ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಧಾರವಾಡದಲ್ಲಿ "ಭಾವ ಸ್ಪಂಧನ" ಕವನ ಸಂಕಲನ ಪುಸ್ತಕ ಬಿಡುಗಡೆಯ ಕಾರ್ಯಕ್ರಮ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಧಾರವಾಡದಲ್ಲಿ "ಭಾವ ಸ್ಪಂಧನ"  ಕವನ ಸಂಕಲನ ಪುಸ್ತಕ  ಬಿಡುಗಡೆಯ ಕಾರ್ಯಕ್ರಮ 
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡದಲ್ಲಿ ಶ್ರೀಮತಿ ಸುಲೋಚನಾ ಅಪ್ಪಾಸಾಹೇಬ ಮಾಲಿಪಾಟೀಲ ಅವರ ಚೊಚ್ಚಲ ಕವನ ಸಂಕಲನ ಡಾ. ಶಶಿಕಾಂತ ಪಟ್ಟಣ ಸರ್ ಅವರ ಕೈಯಿಂದ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಜರುಗಿತು. 
ಪಟ್ಟಣ ಸರ್ ಕನ್ನಡ ಸಾಹಿತ್ಯದಲ್ಲಿ ಜಾನಪದ ಸಾಹಿತ್ಯದ ಸೊಗಡು ಕಾವ್ಯದ ಮೂಲಕ ಮತ್ತು ಶರಣ ಸಾಹಿತ್ಯದಲ್ಲಿ ಶರಣರು ತಮ್ಮ ವಚನಗಳಲ್ಲಿ ಶರಣ ಸಂಬಂಧಗಳನ್ನು ಯಾವ ರೀತಿ ಬೆಸೆದುಕೊಂಡಿದ್ದರು ಎಂಬುದರ ಬಗ್ಗೆ ಬಹಳ ಸುಂದರವಾಗಿ ವಿವರಿಸಿದ್ದಾರೆ. ಗುಂಜಾಳ ಸರ್ ಕವನ ಸಂಕಲದಲ್ಲಿನ ಕೆಲವು ಕವನಗಳನ್ನು ತಮ್ಮ ನಿಜ ಜೀವನದ ಸಂದರ್ಭಗಳಿಗೆ ಸ್ಪಂದಿಸಿದ ಭಾವನೆಗಳನ್ನು ಬಿಚ್ಚಿಟ್ಟರು. ಇನ್ನು ಲಿಂಗರಾಜ ಅಂಗಡಿ ಸರ್ ಅವರು ಸಾಹಿತ್ಯದಲ್ಲಿ ಸಾಗುತ್ತಿರುವ ಎಲ್ಲ ಲೇಖಕ, ಕವಿ ಮನಸ್ಸುಗಳಿಗೆ ನಮ್ಮ ಕನ್ನಡ ಸಾಹಿತ್ಯ ಭವನದ ಬಾಗಿಲು ಸದಾ ತೆರೆದಿರುತ್ತದೆ. ಕನ್ನಡ ಸಾಹಿತ್ಯದ ವಿಷಯದಲ್ಲಿ ನಾನು ನನ್ನ ಕರ್ತವ್ಯವನ್ನು ಎಲ್ಲರ ಮನ ಮುಟ್ಟುವಂತೆ ಮಾಡುತ್ತಿರುವೆ ಎಂದು ತಿಳಿಸಿದರು. ಶರಣಮ್ಮ ಗೊರೆಬಾಳ್ ಮೇಡಂ ಅವರು ಕವನ ಸಂಕಲನದಲ್ಲಿನ ಕೆಲವು ಕವನಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮೇಘಾ ಹುಕ್ಕೇರಿಯವರ ನಿರೂಪಣೆಯಲ್ಲಿ ಕಾರ್ಯಕ್ರಮ ಬಹಳ ಸುಂದರವಾಗಿ ಸಾಂಗಗೊಂಡಿತು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ : 9945564891
ನವೀನ ಹಳೆಯದು

نموذج الاتصال