29 ರಂದು ಅಂತಃಕರಣ ಫೌಂಡೇಶನ್ ಹಾಗೂ ಜೆ. ಎಸ್. ಎಸ್ ವಿಕಲ ಚೇತನ ಹಾಗೂ ಬುದ್ಧಿ ಮಾಂದ್ಯ ಮಕ್ಕಳ ವಾಷಿ೯ಕೋತ್ಸವ.

29 ರಂದು  ಅಂತಃಕರಣ ಫೌಂಡೇಶನ್ ಹಾಗೂ ಜೆ. ಎಸ್. ಎಸ್  ವಿಕಲ ಚೇತನ ಹಾಗೂ ಬುದ್ಧಿ ಮಾಂದ್ಯ ಮಕ್ಕಳ ವಾಷಿ೯ಕೋತ್ಸವ.
ಧಾರವಾಡ 25 : 
ಅಂತಃಕರಣ ಫೌಂಡೇಶನ್ ಒಂದು ನೋಂದಾಯಿತ ಸರಕಾರೇತರ ಸಂಸ್ಥೆಯಾಗಿದ್ದು, ಮೂಲತಃ ದಿವ್ಯಾಂಗ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಜೊತೆಜೊತೆಗೆ ಯುವ ಜನತೆಯಲ್ಲಿ ಸ್ವಯಂಸೇವಾ ಮನೋಭಾವವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿಯೂ ಶ್ರಮಿಸುತ್ತಿದೆ ಎಂದು ಸಂಸ್ಕೃತಿ ಪೂಜಾರ್ (ಮಳಗಿ) ತಿಳಿಸಿದರು. ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು 
ದಿವ್ಯಾಂಗರು ನಮ್ಮ ನಿಮ್ಮಂತೆ ಸಹಜ ಹಾಗೂ ಗೌರವಯುತ ಜೀವನ ಸಾಗಿಸುವ ಹಕ್ಕನ್ನು ಹೊಂದಿದ್ದು ಅವರಿಗೆ ನಮ್ಮ ಸಹಾಯ ಕಳಕಳಿ ಮಾತ್ರ ಸಾಕು.
ವಿಶೇಷ ಮಕ್ಕಳು (ವಿಭಿನ್ನ ಸಾಮರ್ಥ್ಯ ಹೊಂದಿದ) ಹಾಗೂ ಅಂಗವಿಕಲ ಮಕ್ಕಳಿಗಾಗಿ ಹಮ್ಮಿಕೊಳ್ಳುವ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮ “ಸಾಂತ್ವನ”, ವಿಶೇಷ ಹಾಗೂ ವಿಕಲಾಂಗ ಮಕ್ಕಳು ಸಮಾಜದ ಭಾಗ, ಅವರನ್ನು ಸಮಾಜ ಒಪ್ಪಿಕೊಳ್ಳಬೇಕು ಹಾಗೂ ಅವರನ್ನು ಮುಖ್ಯ ಭೂಮಿಕೆಗೆ ತರಬೇಕು ಎಂಬ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಅಂತಃಕರಣ ಫೌಂಡೇಶನ್ (ರಿ) ಹಮ್ಮಿಕೊಳ್ಳುತ್ತಿದೆ. ಕಳೆದ ಹನ್ನೆರಡು ವರ್ಷಗಳಿಂದ ಯಶಸ್ವಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೋವಿಡ್ 19 ರ ಸುರಕ್ಷತೆಯ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸಿರಲಿಲ್ಲ.
ಈ ವರ್ಷದಿಂದ ಮತ್ತೆ ಸಾಂತ್ವನವನ್ನು ಆಯೋಜಿಸಲು ತೀರ್ಮಾನಿಸಲಾಗಿರುವಂತೆ, ಇದೇ ದಿ; 29  ಭಾನುವಾರದಂದು ಅಂತಃಕರಣ ಫೌಂಡೇಶನ್ ಹಾಗೂ ಜೆ. ಎಸ್. ಎಸ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಹುಬ್ಬಳ್ಳಿ- ಧಾರವಾಡ, ಬೈಲಹೊಂಗಲ್, ಶಿರಸಿ, ಸವದತ್ತಿ ಹಾಗೂ ಲಕ್ಷ್ಮೀಶ್ವರದ ಎಂಟು ಬುದ್ಧಿಮಾಂದ್ಯ ಮಕ್ಕಳ, ಒಂದು ಕುರುಡ ಮಕ್ಕಳ, ಮೂರು ಕಿವುಡ ಮೂಕ ಮಕ್ಕಳ, ಒಂದು ಅಂಗವಿಕಲ ಮಕ್ಕಳ ಮತ್ತು ಒಂದು ಅನಥಾಶ್ರಮದ ಮಕ್ಕಳ ಸಂಸ್ಥೆ, ಹೀಗೆ ಒಟ್ಟು 14 ಶಾಲಾ ಸಂಸ್ಥೆಗಳ ಸುಮಾರು 200 ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಪಾಲಕರು/ಪೋಷಕರು ವಿವಿಧ ಶಾಲಾ ಕಾಲೇಜುಗಳ ನೂರಾರು ಸ್ವಯಂಸೇವಕರು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ನಮ್ಮ ಫೌಂಡೇಶನ್, ದಿವ್ಯಾಂಗ ಮಕ್ಕಳ ಜನರ ಸೇವೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿ/ಸಂಸ್ಥೆಗಳನ್ನು ಗುರುತಿಸಿ ಅವರಿಗೆ ಅಂತಃಕರಣ  ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ. ಅದರಂತೆ     ದಿವ್ಯಾಂಗರ ಹಾಗೂ ದಿವ್ಯಾಂಗ ಶಾಲಾ ಕಾಲೇಜು ಮಕ್ಕಳ ಹಾಗೂ ಬಡ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಉದಾರವಾಗಿ ಸಹಾಯ ಮಾಡುತ್ತಿರುವ, ನಮ್ಮ ಫೌಂಡೇಶನ್ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತು ಸದಾ ನಮಗೆ ಆಶೀರ್ವಾದ ಮಾರ್ಗದರ್ಶನ ನೀಡುತ್ತಿರುವ ಒಂದರ್ಥದಲ್ಲಿ ಫೌಂಡಶನ್ನಿನ ಮಹಾಪೋಷಕರಂತಿರುವ, ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ  ಡಾ. ಅಜಿತಪ್ರಸಾದರಿಗೆ ಈ ವರ್ಷದ  2022-23ನೆ ಸಾಲಿನ ಅಂತಃಕರಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ಸದರೀ ಪ್ರಶಸ್ತಿಯು ರೂ.10000 ನಗದು, ಶಾಲು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು
ಒಳಗೊಂಡಿದೆ ಎಂದು ತಿಳಿಸಿದರು,

ಹುಬ್ಬಳ್ಳಿಯ ಖ್ಯಾತ ಮಕ್ಕಳ ಆರೋಗ್ಯ ತಜ್ಞ ಡಾ. ಮಹೇಶ್ ಹೊಳೆಯಣ್ಣವರ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರಲ್ಲದೇ ಪಾಲಕ/ಪೋಷಕರೊಂದಿಗೆ ಸಂವಾದವನ್ನೂ ನಡೆಸಿಕೊಡಲಿದ್ದಾರೆ.ಕಾಯ೯ಕ್ರಮದ ಅಧ್ಯಕ್ಷತೆಯನ್ನು ಹುಬ್ಬಳ್ಳಿಯ ಕೇಂದ್ರ ಸರಕಾರಿ ಸಾಂಖ್ಯಿಕ ವಿಭಾಗದ ಕಚೇರಿಯಲ್ಲಿ ಹಿರಿಯ ಸಾಂಖ್ಯಿಕ ಅಧಿಕಾರಿಯಾಗಿರುವ  ಪ್ರಮೋದ್ ಪಂಡಿತ್ ಅವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ದಿವ್ಯಾಂಗರ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ನಿತ್ಯಸಾಧನಾ ವೃತ್ತಿಪರ ತರಬೇತಿ ಸಂಸ್ಥೆಯ ವ್ಯವಸ್ಥಾಪಕ ವಿಶ್ವಸ್ಥೆಯಾಗಿರುವ ಶ್ರೀಮತಿ ಹೇಮಾ ನಟರಾಜ್ ಇವರನ್ನು ಸನ್ಮಾನಸಲಾಗುವುದು.

ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ದಿನಾಂಕ 28  ರ ಸಾಯಂಕಾಲ ನಗರದ ನುಗ್ಗಿಕೇರಿ ಹನುಮಂತ ದೇವರ ದೇವಸ್ಥಾನದ ಆವರಣದಲ್ಲಿ ಫ್ಲ್ಯಾಶ್ ಮಾಬ್ ಜನಜಾಗೃತಿ ಕಾರ್ಯಕ್ರಮವನ್ನು ನಮ್ಮ ಫೌಂಡೆಶನ್ನಿನ ಸದಸ್ಯರು ನೃತ್ಯ ಶಾಲೆಯ ಮಕ್ಕಳ ಸಹಯೋಗದಲ್ಲಿ ನಡೆಸಿಕೊಡಲಿದ್ದಾರೆ.
ಸರಕಾರಿ ಅಂಧ ಮಕ್ಕಳ ಶಾಲೆ, ಹುಬ್ಬಳ್ಳಿ .ಡಾ: ರುಡಾಲ್ಪ ಸೈನರ್ಸ ಎಜ್ಯುಕೇಶನಲ್ ಬುದ್ಧಿಮಾಂದ್ಯ ಮಕ್ಕಳ ಶಾಲೆ ಧಾರವಾಡ , ಉಷಸ್ ಬುದ್ಧಿಮಾಂದ್ಯ ಮಕ್ಕಳ ಶಾಲೆ ಹುಬ್ಬಳ್ಳಿ , ಮಮತಾ ಶಿಕ್ಷಣ ಸಂಸ್ಥೆ ಬುದ್ಧಿಮಾಂದ್ಯ ಮಕ್ಕಳ ಶಾಲೆ ಧಾರವಾಡ , ಹೊನ್ನಮ್ಮ ಶಿಕ್ಷಣ ಸಂಸ್ಥೆ ಕಿವುಡು ಮಕ್ಕಳ ಶಾಲೆ ಧಾರವಾಡ , ಕ್ಯಾರಮೆಲ್ ಬುದ್ಧಿಮಾಂದ್ಯ ಮಕ್ಕಳ ಶಾಲೆ ಬೈಲಹೊಂಗಲ್ , ವಿಶ್ವಧರ್ಮ ಅಂಗವಿಕಲ ಮಕ್ಕಳ ಶಾಲೆ ಹುಬ್ಬಳ್ಳಿ, 8.ಶ್ರೀ ಬಿ ಡಿ ತಟ್ಟಿ(ಎ)ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಕಿವುಡು ಮೂಗ ಮಕ್ಕಳ ಶಾಲೆ ಲಕ್ಷೇಶ್ವರ , ಶ್ರೀರೇಣುಕಾ ಕೃಪಾ ಬುದ್ಧಿಮಾಂದ್ಯ ಮಕ್ಕಳ ಶಾಲೆ ಸವದತ್ತಿ. ರೋಟರಿ ಬುದ್ಧಮಾಂದ್ಯ ಮಕ್ಕಳ ಶಾಲೆ ಹುಬ್ಬಳ್ಳಿ , ಪ್ರಿಯದರ್ಶಿನಿ ಕಿವುಡು ಮೂಗ ಮಕ್ಕಳ ಶಾಲೆ ಹುಬ್ಬಳ್ಳಿ , ಬುದ್ಧಿಮಂದ್ಯ ಮಕ್ಕಳಶಾಲೆ ಶಿರಶಿ , ಉಡಾನ್ ಫೌಂಡೇಶನ್ ಹುಬ್ಬಳ್ಳಿಯ ಬುದ್ಧಿಮಾಂದ್ಯ ಮಕ್ಕಳ ಶಾಲೆ ಹಾಗೂ , ಹೆಲ್ಸಿಂಗ್ ಹ್ಯಾಂಡ್ ಮಕ್ಕಳ ಅನಾಥಾಶ್ರಮ ಸಂಸ್ಥೆ ಧಾರವಾಡ.ಭಾಗವಹಿಸುವ ಶಾಲೆ/ಸಂಸ್ಥೆಗಳಾಗಿವೆ ಎಂದು ಹೇಳಿದರು.  
ಮಹಾವೀರ ಉಪಾಧ್ಯಾಯ ,ಹನುಮೇಶ ಮಳಗಿ ಪತ್ರೀಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

SUBSCRIBE OUR STAR 74 NEWS CHANNEL
ನವೀನ ಹಳೆಯದು

نموذج الاتصال