ಪ್ರಧಾನಿ ಮೋದಿ ಧಾರವಾಡಕ್ಕೆ
ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಲೋಕಾಪ೯ಣೆ
ಧಾರವಾಡ 09 ; ನಗರದ ಚಿಕ್ಕಮಲ್ಲಿಗವಾಡದ ಹತ್ತಿರ ನೂತನವಾಗಿ ನಿಮಿ೯ಸಲಾದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐ.ಐ.ಟಿ) ಕಟ್ಟಡವನ್ನು ಇದೇ ದಿ.12 ರಂದು ಸಂಜೆ 3 ಗಂಟೆಗೆ ದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಮಪ೯ಣೆ ಮಾಡಲಿದ್ದಾರೆ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ ನಿದೇ೯ಶಕರಾದ ಡಾ.ವೆಂಕಪ್ಪಯ್ಯ ದೇಸಾಯಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ರಾಜ್ಯ ಪಾಲರಾದ ಥಾವರಚಂದ್ ಗೆಹ್ಲೊಟ್ , ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ : ಕೇಂದ್ರೀಯ ಶಿಕ್ಷಣ , ಕೌಶಲ್ಯ ಅಭಿವೃದ್ಧಿ , ಮತ್ತು ಉದ್ಯಮಶೀಲತಾ ಮಂತ್ರಿ ಧರ್ಮೇಂದ್ರ ಪ್ರಧಾನ್ , ಕೇಂದ್ರೀಯ ಸಂಸದೀಯ ಕಾರ್ಯ. ಕಲ್ಲಿದ್ದಲು ಗಣಿ ವಿಭಾಗಗಳ ಮಂತ್ರಿಗಳಾದ . ಪ್ರಲ್ಹಾದ ಜೋಶಿ, ಐ ಐ ಟಿ ಧಾರವಾಡದ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿನಾಯಕ ಚಟರ್ಜಿ ಮತ್ತು ನಿರ್ದೇಶಕರಾದಪ್ರೊ ವೆಂಕಪ್ಪಯ್ಯ ದೇಸಾಯಿ ಇವರೆಲ್ಲರ ಉಪಸ್ಥಿತಿಯಲ್ಲಿ ನೆರವೇರಿಸಲಿದ್ದಾರೆ ಎಂದರು.
ಇದು ಮೊದಲನೇ ಪೇಸ್ ಉದ್ಘಾಟನೆಯಾಗಿದ್ದು ಇದರಲ್ಲಿ 18 ಭವನಹೊಂದಿದ್ದು ಇದರಲ್ಲಿ ಆಡಳಿತಾತ್ಮಕ, ಅಕಾಡೆಮಿ ಬ್ಲಾಕ್, ವಿಜ್ಞಾನ ಬ್ಲಾಕ್, ಹಾಗೂ ಗ್ರಂಥಾಲಯ ಒಳಗೊಂಡಿದೆ ಎಂದರು.
ಐ ಐ ಟಿ ಧಾರವಾಡ ರಾಷ್ಟ್ರೀಯ ಮಹತ್ತ್ವದ ಉಚ್ಚ ತಾಂತ್ರಿಕ ವಿದ್ಯಾ ಸಂಸ್ಥೆ ಆಗಿದ್ದು , 2016 ರಲ್ಲಿ ಭಾರತ ಸರ್ಕಾರದ ಶಿಕ್ಷಣ ಇಲಾಖೆ ಯ ಆಶ್ರಯದಲ್ಲಿ ಮುಂಬೈ ಐ ಐ ಟಿ ಯ ಪೋಷಕತ್ವದಲ್ಲಿ ಸ್ಮಾಪಿಸಲ್ಪಟ್ಟಿತು . ಐ ಐ ಟಿ ಧಾರವಾಡದ ಶೈಕ್ಷಣಿಕ ಚಟುವಟಿಕೆಗಳೆಲ್ಲ ಜುಲೈ 2016 ರಲ್ಲಿ ಧಾರವಾಡದ ಹೈಕೋರ್ಟ್ ಪೀಠದ ಪಕ್ಕಕ್ಕೆ ಇರುವ ಜಲ ಮತ್ತು ನೆಲ ನಿರ್ವಹಣೆ ( ವಾಲ್ಮೀ ) ಸಂಸ್ಥೆಯಲ್ಲಿ ಆರಂಭಗೊಂಡವು . ಆಗ ಸಂಗಣಕ ವಿಜ್ಞಾನ ಏವಂ ಅಭಿಯಾಂತ್ರಿಕ , ವಿದ್ಯುತ್ ಅಭಿಯಾಂತ್ರಿಕ ಯಾಂತ್ರಿಕ ಅಭಿಯಾಂತ್ರಿಕ ಮಾತ್ರ ಆರಂಭಗೊಂಡವು ಎಂದರು
ಸದ್ಯ ಇನ್ನೂ ನಾಲ್ಕು ವಿಭಾಗಗಳಾದ ಅಭಿಯಾಂತ್ರಿಕ ಭೌತ ಶಾಸ್ತ್ರ , ನಾಗರಿಕ ( ಸಿವಿಲ್ ) ಅಭಿಯಾಂತ್ರಿಕ ಜೈವ ರಾಸಾಯನಿಕ ( ಬಯೊಕೆಮಿಕಲ್ ) ಅಭಿಯಾಂತ್ರಿಕ ಗಣಿತ ಏವಂ ಸಂಗಣಕ ಶಾಸ್ತ್ರದಲ್ಲಿ ಕೂಡಾ ನಾಲ್ಕು ವರ್ಷದ ಬಿ . ಟೆಕ್ ಕೂರ್ಸುಗಳು ಆರಂಭವಾದವು . ಹಾಗೆಯೇ ಬಿಎಸ್ , ಎಂಎಸ್ , ಎಂ.ಟೆಕ್ ( ಯಾಂತ್ರಿಕ ಅಭಿಯಾಂತ್ರಿಕ ) , ಎಂ ಎಸ್ , ಮತ್ತು ಪಿಎಚ್ . ಡಿ ಕಾರ್ಯಕ್ರಮಗಳು ಆರಂಭ ಗೊಂಡಿವೆ . ಧಾರವಾಡ ಐ ಐ ಟಿ ನಿರಂತರ ಪುಗತಿ ಹೊಂದುತ್ತ ಬಂದಿದ್ದು ಸದ್ಯ 856 ವಿದ್ಯಾರ್ಥಿಗಳನ್ನು 73 ಪ್ರಾಧ್ಯಾಪಕರನ್ನು ಹೊಂದಿದ್ದು 400 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದ್ದು , 30 ಕೋಟಿಗಿಂತ ಹೆಚ್ಚು ರೂಪಾಯಿಗಳ ಅನುದಾನಿತ ಸಂಶೋಧನೆ ಯೋಜನೆಗಳಲ್ಲಿ ತೊಡಗಿಕೊಂಡಿದ್ದು , 30 ಕ್ಕೂ ಹೆಚ್ಚು ಸಂಶೋಧನೆ , ಸಹಕಾರಗಳ ಒಡಂಬಡಿಕೆಗಳನ್ನು ( MoU ) ವಿವಿಧ ಕಂಪನಿ / ಕಾರ್ಖಾನೆ / ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಜತೆ ಮಾಡಿಕೊಂಡಿದೆ ಎಂದರು.
. 2019 ರ 10 ಫೆಬ್ರುವರಿಯಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧಾರವಾಡದ ಐ ಐ ಟಿ ಯ ಸ್ಮಾಯಿ ಪರಿಸರದ ಶಂಕು ಸ್ಥಾಪನೆ ನೆರವೇರಿಸಿದ್ದರು . ಈ ಸ್ಮಾಯಿ ಪರಿಸರ 470 ಎಕರೆ ಭೂಮಿಯನ್ನು ಹೊಂದಿದ್ದು , ಈ ಭೂಮಿಯನ್ನು ಕರ್ನಾಟಕ ಸರ್ಕಾರ ಕೊಟ್ಟಿದೆ . ಇದರ ಜೊತೆಗೆ 65 ಎಕರೆ ಮೀಸಲು ಅರಣ್ಯ ಸಹ ಅಂತರ್ಗತವಾಗಿದೆ . ಪುಥಮ ' A ' ಹಂತದ ಎಲ್ಲ ಕಟ್ಟಡಗಳ ಅಂದಾಜು ವೆಚ್ಚ 852 ಕೋಟಿ ರೂ,ಗಳ ಮಾಪನ ಪ್ರಶಸ್ತಿಯನ್ನು ಪರಿಸರ ಸ್ನೇಹಿ ಬೃಹತ್ ವಿಕಾಸ ಪರಿಯೋಜನೆ ಅಂತರ್ಗತ ನೀಡಿದೆ ಎಂದರು.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಧಾರವಾಡ ಐಐಟಿ ಯು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ( KIMS ) ಮುಖಕವಚಗಳನ್ನು ಮತ್ತು ವೈಯಕ್ತಿಕ ರಕ್ಷಣಾ ಕವಚಗಳನ್ನು ( PPE ) ತಯಾರಿಸಿ ಕೊಡುವದರಲ್ಲಿ ಮಹತ್ವದ ಪಾತ್ರವಹಿಸಿದೆ . ಹಾಗೆಯೇ ಕೋವಿಡ್ ಲಸಿಕೆ ಚುಚ್ಚು ಮದ್ದು ನೀಡುವದರಲ್ಲಿ ಮತ್ತು ಅದೇ ಸಂಸ್ಥೆಗೆ ಡಿಜಿಟಲ್ ಸಂಪರ್ಕ ಮತ್ತು ವಿತರಣೆ ಮಾಡುವಲ್ಲಿ ಸಂಸ್ಥೆಯ ಪ್ರಾಯೋಜಕತ್ವ ಕೊಡಿಸುವಲ್ಲಿ ಯಶಸ್ವಿಯಾಗಿದೆ ಎಂದರು
ಐ ಐ ಟಿ ಧಾರವಾಡ ಹನಿವೆಲ್ , ಹೋಮ್ ಟೌನ್ ಸೊಲ್ಯೂಷನ್, ಇಂಡಿಯಾ ಪ್ರತಿಷ್ಠಾನ , ಲೊವ್ , ಇಂಡಿಯಾ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಐ ಐ ಟಿ ಸಮೀಪ ಇರುವ ಗರಗ ಗ್ರಾಮದಲ್ಲಿ ಆದರ್ಶ ಶುದ್ಧ ಶಕ್ತಿ ಗ್ರಾಮವನ್ನು ವಿಕಾಸಗೊಳಿಸುತ್ತಿದೆ ತನ್ನ ಗ್ಲೋಬಲ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಫರ್ಡೇಬಲ್ & ಕ್ಲೀನ್ ಎನರ್ಜಿ ಉತ್ತರ ಕರ್ನಾಟಕದ ಯುವ ಜನರಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಮಾಡುತ್ತಿದ್ದು ಸೆಲ್ಯೂ ಫೌಂಡೇಶನ್ ಮತ್ತು ಮುಖ್ಯ ವಿಜ್ಞಾನ ಸಲಹೆಗಾರ ಭಾರತ ಸರ್ಕಾರ ಅವರ ಜತೆ ಸಹಯೋಗದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಲಿದೆ ಎಂದರು.
ಧಾರವಾಡ ಐ ಐ ಟಿ ಯು ತನ್ನದೇ ಆದ ಧಾರವಾಡ ಸಂಶೋಧನೆ , ತಂತ್ರಜ್ಞಾನ ಪೋಷಕ ಕೇಂದ್ರ ಪ್ರತಿಷ್ಠಾನವನ್ನು 2013 ರಲ್ಲಿ ಸೆಕ್ಷನ್ 8 ಅಡಿಯಲ್ಲಿ ಆರಂಭ ಮಾಡಿದೆ . ಐ ಐ ಟಿ ಧಾರವಾಡದ ಮತ್ತಿತರ ವಿಶೇಷ ಸೌಲಭ್ಯಗಳೆಂದರೆ ಅನಂತ ಗಣಕ ( ಅಧಿಕ ಸಾಮರ್ಥ್ಯಶಾಲಿ ಗಣಕಯಂತ್ರ , ಅಂತರಿಕ್ಷ ಸಂಖ್ಯಾ ವಿಜ್ಞಾನ ಪುಯೋಗಶಾಲಾ , ಅತ್ಯಾಧುನಿಕ ಕೇಂದ್ರೀಯ ಉಪಕರಣ ಸೌಲಭ್ಯ ಹೊಂದಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರೋ.ಬಾಲಚಂದ್ರ ತೇಬ್ಬಿ, ಪ್ರೋ.ಪುಣಿಕರ್, ಪ್ರೋ.ಮಹಾದೇವ ಶ್ರವಣ ಇನ್ನಿತರರು ಉಪಸ್ಥಿತರಿದ್ದರು.