ಜಿಲ್ಲಾಡಳಿತದಿಂದ ಪ್ರಥಮ ಬಾರಿಗೆ ಜಗದ್ಗುರು ರೇಣುಕಾಚಾರ್ಯ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ ಎಡಿಸಿ ಶಿವಾನಂದ ಭಜಂತ್ರಿ

ಜಿಲ್ಲಾಡಳಿತದಿಂದ ಪ್ರಥಮ ಬಾರಿಗೆ ಜಗದ್ಗುರು ರೇಣುಕಾಚಾರ್ಯ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ ಎಡಿಸಿ ಶಿವಾನಂದ ಭಜಂತ್ರಿ
ಧಾರವಾಡ (ಕರ್ನಾಟಕ ವಾರ್ತೆ) ಮಾ.02 : ಆದಿ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ರಾಜ್ಯಸರ್ಕಾರದ ಆದೇಶದ ಮೇರೆಗೆ ಬರುವ  ಮಾರ್ಚ್.5 ರಂದು ಪಾಲ್ಗುಣ ಶುದ್ಧ ತ್ರಯೋದಶಿಯಲ್ಲಿ ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಹೇಳಿದರು.
ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಸಿದ್ಧತೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ಎಲ್ಲ ಸಮುದಾಯದವರು ಆದಿಪುರುಷರ, ಮಹಾತ್ಮರ ಹಾಗೂ ಶಿವಯೋಗಿಗಳ ಜಯಂತಿಯನ್ನು ಆಚರಿಸುವುದರಿಂದ ಅರ್ಥಪೂರ್ಣವಾಗುತ್ತದೆ. ಜಗದ್ಗುರು ರೇಣುಕಾಚಾರ್ಯರ ಸಾಮಾಜಿಕ ಕೊಡುಗೆ, ಧಾರ್ಮಿಕ ಸುಧಾರಣೆ ಮತ್ತು ಧಾರ್ಮಿಕ ಜಾಗೃತಿಗೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ರಾಜ್ಯಸರ್ಕಾರವು ಈ ವರ್ಷದಿಂದ ರೇಣುಕಾಚಾರ್ಯರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ನಿರ್ಧರಿಸಿದೆ ಎಂದು ಹೇಳಿದರು.
ಮಾರ್ಚ್.5 ರಂದು ಬೆಳಿಗ್ಗೆ 11 ಗಂಟೆಗೆ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಆಚರಿಸಲಾಗುತ್ತಿದ್ದು, ಎಲ್ಲ ಸಮುದಾಯದ ಮುಖಂಡರು, ಸಾರ್ವಜನಿಕರು ಭಾಗವಹಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು. 
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ ಸಭೆ ನಿರ್ವಹಿಸಿದರು,
ಸಮಾಜದ ಮುಖಂಡರಾದ ಡಾ.ಡಿ.ಎಂ.ಹಿರೇಮಠ, ಸರೋಜಾ ಪಾಟೀಲ, ನಾಗನಗೌಡ ಪಾಟೀಲ ನೀರಲಗಿ, ಬಂಗಾರೇಶ ಹಿರೇಮಠ, ಮಂಜುನಾಥ ಹಿರೇಮಠ, ಹುಬ್ಬಳ್ಳಿ ರಂಭಾಪುರಿ ಸಮುದಾಯ ಭವನದ ಗದಗಯ್ಯ ಹಿರೇಮಠ ಅವರು ಜಯಂತಿಯ ಆಚರಣೆ ಕುರಿತು ಮಾತನಾಡಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಹಾಗೂ ಇತರ ಇಲಾಖೆಯ ಅಧಿಕಾರಿಗಳು, ಹಿರಿಯರಾದ ಜಿ.ಆರ್.ಹಿರೇಮಠ, ಚಂದ್ರಕಾಂತ ಹಿರೇಮಠ, ಮೃತ್ಯುಂಜಯ ಕೋರಿಮಠ, ರಾಜಣ್ಣ ಹಿರೇಮಠ, ಈಶ್ವರ ಹಿರೇಮಠ, ಶಕ್ತಿ ಹಿರೇಮಠ, ಚನ್ನಮ್ಮ ಚೌಕಿಮಠ, ಪಿ.ಎಂ. ಚಿಕ್ಕಮಠ, ಎಸ್.ಸಿ. ಹಿರೇಮಠ, ರವಿ ಸಿದ್ದಾಟಗಿಮಠ, ಶಿವಾನಂದ ಹಿರೇಮಠ ಸೇರಿದಂತೆ ಜಂಗಮ ಸಮಾಜದ ವಿವಿಧ ಮುಖಂಡರು, ಯುವ ಧುರೀಣರು ಸಭೆಯಲ್ಲಿ ಭಾಗವಹಿಸಿದ್ದರು.
ನವೀನ ಹಳೆಯದು

نموذج الاتصال