ಸಿದ್ದು ಬಾಲ್ಯ ನೆನಪಿಸಿದ ಮಲಕಾರಿ

ಸಿದ್ದು ಬಾಲ್ಯ ನೆನಪಿಸಿದ ಮಲಕಾರಿ
ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪಶ್ಚಿಮ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಬಸವರಾಜ ಮಲಕಾರಿ ಅವರು ಸಿದ್ದರಾಮಯ್ಯನವರಿಗೆ ಕಂಬಳಿ ಹೊದಿಸಿ ಮಾಲೆ ಹಾಕಿ ಒಂದು ವಿಶೇಷ ಪುಸ್ತಕ ನೀಡಿ ಸನ್ಮಾನಿಸಿದರು.
ಅವರು ನೀಡಿದ ಪುಸ್ತಕದಲ್ಲಿ ಸಿದ್ದರಾಮಯ್ಯನವರ ಬಾಲ್ಯ ಸೇರಿದಂತೆ ಕಾಲೇಜು ದಿನಗಳ ಹಾಗೂ ರಾಜಕೀಯವಾಗಿ ನಡೆದು ಬಂದ್ ಎಲ್ಲ ಚಿತ್ರಗಳನ್ನು ಪುಸ್ತಕ ರೂಪದಲ್ಲಿ ಸಿದ್ಧ ಪಡಿಸಿದ್ದರು. ಅದನ್ನು ಸಿದ್ದರಾಮಯ್ಯನವರು ಪುಸ್ತಕದ ಎಲ್ಲ ಪುಟದ ಮೇಲೆ ಕಣ್ಣಾಡಿಸಿದರು. ನಂತರ ಅದನ್ನು ಮಲಕಾರಿ ಅವರಿಗೆ ನೀಡಿದರು.
ನಂತರ ಸ್ವಲ್ಪ ಸಮಯದಲ್ಲಿ ಏ ಬಸವರಾಜ ಆ ಪುಸ್ತಕ ನನಗೆ ಕೊಡು ಎಂದು ತೆಗೆದುಕೊಂಡರು. ನನ್ನ ಎಲ್ಲ ಹಳೆಯ ನೆನಪುಗಳನ್ನು ನೀನು ಮತ್ತೆ ನೆನಪಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ಸಂತೋಷ ಲಾಡ್,ಬಸವರಾಜ ರಾಯರೆಡ್ಡಿ, ಜಮೀರ್ ಅಹಮ್ಮದ್,ಪ್ರಕಾಶ ರಾಥೋಡ್,ಅಲ್ತಾಫ್ ಹಳ್ಳೂರ,ಕೆಪಿಸಿಸಿ ಸದಸ್ಯರಾದ ರಾಬರ್ಟ್ ದಾದ್ದಾಪುರಿ,ಎಸ್ಟಿ ಸೆಲ್ ಅಧ್ಯಕ್ಷರಾದ ಭರಮಪ್ಪ ಬಂಗಾರಿ,ರಮೇಶ ನಲವಡಿ,ಹೇಮಂತ ಗುರ್ಲಹೊಸೂರ್,ಬಸವರಾಜ ಪಾಟೀಲ್,ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾದರು.

ನವೀನ ಹಳೆಯದು

نموذج الاتصال