ಗೆಡ್ಡೆ ಗೆಣಸು ಮೇಳ 25,26 ರಂದು.
ಧಾರವಾಡ :
ಗೆಡ್ಡೆ ಗೆಣಸು ಕೃಷಿ ಮಾಹಿತಿ ಮಾರುಕಟ್ಟೆ ಅವಕಾಶ ಅಡುಗೆ- ತಿನಿಸುಗಳು
25 ಮತ್ತು 26ನೇ ಫೆ
ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರ, ಕೋರ್ಟ ಸರ್ಕಲ್, ಧಾರವಾಡಲ್ಲಿ
ಬೆಳಿಗ್ಗೆ 10.30 ರಿಂದ ಸಂಜೆ 8 ರವರೆಗೆ
ಕರ್ನಾಟಕ ಗೆಡ್ಡೆ ಗೆಣಸು ವೈವಿಧ್ಯಕ್ಕೆ ಹೆಸರುವಾಸಿ. ಕುಣಬಿ, ಸಿದಿ, ಜೇನು ಕುರುಬ , ಬೆಟ್ಟ ಕುರುಬ, ಸೋಲಿಗ ಮತ್ತು ಇರುಳಿಗ ಸಮುದಾಯಗಳು ಗೆಡ್ಡೆ ಗೆಣಸನ್ನು ಇವತ್ತಿಗೂ ಆಹಾರವಾಗಿ ಬಳಸುತ್ತಿದ್ದಾರೆ.
ನೈಸರ್ಗಿಕ ವಿಕೋಪ ಮತ್ತು ಬರಗಾಲದಲ್ಲಿ ಗೆಡ್ಡೆ ಗೆಣಸು ಜೀವ ಉಳಿಸುವ ಸಂಜೀವಿನಿಯಂತೆ ಕೆಲಸ ಮಾಡುತ್ತವೆ. ವಾತಾವರಣದ ವೈಪರೀತ್ಯವಿದ್ದಾಗ ಎಲ್ಲ ಬೆಳೆಗಳು ವಿಫಲವಾದಾಗ ಗೆಡ್ಡೆ ಗೆಣಸುಗಳು ರೈತನ ಕೈಹಿಡಿಯುತ್ತವೆ, ಆದಾಯ ತರುತ್ತವೆ.
ಗೆಡ್ಡೆ ಗೆಣಸು ಭೂತಾಯಿ ಮಡಿಲಿನ ಅದ್ಬುತ ಸೃಷ್ಟಿ. ಋಷಿ ಮುನಿಗಳು ಮತ್ತು ಆದಿವಾಸಿಗಳು ಗೆಡ್ಡೆ ಗೆಣಸು ತಿಂದು ರೋಗವಿಲ್ಲದೆ ಆರೋಗ್ಯವಂತರಾಗಿ ಜೀವಿಸುತ್ತಿದ್ದರು ಎಂಬುದನ್ನು ಕೇಳಿದ್ದೇವೆ. ರಾಮ-ಲಕ್ಷಣ-ಸೀತೆ ವನವಾಸದ ಸಂದರ್ಭದಲ್ಲಿ ಕಂದಮೂಲಗಳನ್ನು ಸೇವಿಸುತ್ತಿದ್ದರು ಎಂಬ ಪ್ರಸ್ತಾಪ ರಾಮಾಯಣದಲ್ಲಿದೆ.
ಆಯುರ್ವೇದ ಮತ್ತು ಜನಪದ ವೈದ್ಯದಲ್ಲಿ ಮೂಲಿಕೆಯ ಬಳಕೆ ವ್ಯಾಪಕವಾಗಿದೆ. ಪಿಷ್ಟ, ನಾರು ಮತ್ತು ಪೋಚಕಾಂಶಗಳಿಂದ ಸಮೃದ್ಧವಾದ ಗೆಡ್ಡೆ ಗೆಣಸು ನಮ್ಮ ಅನ್ನದ ಬಟ್ಟಲು ತುಂಬುವುದರ ಜೊತೆಗೆ, ಆರೋಗ್ಯವನ್ನೂ ವೃದ್ಧಿಸುತ್ತದೆ. ಕೋವಿಡ್ ನಂಥ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡಲು, ದೇಹಕ್ಕೆ ರೋಗ ನಿರೋಧಕ ಶಕ್ತಿ ತುಂಬಲು ನಿಸರ್ಗದ ಕೊಡುಗೆಯಾದ ಗೆಡ್ಡೆ ಗೆಣಸುಗಳು ಮಹತ್ವದ ಪಾತ್ರ ವಹಿಸುತ್ತವೆ.
ನೈಸರ್ಗಿಕವಾಗಿ ಬೆಳೆಯುವ, ವಿಷಮುಕ್ತವಾದ ಗೆಡ್ಡೆ ಗೆಣಸು ಪೋಷಕಾಂಶದ ಕಣಜ. ನಾರಿನಂಶ ಹೆಚ್ಚಿರುವುದರಿಂದ ವಿಸರ್ಜನಾಕ್ರಿಯೆಗೆ ಸಹಕಾರಿ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ , ಚರ್ಮದ ಮೈಕಾಂತಿ ವೃದ್ಧಿಸಲು ಮತ್ತು ವಯಸ್ಸನ್ನು ನಿಧಾನಿಸಲು ಗೆಡ್ಡೆ ಗೆಣಸು ಸಹಕಾರಿ. ಇವುಗಳಲ್ಲಿ ಕಾಬೋಹೈಡ್ರೇಟ್ ಸಂಯುಕ್ತ ರೂಪದಲ್ಲಿದೆ. ರಕ್ತದಲ್ಲಿ ಸಕ್ಕರೆ ಅಂಶ ಒಮ್ಮೆಲೇ ಹೆಚ್ಚುವುದಿಲ್ಲ. ಮಧುಮೇಹ ರೋಗಿಗಳು ಯಾವುದೇ ಆತಂಕವಿಲ್ಲದೆ ಗೆಡ್ಡೆ ಗೆಣಸು ಸವಿಯಬಹುದು.
ಗೆಡ್ಡೆ ಗೆಣಸುಗಳನ್ನು ಸುಲಭನಾಗಿ ಹೊಲದ ಅಂಚಿನಲ್ಲಿ ಇಲ್ಲವೇ ಬೆಳೆಯ ಸಾಲಿನ ನಡುವೆ ಬೆಳೆದುಕೊಳ್ಳಬಹುದು. ಮನೆ ಹಿತ್ತಲು ಮತ್ತು ತಾರಸಿ ತೋಟದಲ್ಲೂ ಇವನ್ನು ಬೆಳೆಸಬಹುದು.
ನಿಸರ್ಗದ ಕೊಡುಗೆಯಾದ ಗೆಡ್ಡೆ ಗೆಣಸುಗಳ ಅದ್ಭುತ ಲೋಕವನ್ನು ಧಾರವಾಡ ಗ್ರಾಹಕರಿಗೆ ಪರಿಚಯಿಸಲು ಸಹಜ ಸಮೃದ್ದ , ಗಾಂಧಿ ಪ್ರತಿಷ್ಟಾನ ಮತ್ತು ನೇಚರ್ ಫಸ್ಟ ಆಶ್ರಯದಲ್ಲಿ ‘ಗೆಡ್ಡೆ ಗೆಣಸು ಮೇಳ’ವನ್ನು ಆಯೋಜಿಸಲಾಗಿದೆ. ಫೆ 25 ಮತ್ತು 26 ರಂದು ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಟಾನದ ದಲ್ಲಿ ನಡೆಯಲಿರುವ ಈ ಮೇಳದಲ್ಲಿ ವಿವಿಧ ಬಗೆಯ ಕಾಡು ಮತ್ತು ನಾಡಿನ ಗೆಢ್ಡೆ ಗೆಣಸುಗಳು, ಮೌಲ್ಯವರ್ಧಿತ ಪಧಾರ್ಥಗಳು, ಗೆಣಸಿನ ಅಡುಗೆಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಬರಲಿವೆ.
ಖ್ಯಾತ ಚಿತ್ರನಟ ಮತ್ತು ಪರಿಸರವಾದಿ ಸುರೇಷ್ ಹೆಬ್ಳೀಕರ್ ಮೇಳವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ. ಶ್ರೀಧರ್ ಡಿ, ತಾಂತ್ರಿಕ ಅಧಿಕಾರಿ, ಅಖಿಲ ಭಾರತ ಗೆಡ್ಡೆ ಗೆಣಸು ಸಂಶೋಧನಾ ಯೋಜನೆ, ಧಾರವಾಡ , ಕಾಶೀನಾಥ್ ಭದ್ರಣ್ಣವರ್ , ತೋಟಗಾರಿಕಾ ಉಪ ನಿರ್ದೇಶಕರು, ಧಾರವಾಡ ಜಿಲ್ಲೆ, ನೇಚರ್ ಫಸ್ಟ ಇಕೋ ವಿಲೇಜ್ ನ ಸಂಸ್ಥಾಪಕ ಪಂಚಾಕ್ಷರಿ ವಿ. ಹಿರೇಮಠ ಭಾಗವಹಿಸಲಿದ್ದಾರೆ. ಗಾಂಧೀ ಶಾಂತಿ ಪ್ರತಿಷ್ಟಾನದ ಅಧ್ಯಕ್ಷರಾದ ಡಾ.ಸಂಜೀವ್ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕದ ವಿವಿಧ ಭಾಗಗಳಿಂದ ಬರುವ ೧೫ ಕ್ಕೂ ಹೆಚ್ಚಿನ ಮಳಿಗೆಗಳು ಗೆಡ್ಡೆ ಗೆಣಸಿನ ಮೌಲ್ಯವರ್ಧಿತ ಪದಾರ್ಥ ಮತ್ತು ಬಗೆ ಬಗೆಯ ಅಡುಗೆಗಳನ್ನು ಉಣಬಡಿಸಲಿದ್ದಾರೆ.
ಕಪ್ಪು ಕ್ಯಾರೆಟ್, ಪರ್ಪಲ್ ಯಾಮ್, ಮಾವಿನ ಶುಂಠಿ, ಕೂವೆ ಗೆಡ್ಡೆ, ಉತ್ತರಿ ಗೆಡ್ಡೆ, ಪರ್ಪಲ್ ಯಾಮ್, ಬಿಳಿ ಸಿಹಿ ಗೆಣಸು, ಬಳ್ಳಿ ಬಟಾಟೆ, ಕಪ್ಪು ಅರಿಷಿಣ, ಕಪ್ಪು ಶುಂಟಿ, ಕಾಡು ಗೆಣಸು, ಮುಳ್ಳು ಗೆಣಸು, ಸುವರ್ಣ ಗೆಡ್ಡೆ, ಬಗೆ ಬಗೆಯ ಕೆಸುವಿನ ಬೀಜದ ಗೆಡ್ಡೆಗಳು ಬಿತ್ತನೆಗೆ ಸಿಗುತ್ತವೆ.
‘ಮರೆತ ಆಹಾರಗಳ ಕ್ಯಾಲೆಂಡರ್’ , ‘ಸಿರಿಧಾನ್ಯ ಕ್ಯಾಲೆಂಡರ್” , ಸಿರಿಧಾನ್ಯ ಮತ್ತು ಜವಾರಿ ಬೀಜಗಳು ಮಾರಾಟಕ್ಕೆ ಬರಲಿವೆ.
ಫಾಸ್ಟ್ ಫುಡ್ ಸಂಸ್ಕೃತಿಗೆ ಮಾರು ಹೋಗುತ್ತಿರುವ ಇಂದಿನ ಪೀಳಿಗೆಗೆ ಗೆಡ್ಡೆ ಗೆಣಸಿನ ಅಡುಗೆಗಳನ್ನು ಪರಿಚಯಿಸುವ ಉದ್ದೇಶದಿಂದ ಫೆಬ್ರವರಿ 26 ರ ಭಾನುವಾರ ಬೆಳಿಗ್ಗೆ 12.00ಕ್ಕೆ ‘ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆ’ಯನ್ನು ಏರ್ಪಡಿಸಲಾಗಿದೆ. ಅಪರೂಪದ ಅಡುಗೆ ತಯಾರಿಸಿದವರಿಗೆ ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಲಾಗುವುದು.
ವಿವರಗಳಿಗೆ ಸಂಪರ್ಕಿಸಿ: 9880908608 / 99720779989
ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆ
ಫಾಸ್ಟ್ ಫುಡ್ ಹಾಗೂ ರೆಡಿ ಟು ಈಟ್ ಆಹಾರಗಳಿಗೆ ಅಧಿಕವಾಗಿ ಮೊರೆಹೋಗುತ್ತಿರುವ ನಮ್ಮ ಇಂದಿನ ಪೀಳಿಗೆಗೆೆ ಗೆಡ್ಡೆ ಗೆಣಸಿನ ಅಡುಗೆಗಳನ್ನು ಪರಿಚಯಿಸುವ ಉದ್ದೇಶದಿಂದ ‘ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆಯನ್ನು’ ಆಯೋಜಿಸಲಾಗಿದೆ.
ಕಾಡಿನ ಅಥವಾ ಕೃಷಿ ಮೂಲದ ಗೆಡ್ಡೆ ಗೆಣಸುಗಳನ್ನು ಬಳಸಿ ತಯಾರಿಸುವ ಅಡುಗೆಗಳು ಸಾಂಪ್ರದಾಯಿಕವಾಗಿರಬಹುದು ಅಥವಾ ಹೊಸ ರುಚಿಯಾಗಿರಬಹುದು. ವಿವಿಧ ಜಾತಿಯ ಗೆಡ್ಡೆ ಗೆಣಸುಗಳನ್ನು ಬಳಸಿ ಮಾಡಿದ ಅಡುಗೆಯನ್ನು, ಮನೆಯಲ್ಲೇ ತಯಾರಿಸಿ, ಗೆಡ್ಡೆ ಗೆಣಸು ಮೇಳಕ್ಕೆ ಫೆಬ್ರವರಿ 26 ರ ಭಾನುವಾರ ಬೆಳಿಗ್ಗೆ 12 ಗಂಟೆಗೆ ತರಬೇಕು.
ಅಪರೂಪದ ಅಡುಗೆ ತಯಾರಿಸಿದವರಿಗೆ ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಲಾಗುವುದು. ಆಲೂಗೆಡ್ಡೆಯ ಹೊರತುಪಡಿಸಿ ಮಾಡಿದ ಕಾಡು ಗೆಡ್ಡೆಯ ಅಡುಗೆಗಳಿಗೆ ವಿಶೇಷ ಮನ್ನಣೆ. ಹೆಚ್ಚಿನ ಮಾಹಿತಿಗಿ
ಸಂಪರ್ಕ : 9880908608 ಕೂರಲು ಪ್ರಕಟನೆ ತಿಳಿಸಿದೆ.