ವೀರಶೈವ ಲಿಂಗಾಯತದ* *ನವ ದಂಪತಿಗಳಿಗೆ**ಧಾರ್ಮಿಕ ಮತ್ತು ಕೌಟುಂಬಿಕ ಸಂಸ್ಕಾರ ಶಿಬಿರ ಆಯೋಜನೆ;

*ವೀರಶೈವ ಜಂಗಮ ಸಂಸ್ಥೆ*

*ವೀರಶೈವ ಲಿಂಗಾಯತದ* *ನವ ದಂಪತಿಗಳಿಗೆ*
*ಧಾರ್ಮಿಕ ಮತ್ತು ಕೌಟುಂಬಿಕ ಸಂಸ್ಕಾರ ಶಿಬಿರ ಆಯೋಜನೆ; 

ಆಸಕ್ತರು ಜೂನ್ 15 ರೊಳಗೆ ಅರ್ಜಿ ಸಲ್ಲಿಸಬೇಕು:*
ಧಾರವಾಡ, ಮೇ.23:  ನೂತನ ದಂಪತಿಗಳ ಸುಖ ಸಂಸಾರಕ್ಕಾಗಿ ಮತ್ತು ಕುಟುಂಬ ಜೀವನ ಆನಂದಿಸಲು ಉತ್ತಮ ಮಾರ್ಗದರ್ಶನ ಮತ್ತು ಜೀವನ ಮೌಲ್ಯಗಳನ್ನು ತಿಳಿಸಲು ಧಾರವಾಡ ವೀರಶೈವ ಜಂಗಮ ಸಂಸ್ಥೆಯು,  ಈ ವರ್ಷ ಮದುವೆ ಆಗಿರುವ ವೀರಶೈವ ಲಿಂಗಾಯತ ನವ ದಂಪತಿಗಳಿಗೆ ಒಂದು ದಿನದ ಧಾರ್ಮಿಕ ಮತ್ತು ಕೌಟುಂಬಿಕ ಮೌಲ್ಯಗಳ ಸಂಸ್ಕಾರ ಶಿಬಿರವನ್ನು ಬರುವ ಜೂನ್ ತಿಂಗಳಲ್ಲಿ ಆಯೋಜಿಸುತ್ತಿದೆ.

ಸಂಸಾರ ಸುಖಮಯವಾಗಿ ಮತ್ತು ಕುಟುಂಬದೊಂದಿಗೆ ಆನಂದಮಯವಾಗಿ ಸಾಗಲು, ಧಾರ್ಮಿಕ ಆಚರಣೆ ಮತ್ತು ಸರ್ಕಾರದ ಸವಲತ್ತು, ಕಾಯ್ದೆ-ಕಾನೂನುಗಳ ಬಗ್ಗೆ ಸಾಮಾನ್ಯ ಜ್ಞಾನ, ಆರೋಗ್ಯ ಕಾಳಜಿ, ಮನೆತನದ ಸಂಸ್ಕೃತಿ, ಸಂಸ್ಕಾರ, ಹಬ್ಬ ಹರಿದಿನಗಳ ಆಚರಣೆ ಮಹತ್ವ, ವೀರಶೈವ ಧರ್ಮದ ಆಚಾರ, ವಿಚಾರಗಳ ಬಗ್ಗೆ  ನವ ದಂಪತಿಗಳಿಗೆ ತಿಳಿಸುವುದು ಮತ್ತು ಪುನರ್ ಮನನ ಮಾಡುವುದು ಶಿಬಿರದ ಮುಖ್ಯ ಉದ್ದೇಶವಾಗಿದೆ. ಮತ್ತು ಇಂದಿನ ದಿನಗಳಲ್ಲಿ ಇದು ಅವಶ್ಯವೂ ಇದೆ.

ಈ ಹಿನ್ನಲೆಯಲ್ಲಿ ಜಂಗಮ ಸಂಸ್ಥೆಯು ಬರುವ ಜೂನ್ ತಿಂಗಳಲ್ಲಿ ಧಾರವಾಡ ನಗರದದಲ್ಲಿ ನವದಂಪತಿಗಳಿಗಾಗಿ ಒಂದು ದಿನದ ವಿಶೇಷ ಶಿಬಿರ ಆಯೋಜಿಸಲು ನಿರ್ಧರಿಸಿದೆ.

*ಶಿಬಿರದಲ್ಲಿ ಹುಬ್ಬಳ್ಳಿ ತಾಲೂಕಿನ ಸುಳ್ಳ ಮತ್ತು ಅಮ್ಮಿನಭಾವಿ ಪಂಚಗೃಹ ಹಿರೇಮಠಗಳ ಶಿವಾಚಾರ್ಯರು ಮತ್ತು ಶಿರಕೋಳ ಹಿರೇಮಠದ ಪಟ್ಟಾಧ್ಯಕ್ಷರು  ಧಾರ್ಮಿಕ ಸಂಸ್ಕಾರ, ವೀರಶೈವ ಆಚಾರಣೆಗಳ ಕುರಿತು ಉಪದೇಶಾಮೃತ ನೀಡುವರು.*
ಮತ್ತು  *ಆಪತ್ಕಾಲದಲ್ಲಿ ಉಚಿತ ಕಾನೂನು, ಪೊಲೀಸ್ ನೆರವು ಪಡೆಯುವ ಕುರಿತು ಮತ್ತು ನವ ವಿವಾಹಿತರ ಆರೋಗ್ಯ ರಕ್ಷಣೆ, ಸಕಾಲಕ್ಕೆ ಮಕ್ಕಳ ಹೊಂದುವುದು, ಮಕ್ಕಳ ಪಾಲನೆ ಪೊಷಣೆ, ಕುಟುಂಬ ನಿರ್ವಹಣೆ, ಸರಕಾರಿ ಯೋಜನೆಗ-ಸವಲತ್ತುಗಳ ಕುರಿತು*  ಸರಕಾರದ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಅನುಭವಿ ಹಿರಿಯ ವಿಷಯ ತಜ್ಞರು ಮಾಹಿತಿ ನೀಡಲಿದ್ದಾರೆ.

*ಶಿಬಿರದಲ್ಲಿ ಭಾಗವಹಿಸುವ ನವದಂಪತಿಗಳಿಗೆ ಪೂಜ್ಯರು, ಶಿವಾಚಾರ್ಯರು ಆಶಿರ್ವದಿಸಿ ಮಂತ್ರಾಕ್ಷತೆ ನೀಡಲಿದ್ದಾರೆ. ಮತ್ತು ಮುತ್ತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮವು ಇರುತ್ತದೆ.*

 2023 ನೇ ಸಾಲಿನಲ್ಲಿ ಮದುವೆ ಆಗಿರುವ ನವ ದಂಪತಿಗಳು ಮತ್ತು ಆಸಕ್ತ 2022 ರಲ್ಲಿ ವಿವಾಹ ಆಗಿರುವ ದಂಪತಿಗಳು ಸಹ  ತಮ್ಮ ಹೆಸರನ್ನು ನೋಂದಾಯಿಸಬಹುದು.  
 
*ಆಸಕ್ತರು  ಬರುವ ಜೂನ್ 15, 2023 ರೊಳಗಾಗಿ ತಮ್ಮಹೆಸರು ನೋಂದಾಯಿಸಿಕೊಳ್ಳಬೇಕು. ಮತ್ತು  ತಮ್ಮ ವಿವಾಹದ ಲಗ್ನಪತ್ರಿಕೆ ಅಥವಾ ವಿವಾಹ ನೋಂದಣಿ ಪತ್ರದ ಝರಾಕ್ಸ ಪ್ರತಿ ಹಾಗೂ ದಂಪತಿಗಳ ವಿವಾಹದ ಒಂದು ಪೋಟೊವನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಡಾ.ಎಸ್.ಎಂ.ಹಿರೇಮಠ, ವೀರಸನ್ನಿಧಿ, ದಾನಮ್ಮ ನಿಲಯ, ಪ್ಲಾಟ್- 03, ಭಾವಿಕಟ್ಟಿ ಪ್ಲಾಟ್ ಮುಂಭಾಗ, ಶ್ರೀನಗರ, ಧಾರವಾಡ - 03 ಇಲ್ಲಿಗೆ*
ಅಥವಾ
 *ಶ್ರೀ ಪ್ರಭು ಕೆಂಡದಮಠ, ಪ್ರಧಾನ ಕಾರ್ಯದರ್ಶಿ, ವೀರಶೈವ ಜಂಗಮ ಸಂಸ್ಥೆ, ಪರಿಸರಭವನದ ಹತ್ತಿರ, ಶ್ರೀ ಸದ್ಗುರು ನಿಲಯ , ಪ್ಲಾಟ್- 12, 5 ನೇ ಕ್ರಾಸ, ಎಸ್.ಕೆ.ಎಸ್. ಕಾಲೋನಿ ಧಾರವಾಡ ಇಲ್ಲಿಗೆ ತಲುಪಿಸಬಹುದು*

 *ಹೆಚ್ಚಿನ ಮಾಹಿತಿ ಮತ್ತು ಹೆಸರು ನೊಂದಣಿಗಾಗಿ* *ಮೋಬೈಲ್ - 9538076619,*
*94825 53883*
(ಪ್ರಭು ಕೆಂಡದಮಠ) 
*63601 15512*
 (ಬಸಯ್ಯ ಹಿರೇಮಠ),  
*80951 23231*
( ಸುಮಿತಾ ಹಿರೇಮಠ), 
*94811 28911* ( ಪಿ.ಎಸ್.ಹಿರೇಮಠ), 
*94831 24149* (ಶರಣಬಸಯ್ಯ ಕುರ್ತಕೋಟಿ) ಮತ್ತು *99017 87616* ( ಸಿ.ಸಿ.ಹಿರೇಮಠ) ಗಳನ್ನು ಸಂಪರ್ಕಿಸಬಹುದೆಂದು *ಸಂಸ್ಥೆಯ ಉಪಾಧ್ಯಕ್ಷರಾದ ಮೃತ್ಯುಂಜಯ ಎಸ್.ಕೋರಿಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.*
Contact: (M) 9945564891
ನವೀನ ಹಳೆಯದು

نموذج الاتصال