ಜೆ.ಎಸ್.ಎಸ್ ಸಂಸ್ಥೆಯ ನೂತನ ಕಾರ್ಯದರ್ಶಿ ಡಾ.ಅಜಿತ ಸಾದಗೆ ಸನ್ಮಾನ

ಜೆ.ಎಸ್.ಎಸ್  ಸಂಸ್ಥೆಯ ನೂತನ ಕಾರ್ಯದರ್ಶಿ ಡಾ.ಅಜಿತ ಸಾದಗೆ ಸನ್ಮಾನ
   ಧಾರವಾಡ:-- ಜೆ.ಎಸ್.ಎಸ್ . ಕಾಲೇಜಿನಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಡಾ . ಅಜಿತ ಪ್ರಸಾದ ತಮ್ಮ ದೂರದೃಷ್ಟಿ ದಣಿವರಿಯದ ದುಡಿಮೆ , ಸಹೃದಯ , ಪಠ್ಯ ಮತ್ತು ಪತ್ಯೇತರ ಚಟುವಟಿಕೆಗಳಿಂದ ಜೆ.ಎಸ್.ಎಸ್ . ಶಿಕ್ಷಣ ಸಂಸ್ಥೆಯಲ್ಲಿ ನಿಸ್ವಾರ್ಥದಿಂದ ದುಡಿಯುತ್ತಿರುವ ' ಭೀಷ್ಮ ಪಿತಾಮಹ ' ಎಂದು ಧಾರವಾಡ ಮತ್ತು ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ . ಅವರ ನಿಸ್ವಾರ್ಥ ಹಾಗೂ ಸಮರ್ಪಣಾ ಮನೋಭಾವದ ಸೇವೆಯೇ ಅವರಿಗೆ ' ಭೀಷ್ಮ ಪಿತಾಮಹ ' ಎಂಬ ಬಿರುದನ್ನು ತಂದುಕೊಟ್ಟಿದೆ ಎಂದು ಕೆಪಿಸಿಸ ಸದಸ್ಯರಾದ  ರಾಬರ್ಟ ದದ್ದಾಪರಿ ಅಭಿಪ್ರಾಯಪಟ್ಟರು.
   ಅವರು ಜೆ.ಎಸ್.ಎಸ್ . ಶಿಕ್ಷಣ ಸಂಸ್ಥೆಯ ನೂತನ ಕಾರ್ಯದರ್ಶಿಗಳಾಗಿ ಅಧಿಕಾರವಹಿಸಿಕೊಂಡ ಡಾ. ಅಜಿತ ಪ್ರಸಾದ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಸನ್ಮಾನಿಸಿ ಮಾತನಾಡಿದರು.
    1973 ರಲ್ಲಿ ಕಾಲೇಜು ಪ್ರವೇಶ ಮಾಡಿ ಪ್ರಾಧ್ಯಾಪಕರಾಗಿ , ಉಪಪ್ರಾಚಾರ್ಯರಾಗಿ , ಪ್ರಾಚಾರ್ಯರಾಗಿ ಮತ್ತು ಹಣಕಾಸು ಅಧಿಕಾರಿಗಳಾಗಿ ಅತ್ಯಂತ ಕರಾರುವಕ್ಕಾಗಿ ಜೆ.ಎಸ್.ಎಸ್ . ಶಿಕ್ಷಣ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ . ಪ್ರಸಕ್ತ ಅವರನ್ನು ಜೆ.ಎಸ್.ಎಸ್ . ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಉತ್ತರ ಕರ್ನಾಟಕದ ಶಿಕ್ಷಣ ವಲಯವು ಮತ್ತು ಸಾಂಸ್ಕೃತಿಕ ರಂಗವು ಹೆಮ್ಮೆಪಟ್ಟುಕೊಳ್ಳುವಂತಾಗಿದೆ ಎಂದು  ರಾಬರ್ಟ ದದ್ದಾಪುರಿ ಹೇಳಿದರು.
     ಕ್ರೀಡೆ , ನೃತ್ಯ , ಯಕ್ಷಗಾನ , ನಾಟಕ , ಸಂಗೀತ , ಕರಾಟೆ , ಯೋಗ , ಚಿತ್ರಕಲೆ ಮುಂತಾದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಮ್ಮದೇ ಶಿಸ್ತುಬದ್ಧ ಕ್ರಮದಲ್ಲಿ ನಿಯೋಜಿಸಿ ಜೆ.ಎಸ್.ಎಸ್ . ಶಿಕ್ಷಣ ಸಂಸ್ಥೆಗೆ ಘನತೆಯನ್ನು ತಂದುಕೊಟ್ಟಿರುತ್ತಾರೆ . ಅವರು ಪ್ರಾಚಾರ್ಯರಾಗಿದ್ದಾಗ ಜೆ.ಎಸ್.ಎಸ್ . ಕಾಲೇಜು ನಾಲ್ಕು ಬಾರಿ ಕರ್ನಾಟಕ ವಿಶ್ವವಿದ್ಯಾಲಯದ ಕಾಲೇಜುಗಳ ಕ್ರೀಡೆಯಲ್ಲಿ ಚಾಂಪಿಯನ್‌ಶಿಪ್ ಪಡೆದುಕೊಂಡಿದ್ದು , ಇಲ್ಲಿಯ ಕ್ರೀಡಾಪಟುಗಳಿಗೆ ಸಿಗುವಷ್ಟು ಉತ್ತೇಜನ , ಸವಲತ್ತು , ಪ್ರೋತ್ಸಾಹಗಳು ಕ್ರೀಡಾಪಟುಗಳನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಿನುಗುವಂತೆ , ಬೆಳಗುವಂತೆ ಮಾಡಿದ್ದಾರೆ . ಯುವಜನೋತ್ಸವದಲ್ಲಿ ಜೆ.ಎಸ್.ಎಸ್ . ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದು ಕಾಲೇಜಿಗೆ ಕೀರ್ತಿಯನ್ನು ಡಾ . ಅಜಿತ ಪ್ರಸಾದರ ಮಾರ್ಗದರ್ಶನದಲ್ಲಿ ತಂದಿರುತ್ತಾರೆ . ಕ್ಯಾಂಪಸ್ ಸಂದರ್ಶನದ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಡಾ . ಅಜಿತ ಪ್ರಸಾದ ಅವರು ಸುಮಾರು 3000 ಕ್ಕೂ ಹೆಚ್ಚು ಉತ್ತರ ಕರ್ನಾಟಕದ ಜೆ.ಎಸ್.ಎಸ್ . ವಿದ್ಯಾರ್ಥಿ-- ವಿದ್ಯಾರ್ಥಿ ನಿಯರಿಗೆ ಉದ್ಯೋಗ ದೊರೆಯುವಂತೆ ಮಾಡಿದ್ದು ಜೆ.ಎಸ್.ಎಸ್ . ಕಾಲೇಜಿನ ಇತಿಹಾಸದಲ್ಲೇ ಪ್ರಪ್ರಥಮವಾದ್ದು ಎಂದರು.
     ಜೆ.ಎಸ್.ಎಸ್ . ಶ್ರೀ ಮಂಜುನಾಥೇಶ್ವರ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಧಾರವಾಡದ ಪ್ರಚಾರ್ಯರಾಗಿ ಗುರುತರವಾದ ಸೇವೆಯನ್ನು ಸಲ್ಲಿಸಿರುತ್ತಾರೆ . ' ಯುವ ಧಾರವಾಡ ಉತ್ಸವವನ್ನು ಜಿಲ್ಲಾಡಳಿತದ ಆಶ್ರಯದಲ್ಲಿ ಎರಡುಬಾರಿ ಯಶಸ್ವಿಯಾಗಿ ಸಂಘಟಿಸಿ “ ಉತ್ತಮ ಸಂಘಟನಕಾರ ' ಎಂದು ಧಾರವಾಡದ ಜಿಲ್ಲಾಡಳಿತದಿಂದ ಗೌರವಿಸಲ್ಪಟ್ಟಿದ್ದಾರೆ . ಇವರ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಇವರು ನೀಡಿರುವ ಪ್ರೋತ್ಸಾಹ ಮತ್ತು ತಮ್ಮನ್ನು ತಾವು ತೊಡಗಿಸಿಕೊಳ್ಳುವ ರೀತಿಯನ್ನು ಗುರುತಿಸಿ ಮುಂಬೈನ ಕನ್ನಡಿಗರ ಸಂಘ ಅಜಂತಾ ರಾಷ್ಟ್ರ ಪ್ರಶಸ್ತಿ ' ನೀಡಿ ಗೌರವಿಸಿದೆ . ಇವರು ಜೆ.ಎಸ್.ಎಸ್ . ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾಗಿ ಇನ್ನೂ ಹೆಚ್ಚಿನ ಸೇವೆಯನ್ನು ಮಾಡಲಿ , ಕವಿಗಾಳಿ ಸುಳಿವ ಹಸಿರು ಹಿನ್ನೆಲೆಯಲ್ಲಿ ಕಂಗೊಳಿಸುವ ವಿದ್ಯಾಕಾಶಿ ಧಾರವಾಡದಲ್ಲಿ ಜೆ.ಎಸ್.ಎಸ್ . ಶಿಕ್ಷಣ ಸಂಸ್ಥೆಯನ್ನು ಧೃವತಾರೆಯನ್ನಾಗಿ ಡಾ . ಅಜಿತ ಪ್ರಸಾದ ಅವರು ಮಾಡಿರುತ್ತಾರೆ . ಅವರ ಕಾಲಾವಧಿಯಲ್ಲಿ ಜೆ.ಎಸ್.ಎಸ್ . ಶಿಕ್ಷಣ ಸಂಸ್ಥೆ ಒಂದು ಡೀಮ್ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳಲಿ ಎಂದು ಕೆಪಿಸಿಸಿ ಸದಸ್ಯರಾದ  ರಾಬರ್ಟ ದದ್ದಾಪುರಿ ಹಾರೈಸಿದ್ದಾರೆ . 
   ಈ ಸಂದರ್ಭದಲ್ಲಿ ಆನಂದ ಜಾದವ , ಜೇಮ್ಸ್ ಯಾಮಾ , ಬಿ.ಎಚ್ . ಪೂಜಾರ ಉಪಸ್ಥಿತರಿದ್ದರು.
STAR 74 NEWS YOU TUB CHANNEL SUBSCRIBE,LIKE &SHARE
ನವೀನ ಹಳೆಯದು

نموذج الاتصال