ಧಾರವಾಡ IIT ಪ್ರವೇಶ ನೇಮಕಾತಿಯಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಕುರಿತು.
ಧಾರವಾಡದಲ್ಲಿ ಪ್ರಾರಂಭವಾಗಿರುವ IIT (Indian Institute Of Technology) ಯ ಪ್ರವೇಶ ನೇಮಕಾತಿಯಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವಂತೆ ಕರ್ನಾಟಕ ನವನಿರ್ಮಾಣ ಸೇನೆ ಮನವಿ ಮಾಡಿಕೊಳ್ಳುತ್ತದೆ.
೨೦೧೬ ರಲ್ಲಿ ಈ ಸಂಸ್ಥೆ ಧಾರವಾಡದಲ್ಲಿ ನೂತನವಾಗಿ ಕಾರ್ಯಾರಂಭ ಮಾಡಿದಾಗ ಅಂದಿನ ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್ ಅವರು ವಿದ್ಯಾರ್ಥಿಗಳಿಗೆ ಶೇಕಡಾ ೨೫% ಪ್ರತಿಶತ ಮೀಸಲಾತಿ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದರು.ಅಂದಿನ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್ ಅವರೂ ಕೂಡಾ ಮೀಸಲಾತಿ ನೀಡಲು ಕೇಂದ್ರ ಸರಕಾರ ಬದ್ದವಾಗಿದೆ ಎಂದಿದ್ದರು. ಸಂಸ್ಥೆ ಕಾರ್ಯಾರಂಭವಾಗಿ ೫ ವರ್ಷಗಳೇ ಕಳೆಯುತ್ತಾ ಬಂದರೂ ಕನ್ನಡಿಗರಿಗೆ ಮೀಸಲಾತಿ ನೀಡದಿರುವುದು ಖಂಡನಿಯ.ಕರ್ನಾಟಕದ IIT ಯಲ್ಲಿ ಬಿಹಾರ,ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ದೆಹಲಿಯವರು ಬಂದು ಪ್ರವೇಶ ಪಡೆದುಕೊಂಡರೆ ಕರ್ನಾಟಕದ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ಅಷ್ಟಕ್ಕೂ ಕರ್ನಾಟಕದಲ್ಲಿ IIT ಸ್ಥಾಪಿಸಿದ್ದು ಕನ್ನಡಿಗರಿಗಾಗಿಯೋ ಹೋರ ರಾಜ್ಯದವರಿಗಾಗಿಯೋ? IIT ಗೆ ರಾಷ್ಟ್ರೀಯ ಮಟ್ಟದ ಪರೀಕ್ಷೆ ನಡೆಯುವುದರಿಂದ ಮೀಸಲಾತಿ ಅಸಾಧ್ಯ ಎನ್ನುವ ಉಡಾಫೆ ಮಾತುಗಳನ್ನಾಡಿರುವ ಜಾವಡೇಕರ್ ಗೆ ದೇಶದ ಪ್ರಾದೇಶಿಕತೆಯ ಅರಿವಿಲ್ಲವೇ? ರಾಷ್ಟ್ರೀಯ ಮಟ್ಟದ ಪರೀಕ್ಷೆ ಬರೆಯಲು ಕನ್ನಡಿಗರು ಸಮರ್ಥರಿಲ್ಲವೇ? ಸರಕಾರ ನಡೆಸಲು ಏನೆಲ್ಲಾ ನಿಯಮಗಳನ್ನು ಬದಲಾಯಿಸುವ ನೀವು ವಿದ್ಯಾರ್ಥಿಗಳ ಹಿತಕ್ಕಾಗಿ ಮೀಸಲಾತಿ ನಿಯಮಗಳನ್ನು ಬದಲಾವಣೆ ಮಾಡಬಹುದಲ್ಲವೇ? ಕರ್ನಾಟಕದ ವಿದ್ಯಾರ್ಥಿಗಳು ಸವತಿ ಮಕ್ಕಳೇ? ಜಾವಡೇಕರ್ ಎರಡು ನಾಲಿಗೆಗಳನ್ನು ಇಟ್ಟುಕೊಂಡು ಮಾತನಾಡುವುದು ಬಿಡಬೇಕು.ಕರ್ನಾಟಕದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡದಿದ್ದರೆ ಅಂಥಹ ಸಂಸ್ಥೆಗಳು ಕರ್ನಾಟಕಕ್ಕೆ ಬೇಡ ಎನ್ನುವ ತೀರ್ಮಾನಕ್ಕೆ ಕನ್ನಡಿಗರು ಬರಬೇಕಾದಿತು.
ಈ ಕೂಡಲೇ ಇರುವ ನಿಯಮಗಳನ್ನು ಬದಲಿಸಿ ಧಾರವಾಡ IIT ಯಲ್ಲಿ ಕನ್ನಡಿಗರಿಗೆ ಶೇಕಡಾ ೨೫% ಮೀಸಲಾತಿ ನೀಡುವಂತೆ ಕರ್ನಾಟಕ ನವನಿರ್ಮಾಣ ಸೇನೆ ಆಗ್ರಹಿಸುತ್ತದೆ.ಒಂದು ವೇಳೆ ಮೀಸಲಾತಿ ನೀಡಲು ಮೀನ ಮೇಷ ಮಾಡಿದರೆ IIT ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ.
-- ಗಿರೀಶ್ ಪೂಜಾರ
ಜಿಲ್ಲಾಧ್ಯಕ್ಷರು, ಧಾರವಾಡ