ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಡಾಕ್ಟರ್ ಬಾಬು ಜಗಜೀವನ್ ರಾo ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಧಾರವಾಡ ಜಿಲ್ಲೆ ಹಮ್ಮಿಕೊಂಡಿರುವ ಚರ್ಮ ಕುಶಲ ಕರ್ಮಿಗಳ ಕುಂದು ಕೊರತೆ ಸಭೆ ಆಯೋಜಿಸಲಾಗಿತ್ತು, ಅದರಂತೆ ಧಾರವಾಡ ಜಿಲ್ಲೆಯ ಚರ್ಮ ಕುಶಲಕರ್ಮಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಕುರಿತು ಸಭೆಯಲ್ಲಿ ಚರ್ಚಿಸಲಾಯಿತು,
ಮೊದಲನೆಯದಾಗಿ ಧಾರವಾಡ ಸೂಪರ ಪರ್ಮಾರ್ ಲೆಟ್ಫಪ ಪರ್ಮಾರ್ ಲೆಟ್ ನಲ್ಲಿರುವ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಖುಲ್ಲಾ ಜಾಗವನ್ನು ಪಾದರಕ್ಷೆಗಳನ್ನು ತಯಾರಿಸುವ ಕುಶಲಕರ್ಮಿಗಳಿಗೆ ಉತ್ಪನ್ನಗಳ ಮಾರಾಟ ಮಾಡಲು ಅಂಗಡಿಗಳನ್ನು ನಿರ್ಮಿಸಿಕೊಳ್ಳಲು ಪಾಲಿಕೆಯಿಂದ ಭೂಬಾಡೆ ನಾತಿಯಿಂದ ಜಾಗವನ್ನು ಮಂಜೂರು ಮಾಡಲು ಪ್ರಸ್ತಾಪಿಸಲಾಯಿತು, ಮಹಾನಗರ ಪಾಲಿಕೆಯಿಂದ ಶೇ 18/ರ ಅಡಿಯಲ್ಲಿ ಹುಬ್ಬಳ್ಳಿ ಧಾರವಾಡದಲ್ಲಿ ನೀಡಿರುವ ಕುಟೀರಗಳಿಗೆ ಜಿಪಿಎಸ್ ಫೋಟೋಗಳನ್ನು ತೆಗೆದು ಪಾದುಕೆ ಪ್ರಮಾಣ ಪತ್ರವನ್ನು ನೀಡಿ ಪಾದರಕ್ಷೆಗಳ ದುರಸ್ತಿ ಮಾಡುವ ಕುಶಲಕರ್ಮಿಗಳಿಗೆ ಚರ್ಮ ಕುಶಲಕರ್ಮಿಗಳ ಸಾಮಗ್ರಿಗಳನ್ನು ನೀಡಲು ಮನವಿ ಮಾಡಲಾಯಿತು, ಈಗಾಗಲೇ ಈ ಹಿಂದೆ ಪಾಲಿಕೆ ವತಿಯಿಂದ ಹುಬ್ಬಳ್ಳಿ ಧಾರವಾಡ ದಲ್ಲಿ ಲಿಡ್ಕರ್ ಕುಟ್ಟಿರಗಳನ್ನು ಮಂಜೂರು ಮಾಡಿ 18 ವರ್ಷಗಳು ಪೂರ್ಣಗೊಂಡಿದು ಕುಟೀರಗಳು ಸಂಪೂರ್ಣ ಹದಿಗೆಟ್ಟಿವೆ ಲಿಡ್ಕರ್ ಕುಟಿರಗಳನ್ನು ನವೀಕರಣಗೊಳಿಸಲು ಹಾಗೂ ಕುಟಿರ ಗಳಿಗೆ ಲೈಸೆನ್ಸ್ ಗಳನ್ನು ನೀಡಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಸಹಾಯಧನ ಮಂಜೂರು ಮಾಡಲು ಒತ್ತಾಯ ಮಾಡಲಾಯಿತು,
ಚರ್ಮಗಾರಿಕೆಯಲ್ಲಿ ತರಬೇತಿ ಪಡೆದಂತ ಕುಶಲಕರ್ಮಿಗಳಿಗೆ ಜಿಲ್ಲಾ ತರಬೇತಿ ಕೇಂದ್ರ ರಾಯಾಪುರ್ D I C. District industrial Corporation of India ಇವರಿಂದ ಪ್ರತಿಯೊಬ್ಬ ಫಲಾನುಭವಿಗಳಿಗೆ ಉತ್ಪನ್ನಗಳನ್ನು ತಯಾರಿಸಲು 10 ಗುಂಟೆ ಜಾಗಯನ್ನು ಮಂಜೂರು ಮಾಡಲು ಬೇಡಿಕೆ , ಇತ್ತೀಚೆಗೆ ಧಾರವಾಡದಲ್ಲಿ ಜಿ ಪ್ಲಸ್ ಟು ವಸತಿ ನಿರ್ಮಾಣ ಕಾರ್ಯ ಮಾಡುತ್ತಿದ್ದು ಸಂಪೂರ್ಣ ಕಳಪೆ ಮಟ್ಟದ್ದು ಆಗಿರುತ್ತದೆ ಹಾಗೂ ಚಿಕ್ಕ ಪ್ರಮಾಣದಲ್ಲಿ ಮನೆಗಳನ್ನು ಕಟ್ಟುತ್ತಿದ್ದು ಇದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಚರ್ಮ ಕುಶಲಕರ್ಮಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಹಾಗು ನಗರ ಸಭೆ. ಪುರಸಭೆ. ಗ್ರಾಮ ಪಂಚಾಯಿತಿ. ನಿರ್ಮಾಣ ಮಾಡುತ್ತಿರುವ ವಾಣಿಜ್ಯ ಸಂಕೀರ್ಣಗಳಲ್ಲಿ ಚರ್ಮ ಕಾರರಿಗೆ ಮಳಿಗೆಗಳನ್ನು ಮೀಸಲಿಡಲು ಸಭೆಯಲ್ಲಿ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ. ಲಿಡ್ಕರ್ ಸಂಯೋಜಕರು. ನಾಮನಿರ್ದೇಶಿತ ಸದಸ್ಯರುಗಳಾದ ಗುರುನಾಥ್ ಉಳ್ಳಿಕಾಶಿ, ಅಶೋಕ್ ಭಂಡಾರಿ, ಶ್ರೀಮತಿ ನೇತ್ರಾ ಗುರ್ಲ್ ಹೊಸೂರ್ , ಪ್ರವೀಣ್ ಪವಾರ್ , ಬರಮಪ್ಪ ಹರಿಜನ್ , ಕಾರ್ಮಿಕ ಅಧಿಕಾರಿಗಳು ಜಿಲ್ಲಾ ಸಮನ್ವಯ ಅಧಿಕಾರಿಗಳು ಕರ್ನಾಟಕ ವಸತಿ ಶಿಕ್ಷಣ ಸಂಘ. ಧಾರವಾಡ ಜಿಲ್ಲೆ. ಲೀಡ್ ಬ್ಯಾಂಕ್ ಮ್ಯಾನೇಜರ್, ಧಾರವಾಡ ಜಿಲ್ಲೆ ಉಪಸ್ಥಿತರಿದ್ದರು
SUBSCRIBE OUR STAR 74 NEWS CHANNEL LIKE SHARE.
ಸುದ್ದಿ ಹಾಗೂ ಜಾಹಿರಾತಿಗಾಗ ಸಮರ್ಪಕಿಸಿ.
(M)9945564891