ ತೊಡಗಿಕೊಂಡವರನ್ನು ಮಾತ್ರ ತನ್ನ ಮಡಿಲಿಗೆ ಹಾಕಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಆಕಾಶವಾಣಿ ಉದ್ಗೋಷಕರಾದ ಡಾ.ಶಶಿಧರ ನರೇಂದ್ರ ಮಾತನಾಡಿ ಪ್ರತಿಷ್ಠಾನದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾದ ನಾನು ನಿರಂತರವಾಗಿ ಸಂಘಟನೆ ಮಾಡುತ್ತಾ ಸಾಹಿತ್ಯ, ಸಂಗೀತ, ಕಲಾಪ್ರಕಾರಗಳನ್ನು ಯುವ ಸಮುದಾಯಕ್ಕೆ ತಲುಪಿಸಿ ಉಳಿಸಿ ಬೆಳೆಸುವ ಕಾರ್ಯಮಾಡುತ್ತಿದೆ. ಅಲ್ಲದೆ ಸಾಧಕರನ್ನು ಗುರುತಿಸಿ ಗೌರವಿಸುವದರಿಂದ ಆ ಸಾಧಕರಿಗೆ ಅವರವರ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸುವುದು ಸಂತಸ. ಅಲ್ಲದೇ ಡಾ.ಶ್ರೀಧರ ಕುಲಕರ್ಣಿ ಮತ್ತು ಶೃತಿ ಕುಲಕರ್ಣಿ ಅವರನ್ನು ಅಭಿನಂದಿಸಿದ್ದು ಪ್ರತಿಷ್ಠಾನಕ್ಕೆ ಗೌರವ ಎಂದು ಹೇಳಿದರು.
ಖ್ಯಾತ ಸಂಗೀತಗಾರರಾದ ಮಲ್ಲಿಕಾರ್ಜುನ ತರ್ಲಘಟ್ಟಿಯವರು ಮಾತನಾಡಿ ಮನೋವಿಜ್ಞಾನ, ಸಂಗೀತ ಒಂದಕ್ಕೊAದು ಪೂರಕವಾಗಿವೆ. ಈ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಶ್ರೀಧರ ಕುಲಕರ್ಣಿಯವರನ್ನು ಗೌರವಿಸುತ್ತಿರುವುದು ಔಚಿತ್ಯಪೂರ್ಣವಾದ ಕಾರ್ಯವಾಗಿದೆ ಎಂದು ಹೇಳಿದರು.
ಖ್ಯಾತ ನ್ಯಾಯವಾದಿಗಳಾದ ಪ್ರಕಾಶ ಉಡಿಕೇರಿ ಮಾತನಾಡುತ್ತಾ ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಹಲವಾರು ಸಂಘ-ಸAಸ್ಥೆಗಳು ಹುಟ್ಟಿ ಮರೆಯಾದ ಉದಾಹರಣೆಗಳಿವೆ ಆದರೆ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಕಲಾ ಪ್ರತಿಷ್ಠಾನದ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಮಾತನಾಡಿ ಸಾಂಸ್ಕೃತಿಕವಾಗಿ ಭಾರತ ದೇಶ ಅತ್ಯಂತ ಶ್ರೀಮಂತವಾಗಿದೆ. ಈ ನಿಟ್ಟಿನಲ್ಲಿ ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಕಾರ್ಯ ನಾಡಿನ ಶ್ರೀಮಂತಿಕೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಪ್ರತಿಷ್ಠಾನದ ಗೌರವವನ್ನು ಸ್ವೀಕರಿಸಿದ ಡಾ. ಶ್ರೀಧರ ಕುಲಕರ್ಣಿ ಮಾತನಾಡಿ, ಗುರುಗಳ ಆಶೀರ್ವಾದ ಇರದೇ ಇದ್ದರೆ ನಾವು ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ, ಎಂದು ತಮ್ಮ ಎಲ್ಲ ಗುರುಗಳನ್ನು ಸ್ಮರಿಸಿದರು ಮತ್ತು ಈ ಜಗತ್ತಿನಲ್ಲಿ ಸಂಗೀತ ಇನ್ನೂ ಜೀವಂತವಾಗಿರುವುದಕ್ಕೆ ಪಂ ಪುಟ್ಟರಾಜ ಗವಾಯಿಗಳ ಮತ್ತು ಪಂಚಾಕ್ಷರ ಗವಾಯಿಗಳ ಕೊಡುಗೆ ಅನನ್ಯವಾದುದು. ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ನಿರ್ದೇಶಕರಾದ ಶ್ರೀ ಕುಮಾರ ಬೆಕ್ಕೇರಿ, ಪತ್ರಕರ್ತರಾದ ಬಸವರಾಜ ಆನೆಗುಂದಿ, ಸಮಾಜಸೇವಕ ಶ್ರೀ ಸುರೇಶ ಭಜಂತ್ರಿ ಮಾತನಾಡಿದರು ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಕೆ.ಎಚ್.ನಾಯಕ ವಹಿಸಿ ಮಾತನಾಡಿದರು.
ಸಂಗೀತ ಸಾಧಕ ದಂಪತಿಗಳಾದ ಡಾ. ಶ್ರೀಧರ ಕುಲಕರ್ಣಿ ಮತ್ತು ವಿದುಷಿ ಶೃತಿ ಕುಲಕರ್ಣಿ ಅವರು ಅಭಿನಂದನೆ ಸ್ವೀಕರಿಸಿದ ನಂತರ ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಇವರಿಗೆ ಬಸವರಾಜ ಹಿರೇಮಠ ಹರ‍್ಮೋನಿಯಂ ಸಾಥ ಮತ್ತು ರಾಜಕುಮಾರ ತಬಲಾ ಸಾಥ ನೀಡಿದರು.
ಕೋಶಾಧ್ಯಕ್ಷರಾದ ಪ್ರೇಮಾನಂಧ ಶಿಂಧೆ ಪ್ರಾರ್ಥಿಸಿದರು. ಉಪಾಧ್ಯಕ್ಷರಾದ ಸುರೇಶ ಬೆಟಗೇರಿ ನಿರೂಪಿಸಿದರು. ಪ್ರಧಾನಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕ ಶಿವಾನಂದ ಹೂಗಾರ ವಂದಿಸಿದರು.
ಇದೇ ಸಂಧರ್ಭದಲ್ಲಿ ಬಡವಿದ್ಯಾರ್ಥಿನಿ ಕು.ಐಶ್ವರ್ಯ ದ್ಯಾಮಣ್ಣ ಬಸನಕೊಪ್ಪ ಅವರಿಗೆ ಶಿಕ್ಷಣಕ್ಕೆ ಧನಸಹಾಯ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶ್ರೀ ಚನ್ನಬಸಪ್ಪ ಗೋಕುಲ, ಸಾಂಸ್ಕೃತಿಕಲೋಕದ ನಿರ್ದೇಶಕ ಸೈಯದ ಎ.ಎಮ್, ಮಲ್ಲಣ್ಣ ಸಾಧನಿ, ಮಹಿಳಾಮಂಡಳದ ಅಧ್ಯಕ್ಷರಾದ ಸುಜಾತಾ ಸಾಂಬ್ರಾಣಿ, ಕಾರ್ಯದರ್ಶಿ ವಿಜಯಲಕ್ಷಿö್ಮ ಸಾಂಬ್ರಾಣಿ, ಭಾರತಿ ಸಾಂಬ್ರಾಣಿ, ವೀರೂಪಾಕ್ಷ ಗಾಮನಗಟ್ಟಿ, ಮಲ್ಲೇಶ ಸಾಂಬ್ರಾಣಿ, ಮಹಾಂತೇಶ ನರೇಗಲ್ಲ, ಕಿರಣ ಸಿದ್ದಾಪೂರ,
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ : 9945564891