ಹೊಸ ಬಟ್ಟೆ ವಿತರಣೆ ಕಾರ್ಯಕ್ರಮ| ನಿರ್ದೇಶಕಿ ಮೃಣಾಲ ಜೋಶಿ ಅಭಿಮತ
ದಿವ್ಯಾಂಗರ ಛಲ ಸಮಾಜಕ್ಕೆ ಆದರ್ಶ
ಧಾರವಾಡ: ನ್ಯೂನ್ಯತೆ ಇದ್ದರೂ ಸಹ ಸಾಧನೆ ಮಾಡುವ ದಿವ್ಯಾಂಗರ ಛಲವೇ ಸಮಾಜಕ್ಕೆ ಆದರ್ಶ. ದಿವ್ಯಾಂಗರು ಸತ್ಸಂಗ ಹಾಗೂ ಸರ್ಕಾರದ ಸೌಲಭ್ಯಗಳಿಂದ ಮುಖ್ಯ ವಾಹಿನಿಗೆ ಬರಬೇಕು ಎಂದು ಸಂಸ್ಕೃತ ಶಿಶುಮಂದಿರದ ನಿರ್ದೇಶಕಿ ಮೃಣಾಲ ಜೋಶಿ ಕಿವಿಮಾತು ಹೇಳಿದರು.
ಕಾಂಚನಾ ಎನ್.ಎಕ್ಸ್.ಶೋರೂಂ ಮಾಲೀಕ ಅರವಿಂದ ಮೇಹತಾ ಜನ್ಮದಿನÀ ಹಾಗೂ ದೀಪಾವಳಿ ಪ್ರಯುಕ್ತ ವಿಕಲಚೇತನರ ಒಕ್ಕೂಟ ಧಾರವಾಡ ಜಿಲ್ಲಾ ಘಟಕವು ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡ ಹೊಸಬಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನದಿಯ ನೀರು, ಮರದ ಫಲ ಮತ್ತು ಆಕಳು ಹಾಲು ಪರೋಪಕಾರಿ ಆಗಲಿದೆ. ಮನುಷ್ಯ ಜನ್ಮವೂ ಪರರಿಗಾಗಿ ಮೀಸಲಿಡಬೇಕು. ಈಗ ಬದಲಾದ ಕಾಲಮಾನದಲ್ಲಿ ಸಮಾಜವು ದಿವ್ಯಾಂಗರ ಸಾಧನೆ ಗುರುತಿಸುತ್ತಿದೆ. ಹೀಗಾಗಿ ಆಸಕ್ತ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಲಹೆ ನೀಡಿದರು.
ಹಬ್ಬಗಳು ಕುಟುಂಬಕ್ಕೆ ಸೀಮಿತವಾದ ಕಾಲದಲ್ಲಿ, ಕಾಂಚನಾ ಶೋರೂಂ ಮಾಲೀಕರಾದ ಅರವಿಂದ ಮೆಹತಾ ಅವರು ಹೊಸಬಟ್ಟೆ ನೀಡಿ, ತಮ್ಮ ಜನ್ಮದಿನ ದಿವ್ಯಾಂಗ ಸಮಾಜದ ಜೊತೆಗೆ ಆಚರಿಸಿಕೊಳ್ಳುವುದು ಇತರರಿಗೂ ಮಾದರಿ ಕಾರ್ಯ ಎಂದು ಅಭಿಮಾನ ವ್ಯಕ್ತಪಡಿಸಿದರು.
ಕಲಿಯುಗದಲ್ಲಿ ಸಂಘಟನೆಯೇ ಶಕ್ತಿ. ಹೀಗಾಗಿ ದಿವ್ಯಾಂಗ ಸಮಾಜ ಸಂಘಟಿತವಾಗಲಿ. ವಿಕಲಚೇತನರ ಧಾರವಾಡ ಜಿಲ್ಲಾ ಒಕ್ಕೂಟವು ಉತ್ತಮ ಕಾರ್ಯಗಳು ಉಳಿದ ಸಂಘಟನೆಗಳಿಗೂ ಮಾದರಿ. ಈ ಸಂಘಟನೆಯ ಕಾರ್ಯಕ್ಕೆ ಸಹಕಾರ ನೀಡುವುದಾಗಿ ವಾಗ್ದಾನ ಮಾಡಿದರು.
ಉದ್ಘಾಟಿಸಿದ ಮಹಿಳಾ-ಮಕ್ಕಳ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಡಾ. ಎಚ್.ಎಚ್.ಕುಕನೂರ, ಬೇಡುವ ಕೈಗಳಿಗಿಂತ ನೀಡುವ ಕೈಗಳೇ ಶ್ರೇಷ್ಠ. ಸಂಪತ್ತಿನ ಸದ್ವಿನೀಯೋಗಕ್ಕೆ ಅರವಿಂದ ಮೇಹತಾ ನಾಂದಿ ಹಾಡಿದ್ದಾರೆ. ಅವರ ಕಾರ್ಯ ಉಳ್ಳವರಿಗೆ ಮಾದರಿ ಎಂದು ಹೇಳಿದರು.
ದೀಪಾವಳಿ ಹಬ್ಬದ ಪ್ರಯುಕ್ತ ದಿವ್ಯಾಂಗ ಸಮುದಾಯಕ್ಕೆ ಹೊಸಬಟ್ಟೆ ನೀಡಿದ ಅರವಿಂದ ಮೆಹತಾ ಅವರ ಕಾರ್ಯ ಶ್ಲಾಘನೀಯ. ದಿವ್ಯಾಂಗರು ನ್ಯೂನ್ಯತೆ ಮೆಟ್ಟಿನಿಂತು ಸಾಧನೆ ಮಾಡಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಅಂಗವಿಕಲರ ಜಿಲ್ಲಾ ಕಲ್ಯಾಣಾಧಿಕಾರಿ ಆರ್.ಎಂ.ಕAಟೆಪ್ಪಗೌಡ್ರ, ದಿವ್ಯಾಂಗರ ಆದರ್ಶದ ಜೀವನ ಸಾಮಾನ್ಯರಿಗೆ ಮಾದರಿ. ದಿವ್ಯಾಂಗರು ವಿವಿಧ ಕ್ಷೇತ್ರದಲ್ಲಿ ತಮ್ಮ ಶಕ್ತಿ ಪ್ರದರ್ಶನ ಅದ್ಭುತ. ದಿವ್ಯಾಂಗರಿಗೆ ಸರ್ಕಾರಿ ಯೋಜನೆ-ಸೌಲಭ್ಯ ಪ್ರಾಮಾಣಿಕ ತಲುಪಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಪುರುಷ ಹಾಗೂ ಮಹಿಳೆಯರು ಸೇರಿದಂತೆ ೧೦೦ ಜನ ದಿವ್ಯಾಂಗರಿಗೆ ಹೊಸಬಟ್ಟೆ ವಿತರಣೆ ನಡೆಯಿತು. ಇದೇ ವೇಳೆಯಲ್ಲಿ ವಿಕಲಚೇತನರ ಜಿಲ್ಲಾ ಒಕ್ಕೂಟವು ಬಟ್ಟೆ ದಾನ ಮಾಡಿದ, ಕಾಂಚನಾ ಶೋರೂಂ ಮಾಲೀಕ ಅರವಿಂದ ಮೆಹತಾಗೆ ಸನ್ಮಾನಿಸಿ, ಗೌರವಿಸಿತು.
ಒಕ್ಕೂಟದ ಧಾರವಾಡ ಜಿಲ್ಲಾಧ್ಯಕ್ಷ ಕೇಶವ ತೆಲಗು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಮಹ್ಮದಗೌಸ್ ಕಳಸಾಪೂರ, ಉಪಾಧ್ಯಕ್ಷ ಬಸವರಾಜ ಉಪ್ಪಾರ, ಮಹಿಳಾ ಉಪಾಧ್ಯಕ್ಷೆ ಮಂಗಳಾ ಬೆಟಗೇರಿ, ಶ್ರೀಶೈಲ ಸವದತ್ತಿ, ಸಂತೋಷ ಹಿರೇಮಠ, ಈರಮ್ಮ ಹಳವೂರ, ಉಮೇಶ ಚೌಡಪ್ಪನವರ, ಮಹೇಶ ಗೂಳಪ್ಪನವರ ಇದ್ದರು.