ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ--- ಬಸವರಾಜ ಗುರಿಕಾರ ಕರೆ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ--- ಬಸವರಾಜ ಗುರಿಕಾರ ಕರೆ
      ಧಾರವಾಡ 2 : ಕಾಂಗ್ರೆಸ್ ಪಕ್ಷ ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಸಂಧರ್ಭದಲ್ಲಿ ರಾಜ್ಯದ ಶಿಕ್ಷಕರುಗಳಿಗೆ, ನೌಕರರಿಗೆ ಬಹಳಷ್ಟು ಸಂಧರ್ಭಗಳಲ್ಲಿ ಅವರ ಸಮಸ್ಯೆಗಳಿಗೆ, ಬೇಡಿಕೆಗಳನ್ನು ಈಡೇರಿಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ ಸರ್ಕಾರಗಳಿಗೆ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷ ನೌಕರರ ಹಿತ ಕಾಯುವಲ್ಲಿ ಬದ್ದತೆ ಇದ್ದು, ಈ ಬಾರಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೆ.ಪಿ.ಸಿ.ಸಿ ಶಿಕ್ಷಕರ ಘಟಕದ ಅಧ್ಯಕ್ಷರಾದ ಬಸವರಾಜ ಗುರಿಕಾರ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಇಂದು ಹೇಳಿಕೆ ನೀಡಿರುವ ಅವರು,   6 ನೇ ವೇತನ ಆಯೋಗದ ರಚನೆಯ ಮುಖಾಂತರ ಆಯೋಗದ ಶಿಫಾರಸ್ಸು ಮಾಡಿದ ಎಲ್ಲಾ ಅಂಶಗಳನ್ನು ಕಾಂಗ್ರೆಸ್ ಪಕ್ಷದ ಸರ್ಕಾರ 2018 ರಲ್ಲಿ ಜಾರಿಗೆ ತಂದಿದೆ, 6 ನೇ ವೇತನ ಆಯೋಗದ ಶಿಫಾರಸ್ಸು ಜಾರಿಗಾಗಿ 10 ,600 ಕೋಟಿ ರೂಗಳನ್ನು ವಿನಿಯೋಗಿಸಿದೆ, ವಿಶೇಷವಾಗಿ ಶಿಕ್ಷಕರುಗಳ ವಿಶೇಷ ವೇತನವನ್ನು ಮೂಲ ವೇತನಲ್ಲಿ ಅನುಷ್ಠಾನಗೊಳಿಸಿದ್ದರಿಂದ ಪ್ರತಿ ಶಿಕ್ಷಕರುಗಳಿಗೆ ಕನಿಷ್ಠ 2 ವೇತನ ಬಡ್ತಿಗಳು ಹೆಚ್ಚುವರಿಯಾಗಿ ದೊರೆತಿವೆ. ಇದರಿಂದ ಶಿಕ್ಷಕರುಗಳಿಗೆ ಗರಿಷ್ಠ ವೇತನ ಹೆಚ್ಚಳವಾಗಿದೆ. ಆರನೇಯ ವೇತನ ಆಯೋಗದ ರಚನೆ ಹಾಗೂ ಅದರ ಶಿಫಾರಸ್ಸುಗಳನ್ನ ತ್ವರಿತ ಗತಿಯಲ್ಲಿ ಅನುಷ್ಠಾನ ಮಾಡಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ಸಲ್ಲುತ್ತದೆ ಎಂದಿದ್ದಾರೆ.
ಬಿ.ಜೆ.ಪಿ ಸರ್ಕಾರವು ನೂತನ ಪಿಂಚಣಿ ಯೋಜನೆ ಜಾರಿಗೆ ತಂದಿದ್ದು ಇದನ್ನು ಈ ಯೋಜನೆಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಭರವಸೆಯನ್ನು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಠ ಪಡಿಸಿದೆ. ಇದಲ್ಲದೆ ಸರ್ಕಾರದಲ್ಲಿ ಜಾರಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದು ಗುತ್ತಿಗೆ ಆದಾರದ ಕೆಲಸ ಮಾಡುತ್ತಿರುವ ನೌಕರರನ್ನು ಕಾಯಂ ಗೊಳಿಸುವುದು, ಅಂಗನವಾಡಿ, ಬಿಸಿ ಊಟದ ಆಶಾ ಕಾರ್ಯಕರ್ತರ ಗೌರವ ಧನ ಹೆಚ್ಚಳ, ಅನುದಾನಿತ ಶಾಲೆ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ಮಾಡುತ್ತಿರುವ ಶಿಕ್ಷಕರು ಮತ್ತು ಭೋಧಕೇತರರಿಗೆ ಕಲ್ಯಾಣಕ್ಕಾಗಿ ಸೇವಾ ಭದ್ರತೆಗಾಗಿ ವಿಶೇಷ ಆವರ್ತನಾ ನಿಧಿ ಸ್ಥಾಪನೆ ಹಾಗೂ ಅವೈಜ್ಞಾನಿಕ ರಾಷ್ಟಿçÃಯ ಶಿಕ್ಷಣ ನೀತಿ ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿ ಹೊಂದುವುದು ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಭತ್ಯೆ ನೀಡುವ ಬಗ್ಗೆ ಭರವಸೆ ನೀಡಲಾಗಿದೆ ಎಂದು ಬಸವರಾಜ ಗುರಿಕಾರ ಹೇಳಿದ್ದಾರೆ.
ಕಾಂಗ್ರೆಸ ಪಕ್ಷ ಶಿಕ್ಷಕರ, ನೌಕರರ, ಪದವೀಧರರ ಬೇಕು-ಬೇಡಿಕೆಗಳನ್ನು ಈಡೇರಿಸಲು ಬದ್ಧವಾಗಿದ್ದು ಮೇ 10 ರಂದು ಜರುಗುವ ವಿಧಾನ ಸಭಾ ಚುನಾವಣೆಯಲ್ಲಿ ಎಲ್ಲ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಶಿಕ್ಷಕರ ಘಟಕದ ರಾಜ್ಯಾಧ್ಯಕ್ಷರಾದ ಬಸವರಾಜ ಗುರಿಕಾರ ಮನವಿ ಮಾಡಿದ್ದಾರೆ.

ನವೀನ ಹಳೆಯದು

نموذج الاتصال