ಚಿಂಚೋರೆಗೆ ಕಾರಣ ಕೇಳಿ ನೋಟಿಸ್

ಚಿಂಚೋರೆಗೆ ಕಾರಣ ಕೇಳಿ ನೋಟಿಸ್
ಧಾರವಾಡ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸಾರ್ವಜನಿಕವಾಗಿ ಮುಜುಗುರ ಆಗುವ ರೀತಿಯಲ್ಲಿ ನಡೆದುಕೊಂಡ ಹಿನ್ನೆಲೆಯಲ್ಲಿ ಪಾಲಿಕೆ ಮಾಜಿ ಸದಸ್ಯ ದೀಪಕ ಚಿಂಚೋರೆ ಅವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರಾಬರ್ಟ್ ದದ್ದಾಪುರಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಮಂಗಳವಾರ ಚಿಂಚೋರೆ ಅವರಿಗೆ ಏಳು ದಿನಗ ಳೊಳಗಾಗಿ ಶಿಸ್ತು ಸಮಿತಿ ಅಧ್ಯಕ್ಷ ಮುಂದೆ ಹಾಜರಾಗಿ ಲಿಖಿತ ಲಿಖಿತ ರೂಪದಲ್ಲಿ ತಮ್ಮ ಸ್ಪಷ್ಟಿಕರಣ ನೀಡದಿದ್ದರೆ ಶಿಸ್ತು ಸಮಿತಿಯಿಂದ ಕ್ರಮ ಅನಿವಾರ್ಯ ಎಂದು ತಿಳಿಸಿದ್ದಾರೆ. ಹು.ಧಾ.ಪಶ್ಚಿಮ 74 ಕ್ಷೇತ್ರದಿಂದ ಘೋಷಿತ ಅಭ್ಯರ್ಥಿ ಎಂಬಂತೆ ಎಲ್ಲೆಡೆ ಹೋರ್ಡಿಂಗ್‌ಗಳನ್ನು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಈ ನೋಟಿಸ್‌ ನೀಡಲಾಗಿದೆ.
ನವೀನ ಹಳೆಯದು

نموذج الاتصال