ರೈತ ಹಾಗೂ ಸೈನಿಕರ ಸ್ವಾಭಿಮಾನ ಹೆಚ್ಚಿಸಿದ ಮಹಾನ ವ್ಯಕ್ತಿ,ಶಾಸ್ತ್ರಿಜೀ
ಧಾರವಾಡ: ದೇಶದ ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ಲಾಲ್ ಬಹದೂರ್ ಶಾಸ್ತ್ರೀ ಯವರು ಪ್ರಧಾನ ಮಂತ್ರಿಯಾಗಿದ್ದಾಗ ಬದ್ಧತೆ ಹಾಗೂ ಪ್ರಾಮಾಣಿಕ ಮಾದರಿಯ ಆಡಳಿತ ನಡೆಸುವ ಮೂಲಕ ಯುದ್ಧ ಸಮಯದಲ್ಲಿ ದೇಶದ ಜನತೆಗೆ ಯಾವುದೇ ತೆರಿಗೆ ಹೇರದೇ ,ಒಂದು ದಿನ ಉಪವಾಸ ಬಿಟ್ಟು,ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕೈ ಜೋಡಿಸಿ ಎಂದು ಕರೆ ನೀಡುವದರೊಂದಿಗೆ ರೈತರ ಹಾಗೂ ಸೈನಿಕರ ಸ್ವಾಭಿಮಾನ ಹೆಚ್ಚಿಸಿದ ಮಹಾನ ವ್ಯಕ್ತಿ ಯಾಗಿದ್ಧರು ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರಾದ ಹಿರಿಯ ನ್ಯಾಯವಾದಿ ಪಿ ಎಚ್ ನೀರಲಕೇರಿ ಯವರು ಹೇಳಿದರು.
ಅವರು ಲಾಲ್ ಬಹದೂರ್ ಶಾಸ್ತ್ರೀಯವರ ಜಯಂತಿ ಅಂಗವಾಗಿ ನಗರದ ಕರ್ನಾಟಕ ಮಹಾವಿದ್ಯಾಲಯ ಆವರಣದಲ್ಲಿರುವ ಶಾಸ್ತ್ರೀಜಿ ಯವರ ಪುತ್ಥಳಿಗೆ ಪಾದಾರ್ಪಣೆ ಮಾಡಿ ಮಾತನಾಡಿದ ನೀರಲಕೇರಿಯವರು, ಯುದ್ಧದ ನಂತರ ದೇಶದಲ್ಲಿ ಹಸಿರು ಕ್ರಾಂತಿಯ ಘೋಷಣೆ ಮಾಡುವದರೊಂದಿಗೆ ಆಹಾರ ಸ್ವಾವಲಂಭನೆಗೆ ಉತ್ತೇಜನ ನೀಡಲು ರೈತರನ್ನುದ್ದೇಶಿಸಿ , ಜೈ ಕಿಸಾನ್ ಎಂದು ಹಾಗೂ ಯುದ್ಧವನ್ನೇ ಸ್ಫೂರ್ತಿಯಾಗಿಸಿಕೊಂಡ ಸೈನಿಕರಿಗೆ ಧೈರ್ಯ ಹಾಗೂ ದೇಶಪ್ರೇಮ ಹೆಚ್ಚಿಸಿ,ಯುದ್ಧಕ್ಕೆ ಸನ್ನದ್ಧರಾಗುವಂತೆ ಜೈ ಜವಾನ್ ಘೋಷಣೆ ಮಾಡಿದರು .
ಇದರಿಂದಾಗಿ ದೇಶದ ಸರ್ವಾಂಗೀಣ ಬೆಳವಣಿಗೆ ಮತ್ತು ರಕ್ಷಣೆ ಅವರ ಮುಂದಾಲೋಚನೆಯಾಗಿತ್ತು .ಅವರ ಜೈ ಜವಾನ್ ಜೈ ಕಿಸಾನ್ ಘೋಷಣೆ ಇಂದಿಗೂ ಪ್ರಸ್ತುತವಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಪ್ರೊ, ಚೌಗಲೆ ,ಪ್ರೊ , ಹೊನ್ನಪ್ಪನವರ ,ಪ್ರೊ,ಮಳಿಮಠ ,ಶ್ರೀಮತಿ ಸೊಳಂಕಿ ಯವರು ಸೇರಿದಂತೆ ಕರ್ನಾಟಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಮೂಹ ಉಪಸ್ಥಿತರಿದ್ದರು.