*ಧಾರವಾಡ ಗ್ರಾಮೀಣ ಕ್ಷೇತ್ರದ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿದ ಶಾಸಕ ಅಮೃತ ದೇಸಾಯಿ*

*ಧಾರವಾಡ ಗ್ರಾಮೀಣ ಕ್ಷೇತ್ರದ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿದ ಶಾಸಕ ಅಮೃತ ದೇಸಾಯಿ*
ಧಾರವಾಡ: 2018ರ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಸಚಿವ ವಿನಯ್ ಕುಲಕರ್ಣಿ ಅವರನ್ನೇ ಸೋಲಿಸಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದ ಅಮೃತ ದೇಸಾಯಿ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಹುರಿಯಾಳಾಗಿ ಮತ್ತೆ ಕಣಕ್ಕಿಳಿದಿದ್ದಾರೆ. 

ಈ ವರ್ಷ ಕೂಡ ಅಮೃತ ದೇಸಾಯಿ ಅವರು ತಮ್ಮ ಸಾಂಪ್ರದಾಯಿಕ ಎದುರಾಳಿ ವಿನಯ್ ಕುಲಕರ್ಣಿ ಅವರ ವಿರುದ್ಧವೇ ಚುನಾವಣೆಗೆ ಸ್ಪರ್ಧಿಸಿದ್ದು, ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. 

ಅಮೃತ ದೇಸಾಯಿ ಅವರ ಧರ್ಮಪತ್ನಿ ಪ್ರಿಯಾ ದೇಸಾಯಿ ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದು, ಅಮೃತ ದೇಸಾಯಿ ಕೂಡ ಧಾರವಾಡ ಗ್ರಾಮೀಣ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಅಪಾರ ಜನಬೆಂಬಲದೊಂದಿಗೆ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಭಾನುವಾರ ಗುಳೇದಕೊಪ್ಪ, ವೆಂಕಟಾಪುರ ಹಾಗೂ ಮದಿಕೊಪ್ಪ ಗ್ರಾಮಗಳಲ್ಲಿ ಅಮೃತ ದೇಸಾಯಿ ಅವರು ಬಿರುಸಿನ ಪ್ರಚಾರ ನಡೆಸಿದರು. ಈ ಗ್ರಾಮಗಳಲ್ಲಿ ಅಮೃತ ದೇಸಾಯಿ ಅವರಿಗೆ ಅಪಾರ ಜನಬೆಂಬಲ ವ್ಯಕ್ತವಾಯಿತು. ಕಳೆದ ಐದು ವರ್ಷಗಳಲ್ಲಿ ಅಮೃತ ದೇಸಾಯಿ ಅವರು ಮಾಡಿದ ಪ್ರಗತಿ ಕಾರ್ಯಗಳ ಕರಪತ್ರವನ್ನು ಸ್ವತಃ ಅಮೃತ ದೇಸಾಯಿ ಅವರೇ ಗ್ರಾಮಸ್ಥರಿಗೆ ವಿತರಣೆ ಮಾಡಿ, ಈ ಬಾರಿಯೂ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಒಟ್ಟಾರೆ ಧಾರವಾಡ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರು ಅಬ್ಬರದ ಪ್ರಚಾರ ನಡೆಸಿದ್ದು, ಎ.18 ರಂದು ಅಪಾರ ಜನಬೆಂಬಲದೊಂದಿಗೆ ತಮ್ಮ ನಾಮಪತ್ರ ಕೂಡ ಸಲ್ಲಿಸಲಿದ್ದಾರೆ.

ಬೂತ ಅಧ್ಯಕ್ಷರಾದ ಶ್ರೀ ಬಸನಗೌಡ ಪಾಟಿಲ& ಮಾದೆವಪ್ಪ ದಂಡಿನ , ಮಹಾಂತೆಶ  ಹವಾಲ್ದಾರ್ ,ಗೌಡಪ್ಪಗೌಡ ಪಾಟಿಲ,ಚಂದ್ರಗೌಡ ಪಾಟಿಲ ಬಸವರಾಜ, ದುರಗಪ್ಪ ಡೊಕ್ಕಣ್ಣವರ ಹವಾಲ್ದಾರ್.ಸಂಗಮೆಶ ಮಂಗೊಜಿ ಮಲಿಕಾರ್ಜನ ಗೊಕಂವಿ,ನಾರಾಯಣ ಜಾಧವ  ಗ್ರಾಮದ ಹಿರಿಯರು ಅಮೃತ ದೇಸಾಯಿ ಗೆಳೆಯರ ಬಳಗದ ಯುವ ಮಿತ್ರರು
ನವೀನ ಹಳೆಯದು

نموذج الاتصال