ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಖಾಯಂ ಪೌರಕಾರ್ಮಿಕರಿಗೆ *ಪೌರಕಾರ್ಮಿಕರ ಗೃಹಭಾಗ್ಯ*

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ  ಖಾಯಂ ಪೌರಕಾರ್ಮಿಕರಿಗೆ *ಪೌರಕಾರ್ಮಿಕರ ಗೃಹಭಾಗ್ಯ*
 ಯೋಜನೆಯಡಿಯಲ್ಲಿ 320 ನಿವೇಶನಗಳನ್ನು ನಿರ್ಮಿಸುವ ಕುರಿತು  ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹುಬ್ಬಳ್ಳಿ ಕಚೇರಿಯಲ್ಲಿ ಮಹಾಪೌರರ ನೇತೃತ್ವದಲ್ಲಿ ಸಭೆಯು ನೆರವೇರಿತು. ಈ ಸಂದರ್ಭದಲ್ಲಿ ಪೌರಕಾರ್ಮಿಕರ ಸಂಘದ ಅಧ್ಯಕ್ಷರು ಅವರ ಸಮಸ್ಯೆಗಳ ಬಗ್ಗೆ ಮಹಾಪೌರರ ಗಮನಕ್ಕೆ ತಂದರು, ಈ ಸಂದರ್ಭದಲ್ಲಿ ಮಹಾಪೌರರು ಮೊದಲನೇ ಹಂತದ ನಿವೇಶನಗಳನ್ನು ಬರುವ ನವೆಂಬರ್ 1 ರೊಳಗೆ ಪೌರಕಾರ್ಮಿಕರ ನಿವೇಶನಗಳನ್ನು ಹಸ್ತಾಂತರಿಸಬೇಕು.
 ತಪ್ಪಿದ್ದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಸೂಚಿಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಉಪಮಹಾಪೌರರಾದ ಶ್ರೀಮತಿ ಉಮಾ ಮುಕುಂದ ರವರು, ಸಭಾನಾಯಕರಾದ ಶ್ರೀ ತಿಪ್ಪಣ್ಣ ಮಜ್ಜಿಗಿ ರವರು, ವಿರೋಧ ಪಕ್ಷದ ನಾಯಕರಾದ ಶ್ರೀ ದೋರಾಜ್ ಮನಕುಂಟ್ಲಾ ರವರು, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ವಿಜಯಾನಂದ ಶೆಟ್ಟಿ ರವರು, ಶ್ರೀ ಸುರೇಶ ಬೆದರೆ ರವರು ಹಾಗೂ ಪಾಲಿಕೆಯ ಅಧೀಕ್ಷಕ ಅಭಯಂತರರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال