ಇಂದು ಮುಂಡಗೋಡ ಪಟ್ಟಣದ ಎಲ್. ವಿ. ಕೆ. ಸಭಾ ಭವನದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಯಿತು.

ಇಂದು  ಮುಂಡಗೋಡ ಪಟ್ಟಣದ ಎಲ್. ವಿ. ಕೆ. ಸಭಾ ಭವನದಲ್ಲಿ   ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಯಿತು.
  ಲಿಂಗ ಸಮಾನತೆ, ಮಾನವ ಹಕ್ಕುಗಳು, ಬಾಲ್ಯವಿವಾಹ ತಡೆ, ಪೊಸ್ಕೋ ವಿಷಯದ ಕುರಿತು  ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಙಸ್ಥೆ ಮುಂಡಗೋಡ ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿ ಮುಂಡಗೋಡ ಇವರು ಜಂಟಿಯಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ. ಕೇಶವ. ಕೆ ಮಾನ್ಯ ನ್ಯಾಯಾಧೀಶರು, ಕಾರ್ಯದರ್ಶಿಗಳು ಕಾನೂನು ಸೇವಾ ಸಮಿತಿ ಮುಂಡಗೋಡ  ಉದ್ಘಾಟನೆ ಮಾಡಿ ಮಾತನಾಡುತ್ತಾ " ಸಂವಿಧಾನ ವನ್ನು ಗೌರವಿಸಬೇಕು ಮತ್ತು ಸಾಧನೆ ಮಾಡಿ ತೋರಿಸಬೇಕು ಸಾಧನೆ ಎಂದರೆ ಕೇವಲ ಭೌತಿಕ ಸಂಪತ್ತು ಅಲ್ಲ ಅದು ತಂದೆ - ತಾಯಿಗೆ ನೀಡುವುದು. ಪ್ರತಿಯೊಬ್ಬರು ಕಾನೂನುಗಳನ್ನು ಪಾಲಿಸಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು "
 
ಉಪನ್ಯಾಸಕಿತಾಗಿ -   ಡಾ. ಇಸಾಬೆಲ್ಲಾ ಝೇವಿಯರ್  ಮಾತನಾಡುತ್ತಾ " ಪೋಸ್ಕೊ ಕಾಯಿದೆ ಅತ್ಯಂತ ಉತ್ತಮ ಕಾನೂನುವಾಗಿದ್ದು, ಮಹಿಳೆಯರನ್ನು  ಪ್ರತಿ ಹಂತದಲ್ಲಿ ರಕ್ಷಣೆ ಅವಶ್ಯವಾಗಿದೆ. ಹೆಣ್ಣು ಮಕ್ಕಳು ಸಮಾಜದಲ್ಲಿ ತಮ್ಮದೇ ಅದ ಹಕ್ಕುಗಳನ್ನು  ಹೊಂದಿದ್ದು ಅದಕ್ಕೆ ಮೂಲ ಕಾರಣ ಡಾ. ಬಿ. ಆರ್. ಅಂಬೇಡ್ಕರ ಕೊಟ್ಟ ಸಂವಿಧಾನ.  ಹಿಂದೂಗಳಿಗೆ ಭಗದತ್ ಗೀತೆ, ಮುಸಲ್ಮಾನರಿಗೆ ಖುರಾನ್ ಹಾಗೂ ಕ್ರೈಸ್ತರಿಗೆ ಭೈಬಲ್ ಧರ್ಮಗ್ರಂಥವಾದರೆ ಭಾರತ ದೇಶಕ್ಕೆ ಭಾರತದ ಸಂವಿಧಾನವೇ ಧರ್ಮಗ್ರಂಥವಾಗಿದೆ.
ಇಷ್ಟೆಲ್ಲ ಸಂವಿಧಾನದ ಹಕ್ಕುಗಳು ಇದ್ದರು ಸಹ ಇಂದಿಗೂ ನಿರಂತರವಾಗಿ ,ಜಾತಿ ನಿಂದನೆ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜ ನ್ಯ ನಿಂತಿಲ್ಲ.
೧೨-೧೦-೧೯೯೩ ರಲ್ಲಿ ಭಾರತದಲ್ಲಿ ಮಾನವ  ಹಕ್ಕುಗಳ  ಆಯೋಗ ರಚನೆಗೊಂಡರು ಸಹ ಕರ್ನಾಟಕದಲ್ಲಿ ೨೦೦೭ ರಲ್ಲಿ ಮಾನವ ಹಕ್ಕುಗಳ ಆಯೋಗ ರಚನೆಗೊಂಡಿತು.
 ಹಾಗಾಗಿ ಎಲ್ಲರೂ ಸಂವಿಧಾನ ಗೌರವಿಸಬೇಕು ಎಂದು ಉಪನ್ಯಾಸ ಮಾಡಿದರು.
ಮುಖ್ಯ ಅತಿಥಿಗಳು ಶ್ರೀ. ಜಿ. ಎಸ್. ಕಾತೂರ ಮಾತನಾಡಿದರು. ಮಾತೋರ್ವ  ಮುಖ್ಯ ಅತಿಥಿಗಳಾದ ಶ್ರೀ. ಆರ್. ಎಂ. ಮಳಗಿಕರ ವಕೀಲರು ಮಾತನಾಡುತ್ತಾ  ಸಂವಿಧಾನ ನಮ್ಮೆಲರ ಬದುಕು ಕಟ್ಟಿಕೊಟ್ಟಿದೆ. ಯಾರು ಇತಿಹಾಸ ಗೊತ್ತಿಲ್ಲದವರು ಇತಿಹಾಸ ಸೃಷ್ಟಿ ಮಾಡಲಾರರು  ಹಾಗಾಗಿ ಸಂವಿಧಾನ  ಗೌರವಿಸಬೇಕು ಮತ್ತು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಸಂವಿಧಾನ ಭಾರತ ಸಂವಿಧಾನ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ. ಸಹದೇವಪ್ಪ. ಈ
ನಡಗೇರಿಯನ್ನು ಸಾಧನಾ ಸಂಸ್ಥೆಯ ಸಂಸ್ಥಾಪಕರು ಡಾ. ಇಸಬೆಲ್ಲಾ ಝೇವಿಯರ್ ಮತ್ತು ವೇದಿಕೆ ಮೇಲಿರುವ ಗಣ್ಯ ಮಾನ್ಯರು ಸನ್ಮಾನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದೀಪಾ. ಬಂಗೇರಾ ಅಧ್ಯಕ್ಷಿಯ ಬಾಷಣ ಮಾಡುತ್ತಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹಲವಾರು  ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು 
 ಸಾಧನಾ ಮಹಿಳಾ ಸಾಂತ್ವನ ಕೇಂದ್ರದ ಉಪಯೋಗ ಪಡೆದುಕೊಳ್ಳಲು ಕರೆ ನೀಡಿದರು.
  ಅತಿಥಿಗಳನ್ನು ಶ್ರೀ. ಎಸ್. ಡಿ.ಮುಡೆಣ್ಣವರ ಮುಖ್ಯ ಶಿಕ್ಷಕರು, ಆದಿ ಜಾಂಭವ ಪ್ರೌಢ ಶಾಲೆ, ಮುಂಡಗೋಡರವರು  ಸ್ವಾಗತ ಮಾಡಿದರು ಮತ್ತು ಪ್ರಾಸ್ತವಿಕ ಮಾತನಾಡಿ ಸಾಧನ ಸಂಸ್ಥೆಯ ದೇಯೋದ್ದೇಶಗಳನ್ನು  ತಿಳಿಸಿದರು. ಪ್ರಾಥನೆಯನ್ನು ರೋಟರಿ ಶಾಲೆಯ ವಿದ್ಯಾರ್ಥಿಗಳು ಮಾಡಿದರು. ಕಾರ್ಯಕ್ರಮ ನಿರೂಪಣೆಯನ್ನು  ಶ್ರೀ. ರಮೇಶ. ಪವಾರ ಸಹ ಶಿಕ್ಷಕರು, ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ,
 ಮುಂಡಗೋಡನಿರ್ವಹಿಸಿದರು. ಕೊನೆಯಲ್ಲಿ ಡಾ. ಇಸಬೆಲ್ಲಾ. ಝೇವಿಯರ್ ರವರು ವೇದಿಕೆ ಮೇಲಿದ್ದ ಅತಿಥಿ ಮಾನ್ಯರನ್ನು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀ. ನಾಗರಾಜ. ನಾಯ್ಕ, 
ಬಿಬಿ ಅಮೀನಾ. ಅಂಬುರ, ಎಸ್. ಬಿ. ಹೂಗಾರ, ಸಂಗಪ್ಪ. ಕೋಳೂರು, ಸಾಯಿರಾಬಾನು, ರೋಟರಿ ಶಾಲೆ, ಆದಿ ಜಾಂಬವ ಪ್ರೌಢ ಶಾಲೆ, ಮೌಲನಾ ಅಜಾದ ಶಾಲೆ, ಲೋಟಸ್ ಬಾಲಕಿಯರ ಪ್ರೌಢ ಶಾಲೆ, ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಮುಂಡಗೋಡ, ದಸ್ತಗಿರಿಯಾ ಉರ್ದು ಪ್ರೌಢ ಶಾಲೆ, ಮುಂಡಗೋಡ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಹಾಜರಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕಗಳನ್ನು ಉಚಿತವಾಗಿ ಸಾಧನ ಸಂಸ್ಥೆಯರು ನೀಡಿದರು.
ಇದೆ ಸಂಧರ್ಭದಲ್ಲಿ ಅಮೀನಾ ಅಂಬೊರೆ ಮತ್ತು‌ಶ್ರೀ‌ಮುಡಣ್ಣನವರ ಗುರುಗಳನ್ನು ಸಾಧನಾ ಸಂಸ್ಥೆಯವತಿಯಿಂದ ಗೌರವಿಸಲಾಯಿತು.
STAR 74 NEWS CHANNEL DO SUBSCRIBE LIKE SHARE.
ನವೀನ ಹಳೆಯದು

نموذج الاتصال