ಶ್ರೀ ನವಕಲ್ಯಾಣ ಮಠದಲ್ಲಿ ಕರೋನಾ ವಾರಿಯರ್ಸ ಸನ್ಮಾನ
ಸನ್ಮಾನ ಸ್ವೀಕರಿಸಿಸುವದರಿಂದ ಸಮಾಜ ಹಾಗೂ ವ್ರತ್ತಿಯಲ್ಲಿ ಜವಾಬ್ದಾರಿ ಹೆಚ್ಚುತ್ತದೆ ಎಂದು ಖ್ಯಾತ ಕೆ ಎಮ್ ಸಿ ಯ ನರರೋಗ ತಜ್ಞರಾದ ಡಾ ರವಿ ಕುಮಾರ್ ಜಾಧವ ನುಡಿದರು, ಅವರು ಭೂಸ್ ಗಲ್ಲಿಯ ಕುಮಾರ ಸ್ವಾಮಿಜಿಗಳ ಶ್ರೀ ನವಕಲ್ಯಾಣ ಮಠದಲ್ಲಿ ಧಾರವಾಡ , ಹುಬ್ಬಳ್ಳಿ ಯ ವೈದ್ಯರಿಗೆ, ಹಾಗೂ ಶುಶ್ರೂಷಕರಿಗೆ , ಕರೋನಾ ವಾರಿಯರ್ಸ್ಗಳಿಗೆ ಸನ್ಮಾನ ಸಮಾರಂಭ ದಲ್ಲಿ ಶ್ರೀಮಠದ ಭಕ್ತರನ್ನು ಉದ್ದೇಶಿಸ
ಮಾತನಾಡಿದರು, ಕರೋನಾ ಸಂಧಭ೯ದಲ್ಲಿ ಹುಬ್ಬಳ್ಳಿ ಯ, ಕೆ ಎಮ್ ಸಿ ಆಸ್ಪತ್ರೆಯು ರೋಗಿಗಳಿಗೆ ಅತ್ಯುತ್ತಮ ಸೇವೆ ನೀಡಿ ಕನಾ೯ಟಕ ಆದ್ಯಂತ ಹೆಸರುವಾಸಿ ಆಗಿದೆ, ಇದಕ್ಕೆ ಕಾರಣ ಈ ಐದು ವಷ೯ದಲ್ಲಿ ಒಳ್ಳೆಯ ನಿದೆ೯ಶಕರು ಕೆ ಎಮ್ ಸಿ ಆಡಳಿತ ಮಂಡಳಿಯಲ್ಲಿ ಬಂದಿರುವುದು ಎಂದರು,ಎರಡು ಸಾವಿರ ಕರೋನಾ ರೋಗಿಗಳಿಗೆ ಜೀವದ ಹಂಗು ತೊರೆದು
ವೈದ್ಯರು,ಶುಶ್ರೂಷಕರು,ತಂತ್ರಜ್ಞರು,ಸಫಾಯಿ ಕಮ೯ಚಾರಿಗಳ ಸೇವೆ ಬಹು ಜನರ ಜೀವ ರಕ್ಷಣೆಗೆ ಸಾಧ್ಯವಾಯಿತು ಎಂದರು. ಕಾರ್ಯಕ್ರಮದ ಅದ್ಯಕ್ಷ ತೆ ವಹಿಸಿದ್ದ ನವಕಲ್ಯಾಣ ಮಠದ ಚೇರಮನ್ ಐ ಬಿ ಅಕ್ಕಿ ಮಾತನಾಡಿ ವೈದ್ಯೂ ನಾರಾಯಣ ಹರಿ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವೈದ್ಯ ರನ್ನು ದೇವರ ಸಮಾನ ಎಂದು ಹೇಳಲಾಗುತ್ತದೆ,ತಮ್ಮ ಜೀವನದ ಹಂಗು ತೂರೆದು, ರೋಗಿಗಳ ಜೀವ ಉಳಿಸಿದ್ದಕ್ಕಾಗಿ ಇದೊಂದು ಚಿಕ್ಕ ಕಾಯ೯ಕ್ರಮ ಆಯೋಜಿಸಿಲಾಗಿದ್ದು,ಶಿವ ಶರಣರು ಕೂಟ್ಟ ಸಂದೇಶ ಇವ ನಾರವ ಇವ ನಾರವ ಎಂದನದೆ..ಇವ ನಮ್ಮ ವ ಇವ ನಮ್ಮ ವ .... ಹೀಗೆ ಯಾವುದೇ ಜಾತಿ, ಲಿಂಗ ಭೇಧ ಮಾಡದೆ ಸಮಾಜದ ಎಲ್ಲ ವಗ೯ದವರ ಸೇವೆ ಮಾಡಿದವರು ವೈದ್ಯರು, ಭಾರತ ಆಧ್ಯಂತ ಇನ್ನೂರಾ ನಲವತ್ತೆರಡು ವೈದ್ಯರು ತಮ್ಮ ಪ್ರಾಣ ತೆತ್ತು ರೋಗಿಗಳ ಸೇವೆ ಸಲ್ಲಿಸಿದ್ದಾರೆ, ರೋಗಿಗಳ ಸೇವೆ ದೇವರ ಸೇವೆ ಗೆ ಸಮಾನ ನಿಮ್ಮೆಲ್ಲರನ್ನು ಸನ್ಮಾನ ಮಾಡುವುದು ನಮ್ಮ ಸುದೈವ ಎಂದರು.
ಸಿ ಆರ್ ಮೆಣಸಿನಕಾಯಿ,ವಿಶ್ವನಾಥ ವಾಣಿ, ಪ್ರಕಾಶ ಅಮ್ಮಿನಭಾವಿ,ಪ್ರವಚನಕಾರರಾದ ಶ್ರೀ ಮಡಿವಾಳೇಶ್ವರ ಸ್ವಾಮಿಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಂದ್ರು ನೇಸರಗಿ,ಸದಾನಂದ ಹಾವೇರಿ, ಶ್ರೀ ಮಠದ ಭಕ್ತರು ಉಪಸ್ಥಿತರಿದ್ದರು. ಪ್ರಾಥ೯ನೆ ಶ್ರೀ ಮಠದ ವಿದ್ಯಾರ್ಥಿಗಳಿಂದ, ಕಾರ್ಯಕ್ರಮ ನಿರೂಪಣೆ ಸಂಗಪ್ಪ ಗುಂಡೂರ ,ಸುರೇಶ್ ಸಜ್ಜನ್ ವಂದನಾಪ೯ಣೆ ಮಾಡಿದರು.
#star74news#star74newskannada