*ಜಿಲ್ಲಾ ವ್ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು*
*ಧಾರವಾಡ(ಕರ್ನಾಟಕ ವಾರ್ತೆ)ಸೆ.03*: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ “ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ” ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕ.ವಿ.ವ. ಸಂಘದ ನಾಡೋಜ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಸೆಪ್ಟೆಂಬರ್ 5 ರಂದು ಮಧ್ಯಾಹ್ನ 2 ಗಂಟೆಗೆ ಆಯೋಜಿಸಲಾಗಿದೆ.
*2022-23 ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಮಾಹಿತಿ:*
*ಪ್ರಾಥಮಿಕ ವಿಭಾಗ:* ಎಸ್.ಬಿ.ಕಾಳೆ ಪ್ರಧಾನಗುರುಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಜೀವಗಾಂಧಿನಗರ ಧಾರವಾಡ, ನಂದಪ್ಪಗೌಡ.ಬಾ.ದ್ಯಾಪೂರ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುರ್ಗಾ ಕಾಲೊನಿ ಧಾರವಾಡ, ರಾಜೀವ.ಆರ್.ಹಲವಾಯಿ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಬ್ಬಳ್ಳಿ, ಶ್ವೇತಾ ಕೋರಿ ಶಿಕ್ಷಕಿಯರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕರ್ಲಾನಿ ಮುಮ್ಮಿಗಟ್ಟಿ, ಸುಭಾಶ.ಆರ್.ತಹಶೀಲ್ದಾರ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಳೆ ಆನಂದನಗರ ಹಳೇಹುಬ್ಬಳ್ಳಿ, ಕೆ.ಎಸ್.ಖಾದ್ರಿ ಶಿಕ್ಷಕಿಯರು ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಬಾಹರಬಾಡಾ ಹಳೇಹುಬ್ಬಳ್ಳಿ, ಎಚ್.ಚಂದ್ರಪ್ಪ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಪನಕೊಪ್ಪ, ಫರೀದಾಬೇಗಂ.ಆ.ಬಿಸ್ತಿ ಶಿಕ್ಷಕಿಯರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಸುಗಲ್, ಡಿ.ಎನ್.ದೊಡಮನಿ ಪ್ರಾಧಾನಗುರುಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾವರಗೇರೆ, ಎಫ್.ಎಸ್ ಹಿರೇಮಠ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿಂಡಸಗೇರಿ, ಆರ್.ಎಸ್ ಉಪ್ಪಾರ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಹರಕುಣಿ, ಕೆ.ಐ.ಶಿಂಗೂಟಿ ಶಿಕ್ಷಕಿಯರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಟದೂರ, ಎಂ.ಎಲ್ ನಿಡವಣಿ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಬ್ರಾಹಿಂಪುರ, ಜಿ.ಎಸ್ ಹಳ್ಳಣ್ಣವರ ಶಿಕ್ಷಕಿಯರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.ನಂ 2 ಹಾಲಕುಸುಗಲ್.
*ಪ್ರೌಢಶಾಲಾ ವಿಭಾಗ:* ಲಕ್ಷ್ಮೀಬಾಯಿ.ಎಂ.ಕುಲಕರ್ಣಿ ಸಹ ಶಿಕ್ಷಕಿಯರು ಸರ್ಕಾರಿ ಉರ್ದು ಪ್ರೌಢಶಾಲೆ ಗುಲಗಂಜಿಕೊಪ್ಪ ಧಾರವಾಡ, ಎಂ.ವೈ ಬಡಿಗೇರ ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ನರೇಂದ್ರ, ರೇಣುಕಾ ಮುದ್ದಿಗೌಡರ ಸಹ ಶಿಕ್ಷಕಿಯರು ಸರ್ಕಾರಿ ಪ್ರೌಢ ಶಾಲೆ ಆನಂದನಗರ ಹಳೇಹುಬ್ಬಳ್ಳಿ, ಕ್ಯಾರೋಲಿನ್ ಬೆಸಿಲ್ ಫ್ರಾನ್ಸಿಸ್ ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಅದರಗುಂಚಿ, ಆರ್.ಕೆ.ಕಾಮತ ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಮುತ್ತಗಿ, ಎಲ್.ಎ.ನದಾಫ ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಯರೇಬೂದಿಹಾಳ, ಸಿದ್ದಪ್ಪ.ಸಿ.ಮಾದರ ದೈಹಿಕ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಶಿರೂರ ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***********