ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಜಿ ದೇಶದ ಅಮೂಲ್ಯ ರತ್ನಗಳು

ಮಹಾತ್ಮರ ತತ್ವಾದರ್ಶ ರೂಢಿಸಿಕೊಳ್ಳಿ 
ಧಾರವಾಡ: ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತಿçÃಜಿ ದೇಶದ ಅಮೂಲ್ಯ ರತ್ನಗಳು. 
ಅವರ ಚಿಂತನೆ, ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಲು ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಧಾರವಾಡ ಜಿಲ್ಲಾಧ್ಯಕ್ಷ ಕೇಶವ ತೆಲಗು ಕರೆ ನೀಡಿದರು.
ನಗರದ ಭಾರತ ಸ್ಕೌಟ್-ಗೈಡ್ಸ್ ಮೈದಾನದಲ್ಲಿ ಭಾನುವಾರ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿçÃಜಿ ಜಯಂತಿ ಪ್ರಯುಕ್ತ ಉಭಯ ಮಹಾತ್ಮರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದ ಅವರು, ಈ ನಾಯಕರ ಮಾರ್ಗದಲ್ಲಿ ಯುವಪೀಳಿಗೆ ಸಾಗಬೇಕಿದೆ ಎಂದರು.
ಗೌರವಾಧ್ಯಕ್ಷ ಮಹ್ಮದಗೌಸ್ ಕಳಸಾಪೂರ, ಮಹಾತ್ಮ ಗಾಂಧೀಜಿ ಅವರ ಸತ್ಯ, ಅಹಿಂಸೆ, ತ್ಯಾಗ ಹಾಗೂ ಶಾಸ್ತಿçà ಅವರ ಚಿಂತನೆಗಳ ಮನೋಭಾವ ಸರ್ವರಲ್ಲೂ ಬೆಳೆಯಬೇಕಿದೆ. ಈ ಮೂಲಕ ಪ್ರತಿಯೊಬ್ಬರು ದೇಶಕ್ಕೆ ಏನಾದರು ಕೊಡುಗೆ ನೀಡಬೇಕಿದೆ ಎಂದು ಸಲಹೆ ನೀಡಿದರು.
ಉಪಾಧ್ಯಕ್ಷ ಬಸವರಾಜ ಉಪ್ಪಾರ ಹಾಗೂ ಮಹಿಳಾ ಉಪಾಧ್ಯಕ್ಷೆ ಮಂಗಳಾ ಬೆಟಗೇರಿ ಮಾತನಾಡಿದರು. ಸಹಕಾರ್ಯದರ್ಶಿ ಸಂತೋಷ ಹಿರೇಮಠ, ಮಹಿಳಾ ಕಾರ್ಯದರ್ಶಿ ಈರಮ್ಮ ಹಳವೂರ, ಶ್ರೀಶೈಲ ಸವದತ್ತಿ, ಮಹೇಶ ಗೂಳಪ್ಪನವರ, ಉಮೇಶ ಚೌಡಣ್ಣವರ, ಸತೀಶ ಹೆಗ್ಗಣ್ಣವರ ಇದ್ದರು.
ನವೀನ ಹಳೆಯದು

نموذج الاتصال