ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕಚೇರಿಯಲ್ಲಿ, ಇದೇ ತಿಂಗಳು ಸಾಮಾನ್ಯ ಸಭೆಯನ್ನು ನಡೆಸುವ ನಿಟ್ಟಿನಲ್ಲಿ ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು,
ಮಹಾನಗರ ಪಾಲಿಕೆಯ ಸಭಾಭವನದ ಕಾಮಗಾರಿಯ ವೀಕ್ಷಣೆಯನ್ನು ಮಾಡಿದ ಕ್ಷಣಗಳು. ಈ ಸಂದರ್ಭದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಇದೇ ತಿಂಗಳ ದಿನಾಂಕ 29ರ ಒಳಗೆ ನವೀಕರಣದ ಕಾಮಗಾರಿಯ ಪೂರ್ಣಗೊಳಿಸಿ,
ಸಾಮಾನ್ಯ ಸಭೆಯನ್ನು ನಡೆಸಲು ಸಿದ್ಧಗೊಳಿಸಲು ಸೂಚಿಸಲಾಯಿತು. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಶ್ರೀ ಶಂಕರ ಶೇಳಕೆ ರವರು, ಶ್ರೀ ಶಂಭು ಸಾಲಿಮನಿ ರವರು,
ಶ್ರೀಮತಿ ಅನಿತಾ ಚಳಗೇರಿ ರವರು, ಶ್ರೀಮತಿ ಜ್ಯೋತಿ ಪಾಟೀಲ ರವರು, ಪಾಲಿಕೆಯ ಅಧೀಕ್ಷಕ ಅಭಯಂತರರಾದ ತಿಮ್ಮಪ್ಪ ರವರು, ಕಾರ್ಯನಿರ್ವಾಹಕ ಅಭಯಂತರರಾದ ಶ್ರೀ ಆನಂದ ಜಲಕಿ ರವರು, ಶ್ರೀ ಎಸ್.ಎನ್. ಗಣಾಚಾರಿ ರವರು, ಹಾಗೂ ವಲಯ ಸಹಾಯಕ ಆಯುಕ್ತರಾದ ಶ್ರೀ ಆರ್.ಎಂ. ಕುಲಕರ್ಣಿ ರವರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.