*ಮಠ, ಮಂದಿರ, ದೇವಸ್ಥಾನಗಳ ಅಭಿವೃದ್ಧಿಗೆ 8 ಕೋಟಿ ಅನುದಾನ :* *ಸಚಿವ ಶಂಕರ ಪಾಟೀಲ ಮುನೆನಕೊಪ್ಪ.ಟಥಥಎವರ್

*ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ; ನಾಲ್ಕು ಸಕ್ಕರೆ ಕಾರ್ಖಾನೆಗೆ ಮಂಜೂರಾತಿ :* *ಮಠ, ಮಂದಿರ, ದೇವಸ್ಥಾನಗಳ ಅಭಿವೃದ್ಧಿಗೆ 8 ಕೋಟಿ ಅನುದಾನ :* 
*ಸಚಿವ ಶಂಕರ ಪಾಟೀಲ ಮುನೆನಕೊಪ್ಪ*
*ಧಾರವಾಡ(ಕರ್ನಾಟಕ ವಾರ್ತೆ)ಮಾ.21:* ಧಾರವಾಡ ಜಿಲ್ಲೆ ಹಾಗೂ ನವಲಗುಂದ ಮತ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ. ರೈತರ ಹಿತ ಕಾಪಾಡಿ ಗ್ರಾಮಗಳ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಮಂಜೂರಾತಿ ನೀಡಿದ್ದೇನೆ ಎಂದು ರಾಜ್ಯ ಕೈಮಗ್ಗ, ಜವಳಿ ಮತ್ತು ಕಬ್ಬು ಅಭಿವೃದ್ಧಿ, ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಹೇಳಿದರು.

ಅವರು ಸುಳ್ಳ ಗ್ರಾಮದಲ್ಲಿನ ಪಂಚಗೃಹ ಹಿರೇಮಠದ ಆವರಣದಲ್ಲಿ ವೀರಸೋಮೇಶ್ವರ ಯಾತ್ರಿ ನಿವಾಸ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ರೈತರ ಸಮಸ್ಯೆ ಪರಿಹರಿಸಲು ಮತ್ತು ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ನಾಲ್ಕು ನೂತನ ಸಕ್ಕರೆ ಕಾರ್ಖಾನೆ ಆರಂಭಿಸಲು ಮಂಜೂರಾತಿ ನೀಡಲಾಗಿದೆ, ಕಲಘಟಗಿ ತಾಲೂಕಿನಲ್ಲಿ ಎರಡು, ಧಾರವಾಡ ಮತ್ತು ನವಲಗುಂದ ತಾಲೂಕಿನಲ್ಲಿ ತಲಾ ಒಂದು ಸಕ್ಕರೆ ಕಾರ್ಖಾನೆಗಳು ಕಾರ್ಯರಂಭ ಮಾಡಲಿವೆ, ಇದರಿಂದ ಗ್ರಾಮಗಳ ಅಭಿವೃದ್ಧಿ ಜೊತೆಗೆ ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಅವಕಾಶಗಳು ದೊರೆಯುತ್ತವೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಯ ಪ್ರತಿ ಮನೆ ಮನೆಗೆ ಕುಡಿಯಲು ಮಲಪ್ರಭಾ ನದಿ ನೀರು ಸರಬರಾಜು ಮಾಡಲು ಜಲ್ ಜೀವನ್ ಮಿಷನ್ ಯೋಜನೆ ಅನುμÁ್ಠನಗೊಳಿಸಲಾಗಿದೆ. ಸುಳ್ಳ - ಹೆಬ್ಬಸೂರ ರಸ್ತೆ ಕಾಮಗಾರಿಗೆ 17 ಕೋಟಿ, ಬ್ಯಾಹಟ್ಟಿ -ಸುಳ್ಳ ರಸ್ತೆ ಅಭಿವೃದ್ಧಿಗೆ 6.5 ಕೋಟಿ ಅನುದಾನ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಸುಳ್ಳ ಗ್ರಾಮದ ಪ್ರಸಿದ್ಧ ಕಲ್ಮೇಶ್ವರ ದೇವಸ್ಥಾನ ಅಭಿವೃದ್ಧಿಗೆ 25 ಲಕ್ಷ ಹಾಗೂ ಪಂಚಗೃಹ ಹಿರೇಮಠ ಆವರಣದಲ್ಲಿ ಶ್ರೀ ವೀರಸೋಮೇಶ್ವರ ಯಾತ್ರಿ ನಿವಾಸ ನಿರ್ಮಿಸಲು 25 ಲಕ್ಷ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚಿÀ್ಚನ ಅನುದಾನ ನೀಡಲಾಗುವುದು ಎಂದು ಸಚಿವರು ಹೇಳಿದರು.

ನಲವಗುಂದ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಮಠ, ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ಧಾರಕ್ಕೆ 8 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಗೆ ಅನುಮತಿಸಿ, ಆದೇಶಿಸಲಾಗಿದೆ. ಅದರಲ್ಲಿ ನವಲಗುಂದ ಗವಿಮಠಕ್ಕೆ 1 ಕೋಟಿ, ನಾಗಲಿಗೇಶ್ವರ ಮಠಕ್ಕೆ 1.25ಕೋಟಿ, ನವಲಗುಂದ ಪಂಚಗೃಹ ಹಿರೇಮಠಕ್ಕೆ 75 ಲಕ್ಷ, ಹುರಕಡ್ಲಿ ಅಜ್ಜನ ದೇವಸ್ಥಾನಕ್ಕೆ 25 ಲಕ್ಷ, ಅಣ್ಣೇಗೇರಿ  ದಾಸೋಹ ಮಠಕ್ಕೆ 75 ಲಕ್ಷ, ಅಣ್ಣಿಗೇರಿ ಗುದ್ನೇಶ್ವರ ಮಠಕ್ಕೆ 25 ಲಕ್ಷ, ಮನಕವಾಡದ ಮೃತ್ಯುಂಜೇಶ್ವರ ಮಠಕ್ಕೆ 2 ಕೋಟಿ, ಕುಸುಗಲ್‍ದ ಗುರುಬೆಳ್ಳೇರಿಮಠಕ್ಕೆ 25 ಲಕ್ಷ ಬ್ಯಾಹಟ್ಟಿ ಹಿರೇಮಠಕ್ಕೆ 25 ಲಕ್ಷ, ಹಾಳಕುಸುಗಲ್ ಹಿರೇಮಠಕ್ಕೆ 25 ಲಕ್ಷ ಮತ್ತು ಚಿಕ್ಕಮಠಕ್ಕೆ 15 ಲಕ್ಷ, ಗುರು ಶಾಂತೇಶ್ವರ ಮಠಕ್ಕೆ 25 ಲಕ್ಷ, ಶಿರಕೋಳದ ಹಿರೇಮಠಕ್ಕೆ 25 ಲಕ್ಷ, ತುಪ್ಪದ ಕುರಹಟ್ಟಿಯ ಭೂಸುನೂರ ಮಠಕ್ಕೆ 30 ಲಕ್ಷ ರೂ.ಗಳು ಸೇರಿವೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪಂಚಗೃಹ ಹಿರೇಮಠದ ಪಟ್ಟದ್ಯಕ್ಷರಾದ ಷ.ಬ್ರ. ಶಿವಸಿದ್ದರಾಮೇಶ್ವರ ಶಿವಾಚಾರ್ಯರು ಮಾತನಾಡಿ, ಪ್ರಾಮಾಣಿಕತೆಯಿಂದ ಮಾಡುವ ಪ್ರತಿ ಕೆಲಸ ಪರಮಾತ್ಮನಿಗೆ ಪ್ರಿಯವಾಗುತ್ತದೆ. ಧರ್ಮ, ದೇವರು, ಸಂಸ್ಕಾರ, ಸಂಸ್ಕøತಿ ಉಳಿಯಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.
ಸಚಿವರು ಮೂಲತಃ ಕೃಷಿಕರಾಗಿರುವದರಿಂದ ಕೃಷಿ, ರೈತರ ಮತ್ತು ಗ್ರಾಮಗಳ ಅಭಿವೃದ್ಧಿಗೆ ಆಸಕ್ತಿವಹಿಸಿ, ಸಾಕಷ್ಟು ಶ್ರಮಿಸಿದ್ದಾರೆ. ಮಠ, ಮಂದಿರ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅಪಾರ ಅನುದಾನ ನೀಡುವ ಮೂಲಕ ಧರ್ಮ, ಸಂಸ್ಕಾರ ಉಳಿಸಿ, ಬೆಳೆಸಲು ಸೇವೆ ಸಲ್ಲಿಸಿದ್ದಾರೆ. ದೈವಿ ಭಕ್ತಗುಣ ಹೊಂದಿರುವ ಸಚಿವರಿಗೆ ದೇವರು ಸಹಿತ ಪ್ರತಿಯೊಬ್ಬರ ಆಶಿರ್ವಾದವಿದೆ ಎಂದರು. ಮಾಜಿ ಪ್ರಧಾನಿ ಲಾಲ ಬಹಾದ್ದೂರ ಶಾಸ್ತ್ರಿ ಅವರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕೆಂದು  ಶಿವಸಿದ್ದರಾಮೇಶ್ವರ ಶಿವಾಚಾರ್ಯರು ತಿಳಿಸಿದರು. 

ಕಲ್ಮೇಶ್ವರ ದೇವಸ್ಥಾನದ ಆರ್ಚಕ ಸಣಕಲ್ಲಪ್ಪ ಒಂಟಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸುಳ್ಳ ಗ್ರಾಮ ಪಂಚಾಯತ ಉಪಾಧ್ಯಕ್ಷ ಬಸವರಾಜ ಸಂಗಳ, ಗ್ರಾಮದ ಪ್ರಮುಖರಾದ ಮುದಕಣ್ಣ ಹೆಬ್ಬಾಳ, ಬಸಣ್ಣ ಮತ್ತಿಹಳ್ಳಿ, ಅರ್ಜುನಪ್ಪ ಮೆಣಸಿನಕಾಯಿ, ಈರಣ್ಣ ಸಾಲಿ, ಮಲ್ಲಿಕಾರ್ಜುನ ಅಸುಂಡಿ, ಸತೀಶ ದ್ಯಾಮಕ್ಕನವರ, ಸಿದ್ರಾಮಪ್ಪ ಹೊಸಮನಿ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಮಹಿಳಾ ಮಂಡಳ ಸದಸ್ಯರು, ಗ್ರಾಮಸ್ಥರು ಭಾಗವಹಿದ್ದರು. 
********
ನವೀನ ಹಳೆಯದು

نموذج الاتصال