ಹುಬ್ಬಳ್ಳಿ ಜೆ ಜಿ ಕಾಲೇಜ 1989 ರ ಕಲಿತ ವಿಧ್ಯಾರ್ಥಿಗಳ ಸ್ನೇಹ ಸಮ್ಮೇಳನ
ಹುಬ್ಬಳ್ಳಿ : ಹುಬ್ಬಳ್ಳಿಯ ಜೆ.ಜಿ ಕಾಲೇಜ್ ಆಫ್ ಕಾಮರ್ಸ್ ನಲ್ಲಿ 34 ವರ್ಷಗಳ ಹಿಂದೆ ವ್ಯಾಸಂಗ ಪೂಣ೯ಗೊಳಸಿದ ವಿಧ್ಯಾರ್ಥಿ ಸ್ನೇಹ ಸಮ್ಮೇಳನ ಇತ್ತೀಚಿಗೆ ಜರುಗಿತು, ದೇಶ ವಿದೇಶಗಳಿಂದ 81 ಜನ ಸ್ನೇಹಿತರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು ವಿಷೇಷವಾಗಿತ್ತು . ಜಿ.ಜಿ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಲ್.ಪಾಟೀಲ್ ಹಾಗೂ ಡಾ. ವಿಶ್ವನಾಥ್. ಕೊರವಿ ಅವರು ಬಂದಂತಹ ಸ್ನೇಹಿತರಿಗೆ ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ರಾಷ್ಟ್ರ ಗೀತೆಯನ್ನು ಹಾಡಿ , ಕಾಲೇಜಿನ ಮೆಟ್ಟಿಲುಗಳ ಮೇಲೆ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ಎಲ್ಲರ ಗುಂಪು ಛಾಯಾಚಿತ್ರವನ್ನು ತೆಗೆಯಲಾಯಿತು.
ನವೀನ್ ಹೋಟೆಲಿನಲ್ಲಿ ಗುರುಗಳ ಸನ್ಮಾನವನ್ನು ಆಯೋಜನೆ ಮಾಡಲಾಗಿತ್ತು, ಈ ಕಾರ್ಯಕ್ರಮದಲ್ಲಿ ಗುರುಗಳಾದ ನಟರಾಜ ಸರ್, ನುಲ್ವಿ ಸರ್, ಶಾಮ ಗಾಮನಗಟ್ಟಿ ಸರ್, ಶಿವನಗುತ್ತಿ ಸರ್ , ಮುರುಗೋಡು ಸರ್, ಬೆಂಬಲಗಿ ಸರ್, ಬಳಿಗೆರ್ ಸರ್, ಎನ್. ಆರ್. ಪಾಟೀಲ್ ಸರ್, ಹುಲಕೋಟಿ ಸರ್, ಹಾಗೂ ಬಂಡಾರಗಲ್ ಸರ್ ಗಳಿಗೆ ಆತ್ಮೀಯವಾದ ಗುರುವಂದನಾ ಸನ್ಮಾನವನ್ನು ಮಾಡಲಾಯಿತು. ಸೇರಿದ ಸ್ನೇಹಿತರುಗಳು ತಮ್ಮ ಕಾಲೇಜಿನ ಹಳೆ ದಿನಗಳ ಬಗ್ಗೆ, ಶಿಕ್ಷಕರ ಬಗ್ಗೆ ಹಾಗೂ ತಮ್ಮ ಜೀವನದಲ್ಲಿ ಸಾಧಿಸಿದ ಮೆಟ್ಟಿಲುಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕರು 1989 ಬ್ಯಾಚಿನ ವಿದ್ಯಾರ್ಥಿಗಳು ಬಹಳಷ್ಟು ವಿಶಿಷ್ಟವಾದಂತಹ ಜಾಣ್ಮೆಯನ್ನು ಹೊಂದಿದ್ದೀರಿ, ನಿಮ್ಮನ್ನೆಲ್ಲ ನೋಡಿದರೆ ನಮಗೆ ಬಹಳ ಹೆಮ್ಮೆ ಅನಿಸುತ್ತದೆ, ಕಾಲೇಜಿನ ನಂತರ ನಿಮ್ಮ ನಿಜ ಜೀವನದಲ್ಲಿ ಬಹಳಷ್ಟು ಜನ ವಿದ್ಯಾರ್ಥಿಗಳು ದೊಡ್ಡ ಮೆಟ್ಟಿಲುಗಳನ್ನು ಏರಿದ್ದೀರಿ ಇದೇ ರೀತಿ ನಿಮ್ಮ ಸಾಧನೆಗಳನ್ನು ಮುಂದೆವರೆಸಿ
ಎಂದು ಶುಭಾಶಯಗಳೊಂದಿಗೆ ಆಶೀರ್ವಾದ ಮಾಡಿದರು, ನಿಮ್ಮನ್ನೆಲ್ಲ ನೋಡಿದ ನಂತರ ನಮ್ಮ ಆಯುಷ್ಯ 20 ವರ್ಷ ಹೆಚ್ಚಿಗೆ ಆಗಿದೆ ಎಂದು ನಾವು ಭಾವಿಸುತ್ತೇವೆ ಎಂದು ನುಡಿದರು. ವಿದ್ಯಾರ್ಥಿಗಳು ಸ್ನೇಹಿತರ ಬಗ್ಗೆ ಶಿಕ್ಷಕರ ಬಗ್ಗೆ ಹಾಡುಗಳ ಮೂಲಕ ಹಾಡಿ ಸಭೆಗೆ ಹೊಸ ಕಳೆಯನ್ನು ತಂದು ಕೊಟ್ಟರು. ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಣ್ಣು ತೇವಗೊಂಡಿದ್ದವು. ವಿದ್ಯಾರ್ಥಿಗಳು ಕ್ರಿಕೆಟ್ ಮ್ಯಾಚ್ ಅನ್ನು ಕೂಡ ಆಡಿದರು. ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು,ಸ್ನಹಿತರೆಲ್ಲ ಕುಣಿದು ಕುಪ್ಪಳಿಸಿದರು ವಿದ್ಯಾರ್ಥಿಗಳಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ರಾಜಣ್ಣ ಕೊರವಿ, ಈರಣ್ಣ ಸವಡಿ, ತೆಲಂಗಾಣದ ಡಿಜಿಪಿ ಅದಂತಹ ವಿಶ್ವನಾಥ್ ಸಜ್ಜನರ, ಅಮೆರಿಕದಿಂದ ಬಂದಂತ ಕಂದರ್ ಪಟೇಲ್, ಸಿಂಗಪೂರದಿಂದ ಬಂದಂತ ಶಶಿ ನಂಬಿಯಾರ್, ಸಿದ್ದು ಮೂಗುಲಿಶೆಟ್ಟರ್, ಶಂಕರ್ ಪಟೇಲ್, ರವಿ ಮುಧೋಳ್, ಮೋಹನ್ ಮುದುಗಲ್, ಶೇಕ್ ಸಮ್ಮದ್,ಘನಶಾಂ ಸಿದ್ದಲಿಂಗ, ಚಂದನ್ ಪೈ, ಚೆನ್ನವೀರ ಮುಂಗರವಾಡಿ, ಉಲ್ಕಾ ಇಂಗಲೇ, ವರ್ಷ ಚಿಟ್ರಿಸ್, ಐಶ್ವರ್ಯ ಶಾನ್ಭಾಗ್, ರಾಜೇಶ್ವರಿ ಗೂಗ್ಲಿ, ಕಿರಣ್ ಜಿತೂರಿ, ಕವಿತಾ ಕರ್ವ, ಕೇರಳದಿಂದ ಸುಶೀಲ, ಆಶಾ ಡಬೀರ್, ರಮೇಶ್ ಭಟ್, ಮಹೀಂದ್ರ ದಲ್ಬಂಜನ್, ವಿಶ್ವನಾಥ್ ಉಪ್ಪಿನ, ಮಾರುತಿ ಸಂಗಳದ್, ಯು. ಜಿ. ಬಂಗಾರಿ, ರಫೀಕ್ ಮನಿಯರ್, ಧೀರಜ್ ಬಾಗಲಕೋಟೆ, ಚಿಕ್ಕುಂಬಿ, ಖಾನ್ ಗೌಡ್ರು, ಮಿಲನ್ ಚಡ್ಡ, ಮಹೇಶ್, ಬಾಲಕೃಷ್ಣ, ಪುಣೆಯಿಂದ ಹಿರೇಮಠ, ಪೂಜಾರ್, ಮುಂತಾದವರು ಪಾಲ್ಗೊಂಡಿದ್ದರು.
STAR 74 NEWS DO SUBSCRIBE LIKE SHARE PLEASE