ನೀರು ಸರಬರಾಜು ಕಾರ್ಮಿಕರನ್ನು ಪುನರ್ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ
ಧಾರವಾಡ 19 : ಹುಬ್ಬಳ್ಳಿ-ಧಾರವಾಡ ಮಹನಾಗರ ಪಾಲಿಕೆಯ ನೀರು ಸರಬರಾಜು ವಿಭಾಗದ 579 ಕಾರ್ಮಿಕರನ್ನು ಪುನರ್ ನೇಮಕಾತಿ ಮಾಡಿಕೊಳ್ಳುವಂತೆ ಹಾಗೂ ಏಳು ತಿಂಗಳ ಸಂಬಳ ತುರ್ತಾಗಿ ಬಿಡುಗಡೆಗೊಳಿಸುವ ಮೂಲಕ ಅವಳಿನಗರದ ಜನತೆಗೆ ಸಮರ್ಪಕ ನೀರು ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜನಜಾಗೃತಿ ಸಂಘದ
ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಕಾಮಿ೯ಕರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅಪಿ೯ಸಿದರು.
ಹುಬ್ಬಳ್ಳಿ-ಧಾರವಾಡ ಮಹನಾಗರ ಪಾಲಿಕೆಯ ನೀರು ಸರಬರಾಜು ವಿಭಾಗದ 579 ಕಾರ್ಮಿಕರನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎಲ್ ಆಂಡ್ ಟಿ ಕಂಪನಿಯವರಿಗೆ 2/5/22 ರಂದು ಹಸ್ತಾಂತರಿಸಿದೆ. ಆದರೆ, ಇವರು ಏಳು ತಿಂಗಳು ಈ ನೌಕರನ್ನು ದುಡಿಸಿಕೊಂಡು ಸಂಬಳ ನೀಡದೆ, ಪುನಃ ಕೆಲಸಕ್ಕೆ ಕೂಡ ತೆಗೆದುಕೊಳ್ಳದೆ, ಇವರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಸಂಘ ಹೇಳಿದೆ.
ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಅಸಹಾಯಕರಾಗಿ ಕೈ ಚೆಲ್ಲಿ ಕುಳಿತುಕೊಂಡಿರುವುದರಿಂದ ಇಂದು ನಾವು ಹೋರಾಟದ ಹಾದಿ ಹಿಡಿದಿದ್ದೇವೆ. ಸಾಂಕೇತಿಕವಾಗಿ ಧಾರವಾಡದ ಮಹಾನಗರ ಪಾಲಿಕೆ ಕಚೇರಿಯ ಎದುರು ನೂರಾರು ನೌಕರರು, ಅವರ ಕುಟುಂಬ ಸದಸ್ಯರು ಹಾಗೂ ನಗರದ ವಿವಿಧ ಬಡಾವಣೆಯ ಜನತೆಯ ಸಹಯೋಗದಲ್ಲಿ ಬೃಹತ್ ಪ್ರತಿಭಟನೆ ಮೂಲಕ ಈ ಎಲ್ಲಾ 579 ನೌಕರರ ಪುನರ್ ನೇಮಕಾತಿ ಮಾಡಿಕೊಳ್ಳುವುದು ಹಾಗೂ ಅವರ ಏಳು ತಿಂಗಳ ಸಂಬಳ ತುರ್ತಾಗಿ ಬಿಡುಗಡೆಗೊಳಿಸುವಂತೆ ಆಗ್ರಹಿಸುತ್ತೇವೆ ಎಂದಿದ್ದಾರೆ.
ಜೊತೆಗೆ ಮೈಸೂರು ಮಹಾನಗರ ಪಾಲಿಕೆಯ ಮಾದರಿಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಅಧ್ಯಕ್ಷರಾದ
ಬಸವರಾಜ ಕೊರವರ,ಉಪಾಧ್ಯಕ್ಷರಾದ
ನಾಗರಾಜ ಕಿರಣಗಿ,ರಾಘವೇಂದ್ರ ಶೆಟ್ಟಿ
ಮಹಾಂತೇಶ ಗೌಡರ, ಮಹೇಶ ಮೇಲಿನಮಠ, ನಾಗೇಂದ್ರ ಹಮ್ಮನಿ, ಆನಂದ ಕಾಳಣ್ಣನವರ, ಶೇಖು ಬೇಟಗೇರಿ, ಮುಸ್ತಾಕ ನಧಾಪ್, ನಿಂಗಪ್ಪ ಸೂರ್ಯವಂಶಿ, ಸಿದ್ದು ಕಳ್ಳಿಮನಿ, ಬಸವರಾಜ ಮುಕ್ಕಾಲ ಸೇರಿದಂತೆ ನೌಕರರ ಕುಟುಂಬದ ಸದಸ್ಯರು ಮಕ್ಕಳ ಸಮೇತ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು
ಇದೇವೇಳೆ ಮಹಾನಗರ ಪಾಲಿಕೆ ಆರನೇ ವಾರ್ಡ್ ನೂರಾರು ಮಹಿಳೆಯರು ಕೊಡಪಾನದೊಂದಿಗೆ ಆಗಮಿಸಿ ಸಮರ್ಪಕವಾಗಿ ನೀರು ಸರಬರಾಜು ಮಾಡದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಅಲ್ಲದೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
STAR 74 NEWS DO SUBSCRIBE LIKE SHARE (M) 9945564891