ಪ್ರಥಮ ಮಹಿಳಾ ಜಗದ್ಗುರು ಲಿಂಗೈಕ್ಯ ಡಾ. ಮಾತೆ ಮಹಾದೇವಿ ಅವರ ೪ ನೇ ಸಂಸ್ಮರಣಾ ದಿನಾಚರಣೆ

ಪ್ರಥಮ ಮಹಿಳಾ ಜಗದ್ಗುರು ಲಿಂಗೈಕ್ಯ ಡಾ. ಮಾತೆ ಮಹಾದೇವಿ ಅವರ ೪ ನೇ ಸಂಸ್ಮರಣಾ ದಿನಾಚರಣೆ
ಶರಣರ  ಒಂದೊಂದು ವಚನಗಳು ಭಾವ ವಿಕಾಸದತ್ತ ಹೆಜ್ಜೆಯಿಡುವಂತೆ ಪ್ರೇರೆಪಿಸುತ್ತದೆ ಇವುಗಳನ್ನು ಓದಿದವರು ಓದುವದಕ್ಕಿಂತ ಮೊದಲ ಇದ್ದ ಹಾಗೆ ಇರಲಾರರು ಖಂಡಿತವಾಗಿ ಪರಿವರ್ತಿತರಾಗುತ್ತಾರೆ ಎಂದು ಪತ್ರಕರ್ತ. ಜರ್ನಲಿಸ್ಟ ಗಿಲ್ಡ ಅಧ್ಯಕ್ಷ ಡಾ.ಬಸವರಾಜ ಹೊಂಗಲ ಹೇಳಿದರು.
ಕÀರ್ನಾಟಕ ವಿದ್ಯಾವರ್ಧಕ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಪ್ರಥಮ ಮಹಿಳಾ ಜಗದ್ಗುರು ಲಿಂಗೈಕ್ಯ ಡಾ. ಮಾತೆ ಮಹಾದೇವಿ ಅವರ ೪ ನೇ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಚನ ಸಾಹಿತ್ಯ ಮಾನವನನ್ನು ವಿಶ್ವಮಾನವನನ್ನಾಗಿಸುವ ಹಾಗೂ ಸಂಸ್ಕೃತಿಯನ್ನು ಬಿಂಬಿಸುವುದಾಗಿದೆ.  ವಚನಗಳು ಶಬ್ದಾರ್ಥ ಲಕ್ಷಣಾರ್ತ ಧ್ವನ್ಯಾರ್ಥ ತತ್ವಾರ್ಥ ಮತ್ತು ಸದಾ ಹೊಸತನವನ್ನು ಧ್ವನಿಸುತ್ತಲೇ ಇರುವಂತೆ ಮಾಡಿದ ಮಾತೆ ಮಹಾದೇವಿಯವರ ಕಾರ್ಯ ಶ್ಲಾಘನೀಯವಾಗಿದೆ. ಮಾತಾಜಿ ರಚಿಸಿ  ಸಂಶೋಧಿಸಿದ ಸಾಹಿತ್ಯ ಇತಿಹಾಸ ಸಿದ್ದಾಂತ ಮತ್ತು ಧರ್ಮದ ಅಂಶಗಳು ಅವರ ಗೃಂಥದಲ್ಲಿ ಸೇರಿವೆ.
 ಮಾತಾಜಿಯವರ ಬರವಣಿಗೆಯು ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ಸಾಹಿತ್ಯಿಕ ಸೈದ್ದಾಂತಿಕ ಧಾರ್ಮಿಕ ಅಂಶಗಳನ್ನು ಒಳಗೊಂಡಿತ್ತು ಅವರ ಸಾಹಿತ್ಯ ಆತ್ಮ ವಿಮರ್ಶೆ ಮತ್ತು ಲೋಕ ವಿಮರ್ಶೆಗಳಿಗೆ ಒಳಪಡಿಸುವಂತಿವೆ ಎಂದರು.
ಕುAಬಳಗೋಡ ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಅಧ್ಯಕ್ಷರಾದ ಶ್ರೀ ಚನ್ನಬಸವಾನಂದ ಸ್ವಾಮಿಜಿ ಸಾನಿಧ್ಯವಹಿಸಿ ಮಾತನಾಡಿ, ಆಧುನಿಕತೆ ಜೀವನದಲ್ಲಿ ಮನುಷ್ಯ ತನ್ನ ಮನುಷ್ಯತ್ವ ಕಳೆದುಕೊಳ್ಳುತ್ತಿದ್ದು ಮನಸ್ಸು ಮತ್ತಷ್ಟು ಕುಗ್ಗುತ್ತಿದ್ದು ಇದರಿಂದ ಹೊರಬರಬೇಕಿದೆ. ನಮ್ಮಲ್ಲಿ ಕ್ರಿಯಾ ಮತ್ತು ಜ್ಞಾನಗಳ ಸಮನ್ವಯವಾಗಬೇಕು ನಡೆ ನುಡಿಗಳು ಒಂದಾಗಬೇಕು ಅಂದರೆ ಮಾತ್ರ ನಮ್ಮಿಂದ ಸತ್ಕಾರ್ಯ ಸಾಧ್ಯವಾಗುತ್ತದೆ ಎಂಬುದು ಡಾ. ಮಾತೆ ಮಹಾದೇವಿ ತಾಯಿಯವರ ವಾಣಿಯಾಗಿತ್ತು. ಬಸವತತ್ವಕ್ಕಾಗಿ, ಬಸವಧರ್ಮದ ಉಳಿವಿಗಾಗಿ ಜೀವನದುದ್ದಕ್ಕೂ ಹೋರಾಟ ನಡೆಸಿದರು. ಸಮಾಜದ ಏಳ್ಗೇಗಾಗಿ ಹಗಲಿರುಳು ಶ್ರಮಿಸಿ ಅಸಂಖ್ಯಾತ ಜನಮನದಲ್ಲಿ ಉಳಿದವರು ಎಂದರು.
ಬಸಯ್ಯ ಗಣಾಚಾರಿ ಅದ್ಯಕ್ಷತೆವಹಿಸಿದ್ದರು. ಬಂಡೆಪ್ಪ ಹೊಸಗೌಡರ. ಶಿವಾನಂದ ಅಬಲೂರ. ಪ್ರಕಾಶ ಗರಗ. ಫಕಿರಪ್ಪ ಬೇವಿನಗಿಡದ. ಅಂಜನಾ ಶಿರೂರ. ಶಿವಪುತ್ರ ರಡ್ಡಿ ಉಪಸ್ಥಿತರಿದ್ದರು. ಶಿವಕುಮಾರ ಕಟಗಿ ನಿರೂಪಿಸಿ ಸ್ವಾಗತಿಸಿದರು.
ನವೀನ ಹಳೆಯದು

نموذج الاتصال