ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸನ್ಮಾನಿಸಿ ಗೌರವಿಸಿದ ಮೇಯರ್ ಅಂಚಟಗೇರಿ

ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ  ಸನ್ಮಾನಿಸಿ ಗೌರವಿಸಿದ ಮೇಯರ್ ಅಂಚಟಗೇರಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ಪ್ರತಿನಿಧಿಸುವ ವಾರ್ಡ  ಕಮಲಾಪುರದಲ್ಲಿ ಬಡ ದಂಪತಿಗಳ ಮಗಳು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾಳೆ. 

ಕಮಲಾಪೂರದ  ನಿವಾಸಿಗಳಾದ  ಶಿವಲಿಂಗಪ್ಪ ಅಂಗಡಿ ರವರ, ಸುಪುತ್ರಿ ಕು. ಸಂಜನಾ ಶಿವಲಿಂಗಪ್ಪ ಅಂಗಡಿ ರವರು, ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 621 ಅಂಕಗಳನ್ನು ಗಳಿಸುವ ಮೂಲಕ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ಕರ್ನಾಟಕಕ್ಕೆ 5 ನೇ ಸ್ಥಾನವನ್ನು ಗಳಿಸಿ, ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರುವಲ್ಲಿ ಯಶಸ್ವಿಯಾಗಿದ್ದಾಳೆ. 

ವಿದ್ಯಾರ್ಥಿನಿ ತಂದೆ ಒಬ್ಬ ಸಾಮಾನ್ಯ ಬಡಕುಟುಂಬದಲ್ಲಿ ಇದ್ದು,  ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಾ ಮಕ್ಕಳಿಗೆ ವಿದ್ಯೆಯನ್ನು ಕೊಟ್ಟಿದ್ದಾರೆ. 
  ತಂದೆ-ತಾಯಿಯರ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಪಡೆಯುವುದರ ಮೂಲಕ ಕು. ಸಂಜನಾ ಅಂಗಡಿ ರವರು ತಕ್ಕ ಪ್ರತಿಫಲವನ್ನು ನೀಡಿದ್ದಾಳೆ. 

 ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು, ಅವರ ನಿವಾಸಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯನ್ನು ಆತ್ಮೀಯವಾಗಿ ಅಭಿನಂದಿಸಿ, ಸನ್ಮಾನಿಸಿದರು. ಅವಳ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಬೇಕಾಗುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ ಎಂದರು. 
ಈ ಸಂದರ್ಭದಲ್ಲಿ  ಬಸವರಾಜ ಬಾಳಗಿ ರವರು,  ಮಲ್ಲೇಶ ಶಿಂಧೆ ರವರು,  ಸೋಮನಗೌಡ ಪಾಟೀಲ,  ರಾಜು ಕಮಾಟೆ ರವರು, ಮುರಗೇಶ ಹೊನ್ನಕೇರಿ ರವರು, ಸೇರಿದಂತೆ ಬಾಳಗಿ ಓಣಿಯ ಸಮಸ್ತ ಗುರುಹಿರಿಯರು ಉಪಸ್ಥಿತರಿದ್ದರು.

ನವೀನ ಹಳೆಯದು

نموذج الاتصال