ಶೌರ್ಯ ಮತ್ತು ಸ್ವಾಭಿಮಾನದ ಪ್ರತೀಕ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯ ಅಂಗವಾಗಿ ಹುಬ್ಬಳ್ಳಿ ಚನ್ನಮ್ಮ ವ್ರತ್ತದಲ್ಲಿರುವ ರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ

ಬ್ರಿಟಿಷರ ವಿರುದ್ಧ ಹೋರಾಡಿದ್ದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ,ಕನ್ನಡ ನಾಡಿನ ವೀರವನಿತೆ, ಶೌರ್ಯ ಮತ್ತು ಸ್ವಾಭಿಮಾನದ ಪ್ರತೀಕ ಕಿತ್ತೂರು ರಾಣಿ ಚೆನ್ನಮ್ಮ 
ಅವರ ಜಯಂತಿಯ ಅಂಗವಾಗಿ ಹುಬ್ಬಳ್ಳಿ ಚನ್ನಮ್ಮ ವ್ರತ್ತದಲ್ಲಿರುವ ರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿಗೆ ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಶ್ರೀ ಪ್ರಲ್ಹಾದ ಜೋಶಿಯವರು ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್ ಮಹಾಪೌರರು ಶ್ರೀ ಈರ ಅಂಚಟಗೇರಿ ವಿಧಾನ ಪರಿಷತ ಸದಸ್ಯರು ಶ್ರೀ ಬಸವರಾಜ ಹೊರಟ್ಟಿ ಹಾಗು ಗಣ್ಯಮಾನ್ಯರೊಂದಿಗೆ ಮಾಲಾರ್ಪಣೆ ಮಾಡಿ ಪುಷ್ಪನಮನಗಳನ್ನು ಸಲ್ಲಿಸಲಾಯಿತು.

ಈ ಸುಸಂದರ್ಭದಲ್ಲಿ ವೀರಶೈವ ಸಂಘಟನಾ ಸಂಘವು ಹಮ್ಮಿಕೊಂಡಂತ ಕಿತ್ತೂರು ಚೆನ್ನಮ್ಮನ ವಿಜಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ನೆರೆದಂತ ಜನತೆಗೆ ಶುಭ ಕೋರಲಾಯಿತು.
ಕಾರ್ಯಕ್ರಮದಲ್ಲಿ ಪೂಜ್ಯ ಯಳಲಿಮಠದ ಸ್ವಾಮಿಜಿಗಳು ಮಲ್ಲಿಕಾರ್ಜುನ ಸಾವಕಾರ ಪ್ರಕಾಶ ಬೆಂಡಿಗೇರಿ ಅವರು ಉಪಸ್ಥಿತರಿದ್ದರು
ನವೀನ ಹಳೆಯದು

نموذج الاتصال