ಹು-ಧಾ ಪಶ್ಚಿಮ ಕ್ಷೇತ್ರದ ಮತದಾರರ ಒತ್ತಾಸೆ ; ಕೈ ಅಭ್ಯರ್ಥಿಯಾಗಲು ಡಾ. ಮಯೂರ ಸಿದ್ದತೆ
ಲಾಭದಾಯಕ ವೈದ್ಯ ವೃತ್ತಿ ತೊರೆದು ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಹು-ಧಾ ಮಹಾನಗರ ಪಾಲಿಕೆಯ 24ನೇ ವಾರ್ಡ್‍ನ ಮಹಾನಗರ ಪಾಲಿಕೆ ಸದಸ್ಯ ಡಾ. ಮಯೂರ ಮನೋಹರ ಮೋರೆ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಭಾರಿ ಒತ್ತಾಯದ ಮೇರೆಗೆ ಮಹತ್ವದ ಹುಬ್ಬಳ್ಳಿ_ ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸರ್ವಸಿದ್ದತೆಯಲ್ಲಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಸಮಾಜದ ಸಂಕೀರ್ಣ ಸಮಸ್ಯೆಗಳು , ಅನ್ಯಾಯದ ವಿರುದ್ಧ ಸೆಣೆಸಬೇಕೆಂಬ ಮನೋಭಾವ ಹೊಂದಿದ್ದ ಈ ಹುಡುಗ , ಯುವಕರ ಕಣ್ಮಣಿಯಾಗಿ ಹೊರಹೊಮ್ಮಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಮೊದಲ ಬಾರಿ ಪ್ರವೇಶಿಸಿ ಭವಿಷ್ಯದ ಭರವಸೆಯ ನಾಯಕನಾಗುವ ಎಲ್ಲ ಪೂರಕ ಲಕ್ಷಣಗಳನ್ನೂ ಹೊಂದಿರುವದನ್ನು ಎಲ್ಲರೂ ನಿತ್ಯ ಅವರ ಕರ್ತವ್ಯದಲ್ಲಿ ಕಾಣಬಹುದಾಗಿದ್ದು,ಇವರ ಕರ್ತೃತ್ವ ಶಕ್ತಿಯನ್ನು ಕಣ್ಣಾರೆ ಕಂಡಿರುವ ಹು-ಧಾ ಪಶ್ಚಿಮ ಕ್ಷೇತ್ರದ ಮತದಾರರ ಒತ್ತಾಸೆಯೇ ಇವರು ವಿಧಾನಸಭೆಯ ಚುನಾವಣಾ ಕಣಕ್ಕಿಳಿಯಲು ಕಾರಣವಾಗಿದೆ.
ಈ ದಿಸೆಯಲ್ಲಿ ಹು-ಧಾ ಪಶ್ಚಿಮ ಕ್ಷೇತ್ರ ವ್ಯಾಪ್ತಿಯ ಪ್ರತಿ ವಾರ್ಡ್‍ಗಳು , ಗ್ರಾಮಗಳು ಹಾಗೂ ಸರ್ವ ಸಮುದಾಯಗಳ ಸಂಪರ್ಕ ಹೊಂದಿರುವ ಡಾ. ಮಯೂರ ಅವರು ಅನೇಕ ದಿನಗಳಿಂದ ನಿತ್ಯ ಕ್ಷೇತ್ರದಲ್ಲಿ ಸಂಚರಿಸಿ ಕ್ಷೇತ್ರದ ಜನರ ಕುಂದು ಕೊರತೆಗಳಿಗೆ ಸದಾ ಸ್ಪಂದಿಸುತ್ತ , ಕ್ಷೇತ್ರದಲ್ಲಿ ಆಗಬೇಕಾದ ಎಲ್ಲ ಅಭಿವೃದ್ದಿ ಕಾರ್ಯಗಳ ದೊಡ್ಡ ಪಟ್ಟಿಯನ್ನೇ ಸಿದ್ದಪಡಿಸಿಟ್ಟುಕೊಂಡಿದ್ದಾರೆ.
ಎಂಬಿಬಿಎಸ್ ಪದವಿಧರಾಗಿ ಕೆಲವು ವರ್ಷಗಳವರೆಗೆ ವೈದ್ಯ ವೃತ್ತಿ ಮಾಡಿರುವ 34ರ ಹರೆಯದ ಡಾ. ಮಯೂರ ಧಾರವಾಡದ ನವಲೂರನಲ್ಲಿರುವ ತಂದೆಯಿಂದ ಬಂದ ಬಳುವಳಿ ವೃತ್ತಿಯಾದ ಹೋಟೆಲ್ (ರೆಸಾರ್ಟ್) ಉದ್ಯಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಸಮಾಜ ಸೇವೆಯ ಮೂಲಕ ರಾಜಕೀಯದಲ್ಲಿ ನೆಲೆ ಕಂಡು ಅಧಿಕಾರಗಳಿಸಿ ಹಣ , ಆಸ್ತಿ , ಸಂಪಾದಿಸಿದವರ ಪಟ್ಟಿಯಲ್ಲಿ ಇರುವವರೇ ಅಧಿಕ, ಆದರೆ ಸಮಾಜ ಸೇವೆಯನ್ನೇ ತಮ್ಮ ನಿತ್ಯದ ಉಸಿರಾಗಿಸಿಕೊಂಡಿರುವ ಇವರು ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಆಹಾರ ಉತ್ಪಾದನಾ ಘಟಕ ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿ ನೂರಾರು ಬಡ ಕುಟುಂಬಗಳ ಪಾಲಿಗೆ ಅನ್ನದಾತರಾಗಿದ್ದಾರೆ .
ಕಂಗ್ರೆಸ್ ಪಕ್ಷದ ಸಂಘಟನೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು . ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು ಎಂದು ನವಲೂರಿನಲ್ಲಿ ಸಾಯಿರಾಮ ಆಂಗ್ಲ ಮಾಧ್ಯಮ ವಿದ್ಯಾಕೇಂದ್ರ ಶಾಲೆಯನ್ನು ಸ್ಥಾಪಿಸಿದ್ದಾರೆ . ನಗರ ಪ್ರದೇಶಕ್ಕಿಂತ ಗುಣಮಟ್ಟದ ಶಿಕ್ಷಣವನ್ನು ಗ್ರಾಮೀಣ ಪ್ರದೇಶದಲ್ಲಿ ನೀಡುತ್ತ ಸಾವಿರಾರು ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಳ್ಳಲು ದಾರಿದೀಪವಾಗಿದ್ದಾರೆ . ಅಲ್ಲದೆ , ಗ್ರಾಮೀಣ ಪ್ರದೇಶದಲ್ಲಿನ ದೇವಸ್ಥಾನ , ಮಸೀದಿ ಜೀರ್ಣೋದ್ಧಾರ ಹಾಗೂ ಹೊಸ ದೇವಸ್ಥಾನ , ಊರಿನ ಅಭಿವೃದ್ಧಿ ಕಾರ್ಯಗಳು , ಬಡ ಜನತೆಯ ಸಾಮೂಹಿಕ ವಿವಾಹಕ್ಕೆ ತನು- ಮನ , ಧನದಿಂದ ಮೋರೆ ಕುಟುಂಬ ಸಹಾಯ ಮಾಡುತ್ತ ಬಂದಿದೆ . ಆ ಪರಂಪರೆಯನ್ನು ಮಯೂರ ಮುಂದುವರಿಸಿದ್ದಾರೆ . ಪಕ್ಷದ ಮುಖಂಡರು ಬದ್ಧತೆ , ಇಚ್ಛಾಶಕ್ತಿ ಪ್ರದರ್ಶಿಸಿ ಪ್ರಾಮಾಣಿಕತೆಯಿಂದ ಅಭಿವೃದ್ಧಿಯತ್ತ ಗಮನಹರಿಸಿದರೆ ಅವಳಿನಗರ ನೂರಕ್ಕೆ ನೂರರಷ್ಟು ಶಿಸ್ತುಬದ್ಧ ಮಹಾನಗರವಾಗುವುದರಲ್ಲಿ ಸಂದೇಹವಿಲ್ಲ ಎಂಬುದು ಡಾ. ಮಯೂರ ಅವರ ಅಭಿಮತ.
ಡಾ. ಮಯೂರ ಅವರು, ಬಡವರು, ಗ್ರಾಮೀಣ ಪ್ರದೇಶದ ಶ್ರೇಯೋಭಿವೃದ್ದಿಗೆ ಶ್ರಮಿಸವ ಹಂಬಲ ಹೊಂದಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿರುವ ಹುಬ್ಬಳ್ಳಿ- ಧಾರವಾಡ ಅಭಿವೃದ್ಧಿಯ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಬೇಕೆಂಬ ಆಶಯದಿಂದ ರಾಯಕೀಯಕ್ಕೆ ಪ್ರವೇಶಿಸಿ ಶರವೇಗದ ಸರ್ವಾಂಗೀಣ ಅಭಿವೃದ್ಧಿಯತ್ತ ಒಯ್ಯಲು ಪಣ ತೊಟ್ಟಿದ್ದಾರೆ. ಈಗಾಗಲೇ ಮಹಾನಗರ ಪಾಲಿಕೆ ಸದಸ್ಯರಾಗಿ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ದಿ ಕೆಲಸಗಳಿಗೆ ನಾಂದಿ ಹಾಡಿರುವ ಇಂತಹ ಯುವ ನಾಯಕನೇ ನಮ್ಮ ಕ್ಷೇತ್ರಕ್ಕೆ ಅತ್ಯಂತ ಸೂಕ್ತ ಎಂದು ಹು-ಧಾ ಪಶ್ಚಿಮ ಕ್ಷೇತ್ರದ ಬಹುತೇಕ ಮತದಾರರು ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಕಾಂಗ್ರೆಸ್ ವರಿಷ್ಠರು ಇಂತಹ ಯುವ ನಾಯಕನನ್ನು ಗುರುತಿಸಿ ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧಿಸುವ ಟಿಕೆಟ್ ನೀಡಿದರೆ ಹು-ಧಾ ಪಶ್ಚಿಮದಲ್ಲಿ ಗೆಲ್ಲುವ ಸಾಧ್ಯತೆ ಅಧಿಕ ಎಂಬ ವಾತಾವರಣವಿದ್ದಂತಿದೆ.
ಕೋಟ್
ನಾನು ಮೂಲತಃ ನವಲೂರಿನವನಾಗಿದ್ದರೂ ಸಹ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಪ್ರತಿ ಮೂಲೆ ಮೂಲೆಯ ಪರಿಚಯವಿದೆ . ಆ ಕ್ಷೇತ್ರದ ಎಲ್ಲ ಜಾತಿ- ಜನಾಂಗ , ಎಲ್ಲ ಧರ್ಮಗಳ , ಸಮುದಾಯದ ಜನರೊಂದಿಗೆ ನಿತ್ಯ ಸಂಪರ್ಕದಲ್ಲಿದ್ದು, ಎಲ್ಲ ಮತದಾರರ ಆಗುಹೋಗುಗಳ ಅಧ್ಯಯನ ಮಾಡಿರುವದರಿಂದ ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡಿದರೆ ಕ್ಷೇತ್ರದ ಮತದಾರರ ಮನಗೆದ್ದು, ಚುನಾಯಿತನಾಗುವ ಸಂಪೂರ್ಣ ವಿಶ್ವಾಸವಿದೆ.
- ಡಾ. ಮಯೂರ ಮೋರೆ , ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ