ಕಲಾವಿದರ ಬಗ್ಗೆ ಸಕಾ೯ರದ ನಿಲ೯ಕ್ಷ-- ಮಲಕಾರಿ ಆಕ್ರೋಶ


ಕಲಾವಿದರ ಬಗ್ಗೆ ಸಕಾ೯ರದ ನಿಲ೯ಕ್ಷ
-- ಮಲಕಾರಿ ಆಕ್ರೋಶ
  ಧಾರವಾಡ 22  : ಕಲಾವಿದರ ಬಗ್ಗೆ ಸಕಾ೯ರದ ನಿಲ೯ಕ್ಷ ಧೋರಣೆ ಅಕ್ಷಮ್ಯ. ಕಲಾವಿದರ ಬದುಕು ಕಟ್ಟಿ ಕೊಡಬೇಕಾದದ್ದು ಸರಕಾರದ ಕರ್ತವ್ಯ ಅದನ್ನು ಮರೆತರೆ ಕಲಾವಿದರೆಲ್ಲ ಬಿದಿಗಿಳಿದು ಹೋರಾಟಮಾಡಬೇಕಾಗುತ್ತದೆ ಎಂದು ಸಮಾಜ ಸೆವಕರು ಹಾಗೂ ಕಾಂಗ್ರೆಸ್ ಮುಖಂಡರಾದ  ಬಸವರಾಜ ಮಲಕಾರಿ ಹೇಳಿದರು.
    ಶ್ರೀ ಮಹರ್ಷಿವಾಲ್ಮೀಕಿ ನಾಯಕ ಅಭಿವೃದ್ದಿ ಸಂಘ (ಪ.ಪಂ) 
ಚಿಕ್ಕಮಲ್ಲಿಗವಾಡ  ಹಾಗೂ ಕನ್ನಡ ಮತ್ತು 
ಸಂಸೃತಿ ಇಲಾಖೆ ಬೆಂಗಳೂರು ಇವುಗಳ ಸಂಯುಕ್ತಾ ಶ್ರಯದಲ್ಲಿ ರಂಗಾಯಣದಲ್ಲಿ ನಡೆದ ಸಂಸ್ಕೃತಿ ಸಂಭ್ರ್ರಮ 
2022-23 ನ್ನು ಚಂಡ್ಯೆ ಭಾರಿಸುವದರ ಮುಖಾಂತರ ಉದ್ಘಾಟಿಸಿದರು ಮಾತನಾಡಿದರು.
   ಸರ್ಕಾರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಮಗ್ರ ಕರ್ನಾಟಕದ ಕಲಾವಿಧರ ಪರಿಕಲ್ಪನೆಯಲ್ಲಿ 
ಕಾರ್ಯನಿರ್ವಹಿಸಬೇಕಾಗುತ್ತದೆ ಆದರೆ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ 
ಸಚಿವರು ಮಲತಾಯಿ ದೊರಣೆಯಿಂದ ದಕ್ಷಿಣ ಕರ್ನಾಟಕ ಹಾಗೂ 
ಕರಾವಳಿ ಭಾಗದ ಜಿಲ್ಲೆಗಳಿಗೆ ಮಹತ್ವವನ್ನು ಕೂಡುತ್ತ ಉತ್ತರ ಕರ್ನಾಟಕದ ಕಲೆ ಹಾಗೂ ಕಲಾವಿಧರಿಗೆ ಅನ್ಯಾಯ 
ಮಾಡುತ್ತಿದ್ದು ಅದನ್ನು ಸರಿ ಪಡಿಸಿಕೊಳ್ಳದಿದ್ದರೆ ಕಲಾವಿಧರು 
ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾ
ರೆಂದು ಕಾರವಾಗಿ ನುಡಿದರು. 
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ  ಕುಮಾರ ಬೆಕ್ಕೇರಿ 
ಮಾತನಾಡಿ, ಕರ್ನಾಟಕದಲ್ಲಿ ಧಾರವಾಡ ಜಿಲ್ಲೆ ಕಲೆಯ ತವರೂರು ಸುಮಾರು 70 ರಿಂದ 80 ಕಲಾಸಂಘ ಸಂಸ್ಥೆಗಳನ್ನು ಧನ 
ಸಹಾಯಕ್ಕಾಗಿ ಮಂಜೂರುಗೊಳಿಸಿದ್ದು 280 ಕಲಾವಿದರಿಗೆ ಮಾಶಾಸನ ಮಂಜೂರು ಮಾಡಲಾಗಿದೆ. ದಾಖಲೆಗಳು ಸರಿಯಾಗಿ 
ನಿರ್ವಹಿಸಿದ ಸಂಘ ಸಂಸ್ಥೆಗಳನ್ನು ಮಾತ್ರ ರದ್ದುಗೊಳಿಸಿದ್ದು ಅವುಗಳಿಗೂ ದಾಖಲೆಗಳನ್ನು ಸರಿ ಪಡಿಸಿಕೊಳ್ಳಲು ತಿಳಿಸಲಾಗಿದೆ. ಈಗ ಧಾರವಾಡದಲ್ಲಿ ಸಂಸ್ಕøತಿ ಸುಗ್ಗಿಯೆ ಪ್ರಾರಂಭವಾಗಿದ್ದು 
ಕಲಾವಿದರ ಸಹಾಯ ಸಹಕಾರಕ್ಕಾಗಿ ಶ್ರಮಿಸುವುದಾಗಿ ಹೇಳಿದರೂ 
    ಕಾಯ೯ಕ್ರಮದ  ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ 
ಮಹಾದೇವ ದೊಡ್ಡಮನಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ 
ಉಳಿದಿದ್ದು ಉತ್ತರ ಕರ್ನಾಟಕದ ಜಾನಪದ ಕಲಾವಿಧರ ಹಾಗೂ ಸರಕಾರಿ ಶಾಲೆಗಳಿಂದ ಮಾತ್ರ ಬೆಂಗಳೂರು ಬಹುತೇಕ 
ಚಲನಚಿತ್ರ ನಟರು ಕಿರುತೆರೆ ನಟರು ಟಿವಿಗಳ: ಸಹಿತ 
ಅರ್ಧಂಭರ್ಧ ಕನ್ನಡದಲ್ಲಿ ಮಾತನಾಡಿ, ಕನ್ನಡಕ್ಕೆ ದ್ರೋಹ ಮಾಡುತ್ತಿರುವುದು ವಿಚಾದನೀಯ ಕನ್ನಡ ಮತ್ತು ಸಂಸ್ಕøತಿ 
ಇಲಾಖೆ ಹೊಸ ನೀತಿಯಿಂದ ಕಲಾವಿಧರು ಕಂಗಾಲಿದ್ದು ಡಿಸೆಂಬರ 31ರ 

ವಳಗಾಗಿ 3 ಕಾರ್ಯಕ್ರಮಗಳನ್ನು ಮಾಡಬೇಕು ಎಂಬ ನಿಯಮ,ವನ್ನು ಮಾಡಿದ್ದರಿಂದ ಕಲಾವಿಧರು ತಮ್ಮ ಬಂಗಾರದ ವಸ್ತ್ರ ವಡವೆಗಳನ್ನು ಒತ್ತೆ ಇಟ್ಟು ಇಲ್ಲ ಬಡ್ಡಿ ಸಾಲ ತೆಗೆದು ಕಾರ್ಯಕ್ರಮಗಳನ್ನು ಮಾಡುತ್ತಿದ್ದು  ಕಲಾವಿಧರು ಮುಂದಿನ 
ಚುಣಾವಣೆಯಲ್ಲಿ ಪಾಠಕಲಿಸಲು ತಯಾರಿ ನಡೆಸಿಕೊಂಡಿದ್ದಾರೆ ಎಂಬ ಮಾಹಿತಿ ಕಲಾವಿದರು ಹರಿದಾಡುತ್ತಿದ್ದು ಸರ್ಕಾರ 
ಎಚ್ಚರಗೊಳ್ಳಬೇಕಾಗಿದೆ ಎಂದರು  ಇದೇ 
    ಇದೇ ಸಂಧರ್ಬದಲ್ಲಿ  ಲಕ್ಷ್ಮಣ ಬಕ್ಕಾಯಿ ಹಾಗೂ  ಬಸವಂತಪ್ಪ ರೋಣದ ಅವರಿಗೆ “ಕಲಾತಪಸ್ವಿ” ಎಂಬ ಬಿರುದುಕೊಟ್ಟು ಸನ್ಮಾನಿಸಲಾಯಿತು. 
    ನಂತರ “ಮಹಾಭಾರತ ನಾಟಕ” ಪ್ರದರ್ಶನ ಗೊಂಡಿತು. ಸೊಬಾನ ಪದಗಳ 
ಸ್ಪರ್ಧೇಯಲ್ಲಿ ತಡಸಿನಕೊಪ್ಪ ಶ್ರೀ ದುರ್ಗಾದೇವಿ ತಮಡ 
ಪ್ರಥಮ ದುಮ್ಮವಾಡ ಶ್ರೀ ವಾಲ್ಮೀಕಿ ತಂಡ ದ್ವಿತೀಯ ಹಿರೆಹೊನ್ನಳ್ಳಿ ಬಸವೆಶ್ವರ ತಂ<ಡ ದ್ವಿತೀಯ ಬಹುಮಾನ 
ಪಡದರು, ವೇದಿಕೆಯಲ್ಲಿ ನಿವೃತ್ತ ಪ್ರಾಚಾಯ೯ ತಿಪ್ಪಣ ತಳವಾರ, ನಾರಾಯಣ ದೇಸಾಯಿ, ಫಕ್ಕೀರಪ್ಪ ನಡುವಿನಮನಿ ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال