ನಾಳೆ ಹೆಬ್ಬಳ್ಳಿಯಲ್ಲಿ --ಉಚಿತ ಆರೋಗ್ಯ ತಪಾಸಣಾ ಶಿಬಿರ
ಧಾರವಾಡ 18 : ಧಾರವಾಡ ಗ್ರಾಮೀಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ಹಲವಾರು ಜನಪರ ಸೇವೆಗಳನ್ನು ಒದಗಿಸಿದ ತೃಪ್ತಿ ನನಗಿದೆ, ಹಾಗೆ ಅದರ ಜೊತೆಗೆ ಇದೇ ದಿ.19 ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆಯಲ್ಲಿ, ಸುವರ್ಣ ಎಜುಕೇಶನಲ್ ಟ್ರಸ್ಟ್ ಸಹಕಾರದೊಂದಿಗೆ ಸವಿತಾ ವಿ. ಅಮರಶೆಟ್ಟಿ ಹಿತೈಷಿಗಳ ಹಾಗೂ ಅಭಿಮಾನಿ ಬಳಗದವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗುತ್ತಿದೆ ಎಂದು ಸುವರ್ಣ ಎಜುಕೇಶನಲ್ ಟ್ರಸ್ಟ್ ಮುಖ್ಯಸ್ಥರಾದ ಶ್ರೀಮತಿ ಸವಿತಾ. ವಿ. ಅಮರಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆ ಧಾರವಾಡ ಮತ್ತು ಎಸ್‌ಡಿಎಂ ನಾರಾಯಣ ಹೃದಯಾಲಯ ಇವರುಗಳ ಸಹಯೋಗದಲ್ಲಿ, ವೈದ್ಯರಿಂದ ಹೃದಯ ಸಮಸ್ಯೆ, ಎಲ್ಲವು ಕೀಲು, ಚಿಕ್ಕ ಮಕ್ಕಳ ತಪಾಸಣೆ, ಸ್ತ್ರೀರೋಗ ತಪಾಸಣ, ಈಸಿಜಿ, ಈಕೋ, ರಕ್ತ ತಪಾಸಣೆ, ಸ್ತ್ರೀಯರ ಹಾಗೂ ಮಕ್ಕಳ ಆರೋಗ್ಯ ಸಮಸ್ಯೆ ಯಂತಹ ವೈದ್ಯಕೀಯ ಸೇವೆಗಳನ್ನು ಔಷಧಿ ಸಹಿತ ಉಚಿತವಾಗಿ ಆಯೋಜನೆ ಮಾಡಿದ್ದು. ವೈದ್ಯರಿಂದ ಕಾರ್ಯಕ್ರಮಕ್ಕೆ ಚಾಲನೆ.ನೀಡಲಾಗುವದು, ಬೆಳಿಗ್ಯೆ 9-30 ದಿಂದ ಆರಂಭಗೊಂಡು ಸಂಜೆ 3 ವರಿಗೆ ಶಿಬಿರ ನಡೆಯಲಿದೆ ಎಂದರು.
ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ ಈ ಭಾಗದ ಸಮಸ್ತ ಸಾರ್ವಜನಿಕರಿಗೆ ಅನುಕೂಲವಾಗಲಿ ಜೊತೆಗೆ ಈ ಭಾಗದ ಜನರಿಗೆ ಆರೋಗ್ಯದ ಸೇವೆಯನ್ನು ಒದಗಿಸಲು ನಮ್ಮ ಅಭಿಮಾನಿಗಳ ಮೂಲಕ ನನಗೆ ಒದಗಿ ಬಂದಿರುವುದು ಸುದೈವ ಎಂದರು
ಧಾರವಾಡ ಗ್ರಾಮೀಣ ಕ್ಷೇತ್ರದ ಜನತೆಯ ಧ್ವನಿಯಾಗಿ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಈ ಜನತೆಯ ಸೇವೆಯನ್ನು ಮಾಡಲು ಸದಾ ಹಂಬಲಿಸುವ ಹೃದಯ ನನ್ನದು ಎಂದ ಅವರು, ಈಗಾಗಲೇ 10,000 ಮಹಿಳೆಯರಿಗೆ ಕರಕುಶಲ ತರಬೇತಿಯನ್ನು ನೀಡಿ ಎಲ್ಲರಿಗೂ ಉದ್ಯೋಗವಕಾಶ ಕಲ್ಪಿಸಿರುವುದು ಹೆಮ್ಮೆಯ ವಿಷಯ, ಅಲ್ಲದೆ ಗ್ರಾಮೀಣ ಭಾಗದ ಯುವಕ, ಯುವತಿಯರಿಗೆ ಕಂಪ್ಯೂಟರ್ ತರಬೇತಿಯನ್ನು ನೀಡಲಾಗಿದೆ.
ಕ್ಷೇತ್ರದ ತುಂಬೆಲ್ಲಾ ಜನತೆ ತೋರಿಸುವ ಪ್ರೀತಿ ಬೆಟ್ಟದಷ್ಟು ಆ ಜನತೆಗೆ ನನ್ನ ಕೈಲಾದ ಸೇವೆಯನ್ನ ಮಾಡುತ್ತಿದ್ದೇನೆ ಎಂದರು
ಹೆಬ್ಬಳ್ಳಿ ಭಾಗದ ಸಮಸ್ತ ಜನತೆ ಇದರ ಸದುಪಯೋಗ ಪಡೆದುಕೊಂಡು ಈ ಬೃಹತ್ ಉಚಿತ ಆರೋಗ್ಯ ತಪಾಸಣಾ
ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಕೋರುತ್ತೆನೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಾರುತಿ ಬಡವಣ್ಣವರ, ಸುನೀಲ ಮರಕುಂಬಿ, ಪ್ರಿಯಾ ಅಂಗಡಿ, ಸಾವಿತ್ರಿ ಬೆಣ್ಣಿ, ಸಂತೋಷ ಹಡಪದ ಉಪಸ್ಥಿತರಿದ್ದರು.