ಯಾವುದೇ ಶೀರ್ಷಿಕೆಯಿಲ್ಲ

ಧಾರವಾಡ ನಗರಗಳಿಗೆ ನೀರು ಸರಬರಾಜು ಮಾಡುತ್ತಿರುವ ಗುತ್ತಿಗೆ ಆಧಾರಿತ  ನೌಕರರು,
 ಕಳೆದ ಎರಡು ದಿನಗಳಿಂದ ಧರಣಿ ನಿರತರಾಗಿರುವ  ಹಿನ್ನೆಲೆಯಲ್ಲಿ ಧಾರವಾಡ ನಗರದ ನಾಗರಿಕರಿಗೆ ನೀರಿನ ಸಮಸ್ಯೆ ಉಂಟಾಗಿದ್ದರ ಸಲುವಾಗಿ  ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು 
ಧಾರವಾಡದ ಮುರುಘಾಮಠದ ಮೃತ್ಯುಂಜಯ ನಗರದ ನೀರಿನ ಟ್ಯಾಂಕ್ ಗೆ ಭೇಟಿ ನೀಡಿ ಎಲ್&ಟಿ ನ ಅಧಿಕಾರಿಗಳಿಗೆ ನಾಗರಿಕರಿಗೆ ನೀರಿನ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳಲು, ಪರ್ಯಾಯ ಗುತ್ತಿಗೆ ಆಧಾರಿತ ವಾಲ್ ಮನ್ ನೌಕರರನ್ನು ನೇಮಿಸಿಕೊಂಡರು ನೀರಿನ ಸರಬರಾಜನ್ನು ಯಥಾ ಸ್ಥಿತಿ ಕಾಪಾಡಿಕೊಳ್ಳುವುದರ ಬಗ್ಗೆ  ನೀರು ಸರಬರಾಜು ಚಾಲನೆ ನೀಡಿದರು. 
ಹಾಗೂ ಕಚೇರಿಗೆ ಸಂಬಂಧ ಪಡೆದಿರುವ ಯಾರೇ ಬಂದು ನೀರು ಸರಬರಾಜು ಕೆಲಸಕ್ಕೆ ತೊಂದರೆ ಮಾಡಿದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಶ್ರೀ ನಿತಿನ್ ಹಿಂಡಿ ರವರು, ಶ್ರೀ ರಾಜು ಕಮತಿ ರವರು ಹಾಗೂ ಎಲ್ & ಟಿ ನ ಅಧಿಕಾರಿಗಳು ಉಪಸ್ಥಿತರಿದ್ದರು.
STAR 74 NEWS 
ನವೀನ ಹಳೆಯದು

نموذج الاتصال