ಮಕ್ಕಳನ್ನು ಉತ್ತಮ ಸಂಸ್ಕಾರವಂತರನ್ನಾಗಿ ಮಾಡಿ- ರಾಜೇಶ ಕೊಟೆನ್ನವರ

ಮಕ್ಕಳನ್ನು ಉತ್ತಮ ಸಂಸ್ಕಾರವಂತರನ್ನಾಗಿ ಮಾಡಿ- ರಾಜೇಶ ಕೊಟೆನ್ನವರ
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರಿಗೆ ಉತ್ತಮ ಸಂಸ್ಕಾರ ನೀಡಿ ಅಂದಾಗ ಮಾತ್ರ ಉತ್ತಮ ಪ್ರಜೆಗಳಾಗುವದರ ಜೊತೆಗೆ ಸಂಸ್ಕಾರವಂತ ಮಕ್ಕಳಾಗಲು ಸಾಧ್ಯ ಎಂದು   ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷರಾದ  ರಾಜು ಕೋಟೆನ್ನವರ ಹೇಳಿದರು. ಅವರು
ಧಾರವಾಡ ನೆಹರು ನಗರದ ಮ್ಯಾದರ್ ಓಣಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಲ ಹಮ್ಮಿಕೊಂಡ ಚಿಕ್ಕ ಮಕ್ಕಳಿಗೆ ನೂಟಬುಕ್ಕ ಪೆನ್ ಪೆನ್ಸಿಲ್ ನೀಡಿ  
, ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿ ಮಾತನಾಡುತ್ತಾ  ವಿದ್ಯಾರ್ಥಿಗಳು ಪಾಲಕರಿಗೆ ಗೌರವ ತರುವ ಕಾರ್ಯ ಮಾಡಬೇಕು ಎಂದು ಕಿವಿ ಮಾತು ಹೇಳುತ್ತಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
 ಮಕ್ಕಳ  ಶಿಕ್ಷಣಕ್ಕೆ ಸಹಾಯ ಮಾಡುವ ಭರವಸೆಯನ್ನು ನೀಡಿದ ಅವರು ಹಿಂದುಳಿದ ಜನಾಂಗದವರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಮ್ಮ ಆಶಯ ವ್ಯಕ್ತಪಡಿಸಿದರು.

 ಪತ್ರಕರ್ತ ಬಸವರಾಜ್ ಆನೆಗುಂದಿ ಮಾತನಾಡಿ ರಾಜು ಕೋಟೆನ್ನವರ  ಸಾಮಾಜಿಕ ಭದ್ರತೆ ಹಾಗೂ ಅವರ ಸರಳ ರಾಜಕಾರಣದ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಗಣೇಶ್ ಭೂತಪ್ಪ ನವರ್ ಮಂಜುನಾಥ್ ಮಾದರ್ ರಾಮು ಹೆಬ್ಬಳ್ಳಿ ರಮೇಶ್ ಸೇರಿದಂತೆ ಗಣೇಶ ಉತ್ಸವ ಮಂಡಳಿಯ ಸದಸ್ಯರು ನೆಹರು ನಗರದ ನಿವಾಸಿಗಳು  ಹಾಜರಿದ್ದರು.
ನವೀನ ಹಳೆಯದು

نموذج الاتصال