*ಶಾಸಕ ಅಮೃತ ದೇಸಾಯಿ ಪರ ಪತ್ನಿ ಪ್ರಿಯಾ ದೇಸಾಯಿ ಭರ್ಜರಿ ಪ್ರಚಾರ*
ಧಾರವಾಡ: ಶಾಸಕ ಅಮೃತ ದೇಸಾಯಿಯವರ ಪರವಾಗಿ ಅವರ ಪತ್ನಿ ಪ್ರಿಯಾ ಅಮೃತ ದೇಸಾಯಿಯವರು ಧಾರವಾಡ ತಾಲೂಕಿನ ಜಿರಗಿವಾಡ ಹಾಗೂ ಕಲ್ಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಮಂಗಳವಾರ ಭರ್ಜರಿ ಪ್ರಚಾರ ನಡೆಸಿದರು.
ಗ್ರಾಮದ ಪ್ರತಿ ಮನೆ-ಮನೆಗೆ ಹೋಗಿ ಮಹಿಳಾ ಮತದಾರರನ್ನು ಭೇಟಿಯಾಗಿ, ಶಾಸಕರಾದ ಅಮೃತ ದೇಸಾಯಿಯವರು ಐದು ವರ್ಷದ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಯೋಜನೆಗಳ ಮಾಹಿತಿಯುಳ್ಳ ಕರ ಪತ್ರ ಹಂಚಿದರು.
ಈ ವೇಳೆ ಗ್ರಾಮಸ್ಥರನ್ನು ಉದ್ದೇಶಿಸಿ ಪ್ರಿಯಾ ಅಮೃತ ದೇಸಾಯಿಯವರು ಮಾತನಾಡಿ, ಉತ್ತಮ ರಸ್ತೆ, ಕುಡಿಯುವ ನೀರು, ರೈತರ ಖಾತೆಗೆ ನೇರವಾಗಿ ಬೆಳೆ ಪರಿಹಾರ ಸಂದಾಯ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರ ಮಾದರಿ ಆಡಳಿತ ನೀಡಿದೆ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಧಾರವಾಡ ಕ್ಷೇತ್ರದಲ್ಲಿ ಈ ಮೊದಲು ನಡೆಯುತ್ತಿದ್ದ ಮಟಕಾ, ಜೂಜಾಟ, ಗುಂಡಾಗಿರಿಯಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಸಂಪೂರ್ಣ ಬಂದ್ ಮಾಡಿಸಲಾಗಿದೆ. ಅದೇ ರೀತಿಯಲ್ಲಿ ಕ್ಷೇತ್ರದಲ್ಲಿ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಹಾಕುವ ಮೂಲಕ, ಶಾಂತಿಯುತ ವಾತಾವರಣ ಕಾಪಾಡಿಕೊಂಡು ಹೋಗಲು ಮೇ 10 ರಂದು ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಅಮೃತ ದೇಸಾಯಿಯವರಿಗೆ ಮತಹಾಕುವ ಮೂಲಕ ಬೆಂಬಲ ನೀಡಬೇಕು. ಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತಂದು, ಮಾದರಿ ಕ್ಷೇತ್ರವನ್ನಾಗಿಸುವುದು ಶಾಸಕರ ಪ್ರಮುಖ ಗುರಿಯಾಗಿದೆ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಟ್ಟರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಚೆನ್ನವ್ವ ಹೊಂಗಲ್, ಮಲ್ಲವ್ವ ಹುಲ್ಮನಿ, ಶಾಂತವ್ವ ಪೂಜಾರ್, ಶಾಂತವ್ವ ಸಂಗೋಜಿ, ಗಿರಿಜಮ್ಮ ಕುರುಬಟ್ಟಿ, ಸುಜಾತ ಹಸರ್ಗಣಿ, ಉಡಚವ್ವ ತಳವಾರ್, ಅಶ್ವಿನಿ ದಂಡಿನ್ ಪಾಲ್ಗೊಂಡಿದ್ದರು ಇದ್ದರು.
ಬಾಕ್ಸ್...
ಕಳೆದ ಎರಡು ತಿಂಗಳಿಂದ ಶಾಸಕ ಅಮೃತ ದೇಸಾಯಿಯವರ ಪರ ಪ್ರಚಾರ ನಡೆಸುತ್ತಿರುವ ಪತ್ನಿ ಪ್ರಿಯಾ ದೇಸಾಯಿಯವರಿಗೆ ಕ್ಷೇತ್ರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಮಹಿಳೆಯರು ಪ್ರೀತಿಯಿಂದ ಅವರನ್ನು ಭರಮಾಡಿಕೊಳ್ಳುತ್ತಿದ್ದಾರೆ.