ಕನ್ನಡಮ್ಮ ದಿನ ಪತ್ರಿಕೆ ವರದಿಗಾರನಿಗೆ ಪಾಲಿಕೆಯ ರಾಜ್ಯೋತ್ಸವ ಧೀಮಂತ ಪ್ರಶಸ್ತಿ
ಸರಳ ಸಜ್ಜನಿಕೆಯ ಹಿರಿಯ ಪತ್ರಕರ್ತ. ಕನ್ನಡಮ್ಮ ದಿನ ಪತ್ರಿಕೆಯ ಧಾರವಾಡ ಜಿಲ್ಲೆಯ ವರದಿಗಾರರಾದ ರವಿಕುಮಾರ ಕಗ್ಗಣ್ಣವರ ಇವರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಧೀಮಂತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಂ 1 ರಂದು ಹುಬ್ಬಳ್ಳಿಯ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಮಹಾಪೌರ ಈರೇಶ ಅಂಚಟಗೇರಿ ಅವರು ರೇಷ್ಮೆ ಶಾಲು ಹೊದಿಸಿ ಅಭಿನಂದನಾ ಫಲಕ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಉಪ ಮಹಾಪೌರ ಉಮಾ ಮುಕ್ಕುಂದ. ಸಭಾನಾಯಕ ತಿಪ್ಪಣ್ಣ ಮಜ್ಜಗಿ. ಪಾಲಿಕೆಯ ಸದಸ್ಯರಾದ ಶಿವು ಹಿರೇಮಠ. ವಿಜಯಾನಂದ ಶೆಟ್ಟಿ. ಜ್ಯೋತಿ ಪಾಟೀಲ. ರಾಧಾಬಾಯಿ ಸಫಾರೆ. ರಾಜಣ್ಣ ಕೊರವಿ. ದೊರೆರಾಜ ಮನಿಕುಂಟ್ಲ. ಆಯುಕ್ತ ಡಾ ಗೋಪಾಲಕೃಷ್ಣ ಸೇರಿದಂತೆ ಮತ್ತಿರರಿದ್ದರು.