ಉಕ್ಕಿನ ಮಹಿಳೆ, ಭಾರತದ ಪ್ರಥಮ ಮಹಿಳಾ ಪ್ರಧಾನಿ, ದಿವಂಗತ ಶ್ರೀಮತಿ ಇಂದಿರಾ ಗಾಂಧಿ ಜನ್ಮದಿನಾಚರಣೆ ಯನ್ನು ಶ್ರೀಯುತ ದೀಪಕ್ ಚಿಂಚೋರೆ ಅವರು ನವಲೂರಿನ ಬಸವೇಶ್ವರ ದೇವಸ್ಥಾನದಲ್ಲಿ ನವಲೂರು ಗ್ರಾಮದ ಮಹಿಳೆಯರೊಂದಿಗೆ ಆಚರಿಸಿದರು

ಉಕ್ಕಿನ ಮಹಿಳೆ, ಭಾರತದ ಪ್ರಥಮ ಮಹಿಳಾ ಪ್ರಧಾನಿ, ದಿವಂಗತ ಶ್ರೀಮತಿ ಇಂದಿರಾ ಗಾಂಧಿ ಜನ್ಮದಿನಾಚರಣೆ 
ಯನ್ನು ಶ್ರೀಯುತ ದೀಪಕ್ ಚಿಂಚೋರೆ ಅವರು ನವಲೂರಿನ ಬಸವೇಶ್ವರ ದೇವಸ್ಥಾನದಲ್ಲಿ ನವಲೂರು ಗ್ರಾಮದ ಮಹಿಳೆಯರೊಂದಿಗೆ ಆಚರಿಸಿದರು
. ಭಾರತವನ್ನು ಎಷ್ಯಾದ ಬಲಿಷ್ಟ ರಾಷ್ಟ್ರವನ್ನಾಗಿ ಮಾಡಲು ತೆಗೆದುಕೊಂಡ ಅನೇಕ ನಿರ್ಣಯಗಳ ಬಗ್ಗೆ ಸವಿಸ್ತಾರವಾಗಿ ನೆರೆದ ಮಹಿಳೆಯರಿಗೆ ವಿವರಿಸಿದರು. ಭಾರತವನ್ನು ಬಲಶಾಲಿ ರಾಷ್ಟ್ರವನ್ನಾಗಿ ಮಾಡಲು  ಪಾಕಿಸ್ತಾನದೊಂದಿಗೆ ಸಮರ ಸಾರಿ ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶವನ್ನಾಗಿ ಮಾಡಿ ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಸಾಗುವ ಹಾಗೆ ಮಾಡಿದರು. 
20 ಅಂಶಗಳ ಕಾರ್ಯಕ್ರಮ, ಒಳುವವನೆ ಒಡೆಯ, ಬ್ಯಾಂಕ ಗಳ ರಾಷ್ಟ್ರೀಕರಣ ಮತ್ತು ಅನೇಕ ಸಾಮಾನ್ಯ, ಬಡಜನರ ಕಾರ್ಯಕ್ರಮಗಳನ್ನು ಮಾಡಿ ದೇಶದ ಜನಪ್ರಿಯ ಪ್ರಧಾನಿ ಎಂದು ಖ್ಯಾತಿ ಗಳಿಸಿದರು. ಮಹಿಳೆಯರನ್ನು ಸಬಲ ಗೊಳಿಸಿದರೆ ದೇಶವು ಅಭಿವೃದ್ಧಿಯ ಪದದಲ್ಲಿ ಸಾಗುವುದು ಎಂದು ಅವರ ವಿಚಾರವಾಗಿತ್ತು. 
ಈ ವಿಚಾರವನ್ನೇ ಇಟ್ಟುಕೊಂಡು ಮಹಿಳಾ ಸಬಲೀಕರಣ ಮಾಡಲು ಅನೇಕ ಕಾರ್ಯಕ್ರಮಗಳನ್ನು ಅವರು ಹಮ್ಮಿಕೊಂಡಿದ್ದರು. ದೇಶದ ಆರ್ಥಿಕತೆಯನ್ನು ಬಲಪಡಿಸಲು ರಾಜ್ಯಗಳನ್ನು ಹೆಚ್ಚು ಸಶಕ್ತ ಮಾಡುವಲ್ಲಿ ಅನೇಕ ನೀತಿಗಳನ್ನು ಜಾರಿಗೆ ತಂದರು. ಪ್ರತಿ ಹೆಜ್ಜೆಯಲ್ಲೂ ದೇಶದ ಉನ್ನತಿಯ  ಬಗ್ಗೆ ಚಿಂತಿಸುವ ಈ ಧೀರ ಮಹಿಳೆ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡರು. ಸ್ವಾತಂತ್ರ ಪೂರ್ವದಲ್ಲಿ ತಂದೆ ದಿವಂಗತ ನೆಹರು ಅವರಿಗೆ ಬೆನ್ನೆಲುಬಾಗಿ ನಿಂತು ಸ್ವಾತಂತ್ರ ಹೋರಾಟದಲ್ಲಿ
 ಭಾಗವಹಿಸಿದರು.  
ಶ್ರೀಮತಿ ಇಂದಿರಾ ಗಾಂಧಿ ಅವರ ಆದರ್ಶಗಳನ್ನು/ವಿಚಾರಗಳನ್ನು ಪಾಲಿಸುವ ಶ್ರೀ ದೀಪಕ್ ಚಿಂಚೊರೆ ಅವರು ಮಹಿಳೆಯರನ್ನು ಸಬಲಗೊಳಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮಹಿಳೆಯರಿಗೆ ಹೊಲಿಗೆ ತರಬೇತಿ, ಕಸೂತಿ ತರಬೇತಿ ಮತ್ತು ಅನೇಕ ಕೌಶ್ಯಾಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. 
ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ  ರವಿಕುಮಾರ್ ಮಾಳಿಗೇರ, ಮಹಿಳಾ ಸಬಲೀಕರಣದಿಂದ ದೇಶದ ಆರ್ಥಿಕತೆಗೆ ಸಹಾಯ ಆಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಹಾವೀರ ಜೈನ್, ದೇವೇಗೌಡ, ವೆಂಕಟೇಶ್ ವೆರ್ಣೇಕರ್ ಹಾಗೂ ಹಲವರು ಭಾಗವಹಿಸಿದ್ದರು...
ನವೀನ ಹಳೆಯದು

نموذج الاتصال