ನವೆಂಬರ್ 25,2022 ರಿಂದ ಡಿಸೆಂಬರ್10,2022 ರವರೆಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (AIMSS) ನಿಂದ 'ಮಹಿಳೆಯರ ಮೇಲಿನ ಅಪರಾಧ ಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಸಂಘಟಿಸಲಾಗಿದೆ
. ಅದರ ಭಾಗವಾಗಿ 27-11-22 ರಂದು ಜೋಗೆಲ್ಲಾಪುರ ಮತ್ತು ದುಮ್ಮವಾಡ ಗ್ರಾಮಗಳಲ್ಲಿ, 28-11-22 ಇಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
'ಎಲ್ಲರಿಗೂ ತಿಳಿದಿರುವಂತೆ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ-ಅಪರಾಧಗಳ ಸಂಖ್ಯೆ ದಿನೇ -ದಿನೇ ಹೆಚ್ಚುತ್ತಿರುವುದು ವರದಿಯಾಗುತ್ತಿದೆ. ಇತ್ತೀಚಿಗೆ ಮಂಡ್ಯದ ಮಳವಳ್ಳಿ 10 ವರ್ಷದ ಕಂದಮ್ಮನನ್ನು 56 ವರ್ಷದ ಕಾಮುಕ ಶಿಕ್ಷಕ ಅತ್ಯಾಚಾರವೆಸಗಿ ಕೊಲೆಗೈದ ಘಟನೆ, ಅದರ ಬೆನ್ನಲ್ಲೇ ಕಲಬುರ್ಗಿಯ ಆಳಂದದಲ್ಲಿ 4 ಯುವಕರಿಂದ 14 ವರ್ಷದ ಬಾಲಕಿಯ ಮೇಲಾದ ಕ್ರತ್ಯ, ಮಠಾದಿಶಾರೊಬ್ಬರೂ ಬಡ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರೆಂಬ ವರದಿಗಳು ನಿಜಕ್ಕೂ ವೇದಾನದಾಯಕವಾಗಿವೆ' ಎಂದು AIMSS ರಾಜ್ಯ ಕಾರ್ಯದರ್ಶಿಯಾದ ಶ್ರೀಮತಿ ಶೋಭಾ ಎಸ್ ಮಾತನಾ
ಡಿದರು
ಅವರು ಮುಂದುವರೆದು '2018ರಿಂದ ಇಲ್ಲಿಯವರೆಗೆ ದಾಖಲಾಗಿರುವ ಅಂಕಿ -ಅಂಶದ ಪ್ರಕಾರ ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು 1,410ರಿಂದ 1,761(25%) ಹೆಚ್ಚಾಗಿದೆ.ಆದರೆ ದಾಖಲಾಗದ ಪ್ರಕರಣಗಳು ಅದೆಷ್ಟೋ!! ಇದಕ್ಕೆ ಮೂಲ ಕಾರಣಗಳೆಂದರೆ ಪುರುಷ ಪ್ರಧಾನ ಧೋರಣೆ,
ಅಶ್ಲೀಲ ಸಿನೆಮಾ - ಸಾಹಿತ್ಯ, ಮದ್ಯ -ಮಾದಕಗಳ ಹಾವಳಿ, ನೀತಿ- ನೈತಿಕ ಮೌಲ್ಯಗಳ ಕೊರತೆ. ಇವುಗಳ ಮೊದಲ ಹೀನಾಯ ಬಲಿಪಶು ಮಹಿಳೆಯಾಗಿದ್ದಾಳೆ. ಇದಕ್ಕೆ ಕೊನೆಹಾಡಲು ಸಂಘಟಿತ ಹೋರಾಟ ಒಂದೇ ದಾರಿ ' ಎಂದು ಕರೆ ನೀಡಿದರು.
ಜಿಲ್ಲಾ ಅಧ್ಯಕ್ಷರಾದ ಮಧುಲತಾ ಮಾತನಾಡಿ 'AIMSS ಇಂತಹ ಅಮಾನವೀಯ ಘಟನೆಗಳನ್ನು ಖಂಡಿಸುತ್ತದೆ. ಧಾರವಾಡ ಜಿಲ್ಲೆಯಾದ್ಯಂತ 15 ದಿನಗಳ ಕಾಲ ಹಳ್ಳಿ-ಸ್ಲಂ -ಬಡಾವಣೆ, ಕಾಲೇಜು -ಯೂನಿವರ್ಸಿಟಿ ಸೇರಿದಂತೆ ಎಲ್ಲೆಡೆ ಸಭೆ -ಸಮಾವೇಶ -ಸೂಕ್ತಿ ಛಾಯಾಚಿತ್ರ ಪ್ರದರ್ಶನ, ಕ್ಯಾಂಡೆಲ್ ಸಭೆ, ಪ್ರತಿಭಟನೆಯಂತಹ ವಿಭಿನ್ನ ರೀತಿಯ 'ಮಹಿಳಾ ದೌರ್ಜನ್ಯ ಪ್ರತಿರೋಧಿ ಕಾರ್ಯಕ್ರಮ'ಗಳನ್ನು ಸಂಘಟಿಸಲಾಗಿದೆ ಎಂದು ಪ್ರಾಸ್ತವಿಕ ಮಾತುಗಳನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಸರಸ್ವತಿ. ಆರ್. ಕಳಸದ್ ವಹಿಸಿದ್ದರು, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ M. G. ಜಲರೆಡ್ಡಿ ವೇದಿಕೆಯಲ್ಲಿ
ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರ್ವಹಣೆಯನ್ನು AIMSS ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಗಂಗೂಬಾಯಿ ಕೊಕರೇ, ಉಪಾಧ್ಯಕ್ಷರಾದ ದೇವಮ್ಮ ದೇವತ್ಕಲ್, ಸಂಘಟನಾಕರರಾದ ನೇತ್ರಾ, ಅಕ್ಕಮ್ಮ, ಶಶಿರೇಖಾ ಮೊದಲಾದವರು ಭಾಗವಹಿಸಿದ್ದರು. ಹಳ್ಳಿಗಳಲ್ಲಿ ದುಡಿಯುವ ಮಹಿಳೆಯರು, ಕಾಲೇಜನಲ್ಲಿ ವಿದ್ಯಾರ್ಥಿನಿಯರ ಜೊತೆಗೆ ಮುಕ್ತ ಸಂವಾದ ನಡೆಯಿತು. ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.