ರಾಜ್ಯ ಸರಕಾರದ ಆದೇಶಕ್ಕೆ ಸ್ವಾಗತ
:ಎಸ್.ಎಫ್.ಸಿದ್ದನಗೌಡರ
ಕರ್ನಾಟಕರಾಜ್ಯ ಸರಕಾರಿ ನೌಕರರ ಸಂಘ ಹಾಗೂ ವಿವಿಧ ಇಲಾಖಾ ನೌಕರರ ವೃಂದ ಸಂಘಗಳು ಸೇರಿಕರ್ನಾಟಕರಾಜ್ಯ ಸರ್ಕಾರಿ ನೌಕರರಿಗೆ ೭ನೇ ವೇತನಆಯೋಗ ಅನುಷ್ಟಾನ ಹಾಗೂ ಎನ್.ಪಿ.ಎಸ್. ರದ್ದತಿಕುರಿತು ದಿ: ೦೧-೦೩-೨೦೨೩ ರಿಂದ ಮುಷ್ಕರಕ್ಕೆಕರೆಕೊಡಲಾಗಿತ್ತು. ಅದರಂತೆ ಧಾರವಾಡ ಜಿಲ್ಲೆಯಲ್ಲಿ ನೂರಕ್ಕೆ ನೂರರಷ್ಟು ಸರಕಾರಿ ನೌಕರರು ಕೆಲಸಕ್ಕೆ ಗೈರಹಾಜರ ಆಗುವ ಮೂಲಕ ಮುಷ್ಕರವನ್ನುಅತ್ಯಂತ ಯಶಸ್ವಿಗೊಳಿಸಿದ್ದಕ್ಕಾಗಿ ನೌಕರ ಸಂಘದ ಪರವಾಗಿಜಿಲ್ಲಾಧ್ಯಕ್ಷರಾದ ಎಸ್.ಎಫ್.ಸಿದ್ದನಗೌಡರ ಅಭಿನಂದನೆ ಸಲ್ಲಿಸಿರುತ್ತಾರೆ. ಅದರಂತೆ ಇಂದು ಕರ್ನಾಟಕ ಘನ ಸರಕಾರದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಇವರ ನಡುವೆ ನಡೆದ ಸಂಧಾನದ ಮಾತುಕತೆಅತ್ಯಂತ ಫಲಪ್ರದವಾಗುವದರ ಮೂಲಕ ಸರ್ಕಾರಿ ನೌಕರರಿಗೆ ಶೇ.೧೭% ರಷ್ಟು ಮಧ್ಯಂತರ ಪರಿಹಾರ ಘೋಷಿಸಿ ಆದೇಶ ಹೊರಡಿಸಿದ್ದು ಹಾಗೂ ಎನ್.ಪಿ.ಎಸ್. ರದ್ದತಿಕುರಿತುಈಗಾಗಲೇ ಎನ್.ಪಿ.ಎಸ್.ರದ್ದುಗೊಂಡ ರಾಜ್ಯಗಳಲ್ಲಿ ಅಧ್ಯಯನ ಮಾಡಿ 2 ತಿಂಗಳಲ್ಲಿ ವರದಿ ಸಲ್ಲಿಸುವಂತೆ ಮಾನ್ಯಅಪರ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಮಿತಿರಚಿಸಿ ಆದೇಶ ಮಾಡಲಾಗಿದೆ. ಎರಡೂಆದೇಶವು ಸರ್ಕಾರಿನೌಕರರಿಗೆಅತ್ಯಂತ ಪೂರಕವಾಗಿದ್ದು ಸದರಿಎರಡೂ ಆದೇಶಗಳನ್ನು ಜಿಲ್ಲಾಘಟಕದ ಪರವಾಗಿ ಸ್ವಾಗತಮಾಡಿರುವದಾಗಿ ತಿಳಿಸಿರುವರು.
ಸರಕಾರದೊಂದಿಗೆ ಈ ಒಂದು ಯಶಸ್ವಿ ಸಂಧಾನ ಮಾಡುವ ಮೂಲಕ ಹಾಗೂ ನೌಕರರ ಪರವಾಗಿ ದಿಟ್ಟನಿಲುವನ್ನು ಪ್ರದರ್ಶಿಸುವ ಮೂಲಕ ಎಲ್ಲ ನೌಕರರ ಹಿತಕಾಪಾಡುವಲ್ಲಿರಾಜ್ಯಧ್ಯಕ್ಷರಾದ .ಸಿ.ಎಸ್.ಷಡಾಕ್ಷರಿ ಅವರು ಯಶಸ್ವಿಯಾಗಿದ್ದು ಅವರಿಗೆಜಿಲ್ಲೆಯ ಸಮಸ್ತ ನೌಕರರ ಪರವಾಗಿತುಂಬುಹೃದಯದ ಧನ್ಯವಾದಗಳು.
ಈ ಒಂದು ಮುಷ್ಕರಕ್ಕೆಜಿಲ್ಲಾ ನೌಕರ ಸಂಘದೊAದಿಗೆ ಬೆಂಬಲ ಸೂಚಿಸಿದ ಜಿಲ್ಲೆಯ ವಿವಿಧಇಲಾಖೆಯ ವೃಂದ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ವಿಶೇಷವಾಗಿ ಮಾಧ್ಯಮಿಕ ಶಾಲಾ ನೌಕರ ಸಂಘ, ಕರ್ನಾಟಕ ವಿಶ್ವವಿದ್ಯಾಲಯ ಬೋಧಕೇತರ ನೌಕರ ಸಂಘ, ಕೃಷಿ ವಿಶ್ವವಿದ್ಯಾಲಯದ ಬೋಧಕೇತರ ನೌಕರ ಸಂಘ, ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ, ಹೆಸ್ಕಾಂ, ಕೆ.ಪಿ.ಟಿ.ಸಿ.ಎಲ್, ನಿವೃತ್ತ ನೌಕರ ಸಂಘದಎಲ್ಲ ಪದಾಧಿಕಾರಿಗಳು ಹಾಗೂ ನೌಕರ ಬಾಂಧವರಿಗೆಜಿಲ್ಲಾ ನೌಕರ ಸಂಘದ ಪರವಾಗಿಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ತುಂಬುಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತಾ, ಇನ್ನು ಮುಂದೆ ಸಂಘದೊಂದಿಗೆ ತಮ್ಮ ಬೆಂಬಲ ಹೀಗೇ ಇರಲೆಂದು ಆಶಿಸಿದರು.
ಈ ಸಂದರ್ಭದಲ್ಲಿಜಿಲ್ಲಾ ಕಾರ್ಯದರ್ಶಿ ಮಂಜುನಾಥ ಯಡಳ್ಳಿ, ಗೌರವಾಧ್ಯಕ್ಷ ರಮೇಶ ಲಿಂಗದಾಳ, ರಾಜ್ಯ ಪರಿಷತ್ ಸದಸ್ಯ ದೇವಿದಾಸ ಶಾಂತಿಕರ, ಹಿರಿಯಉಪಾಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ, ಖಜಾಂಚಿರಾಜಶೇಖರ ಬಾಣದ, ನೌಕರ ಭವನಕಾರ್ಯದರ್ಶಿ ಗಿರೀಶಚೌಡಕಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಜಿಲ್ಲಾ ಪ್ರಧಾನಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ತಾಲೂಕಾಅಧ್ಯಕ್ಷರಾದ ಶಾಂತಾ ಶೀಲವಂತರ, ಪ್ರೌಢಶಾಲಾ ಶಿಕ್ಷಕರ ಸಂಘದಜಿಲ್ಲಾಧ್ಯಕ್ಷರಾದಎಫ್.ವ್ಹಿ.ಮಂಜಣ್ಣವರ, ಅನುದಾನಿತ ಮಾಧ್ಯಮಿಕ ಶಾಲಾಶಿಕ್ಷಕರ ಸಂಘದ ಶ್ಯಾಮ ಮಲ್ಲನಗೌಡರ, ನಿವೃತ್ತ ನೌಕರ ಸಂಘದ ಎಸ್.ಕೆ.ರಾಮದುರ್ಗ, ಉಪಾಧ್ಯಕ್ಷರಾದರಾಜೇಶಕೋನರಡ್ಡಿ,ಬಿ.ಎಸ್.ಪಾಟೀಲ, ರವಿಕುಮಾರ, ಮುಶನ್ನವರ, ಸೋಪಿನ, ಹಾಗೂ ಇನ್ನಿತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.