ವೇತನ ಹೆಚ್ಚಳ, ಪದನಾಮ ಬದಲಾವಣೆ,ಸೇವಾ ಭದ್ರತೆ, ಪಿಯುಸಿ ಬೋಧನಾ ಅವಧಿ ಯಥಾಸ್ಥಿತಿ ಕಾಪಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಆಹ್ರಹಿಸಿ ಕರ್ನಾಟಕ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಇಂದು ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ.
ವಿಶ್ವವಿದ್ಯಾಲಯದ ಪ್ರಮುಖ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ಇದೆ, ಇನ್ನೊಂದೆಡೆ ಅತಿಥಿ ಉಪನ್ಯಾಸಕರಿಗೆ ಕನಿಷ್ಟ 50 ಸಾವಿರ ವೇತನ ನೀಡಬೆಕೆಂದು ಯುಜಿಸಿ ನಿಯಮಾವಳಿ ಇದೆ.
ಹೀಗಿದ್ದರೂ ಕುಲಪತಿ ಪ್ರೋ. ಕೆ ಬಿ ಗುಡಸಿ, ವೇತನ ಹೆಚ್ವಳಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ನಿತ್ಯ ಕೆಲಸ ಮಾಡುವ ಉಪನ್ಯಾಸಕರಿಗೆ ಅತಿಥಿ ಪದ ಬಳಸಿ ಅಪಮಾನ ಮಾಡಲಾಗುತ್ತಿದ್ದು ಪದನಾಮ ಬದಲಾವಣೆ ಬದಲಾವಣೆ ಮಾಡಬೇಕು.
ಸೇವಾಭದ್ರತೆ ಕಲ್ಪಿಸಬೇಕು ಎಂದು ಈ ಹಿಂದೆ ಹೋರಾಟದ ಸಂದರ್ಭದಲ್ಲಿ ಬೇಡಿಕೆ ಇಡೇರಿಸುವ ಭರವಸೆಯನ್ನು ಕುಲಪತಿಗಳು ನೀಡಿದ್ದರು. ಆದರೆ, ನೀಡಿದ ಭರವಸೆ ಇಡೇರಿಸದೇ ಉಪನ್ಯಾಸಕರ ಮೇಲಿನ ಸೇಡಿನ ಕ್ರಮ ಅನುಸರಿಸುತ್ತಿದ್ದಾರೆ. ಅದಕ್ಕಾಗಿ ವಿಶ್ವವಿದ್ಯಾಲಯದ ಅಧಿನ ಪಿಯು ಕಾಲೇಜಿನಲ್ಲಿ ಬೋಧನಾ ಅವಧಿ ಹೆಚ್ಚಿಸಿ ಉಪನ್ಯಾಸಕರನ್ನು ಉದ್ಯೋಗದಿಂದ ಹೊರ ಹಾಕುವ ಹುನ್ನಾರ ನಡೆಸಿದ್ದಾರೆ. ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು.
ಪ್ರೋ. ಕೆ ಬಿ ಗುಡಸಿ ಒಬ್ಬ ಅಸಮರ್ಥ ಕುಲಪತಿ ಎಂದು ಹರಿಹಾಯ್ದ ಉಪನ್ಯಾಸಕರು, ತಮ್ಮ ಅವಧಿಯಲ್ಲಿ ಸರಕಾರದಿಂದ ಒಂದೇ ಒಂದು ಪೈಸೆ ಅನುದಾನ ತಂದಿಲ್ಲ. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಆರ್ಥಿಕವಾಗಿ ದಿವಾಳಿಯಾಗಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಬೇಕಾ ಬಿಟ್ಟಿ ಶುಲ್ಕ ಹೆಚ್ಚಳ ಮಾಡಿರುವ ಅವರು, ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆಯನ್ನು ಹೇರಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಶಿವಸೋಮಣ್ಣ ನಿಟ್ಟೂರು, ಡಾ. ವೆಂಕನಗೌಡ ಪಾಟೀಲ, ಡಾ. ಮಲ್ಲಖಾರ್ಜುನ ಬ್ಯಾಲ್ಯಾಳ, ಡಾ. ಅಂಬರೀಶ ಸಿಂದಗಿ, ಡಾ.ಮಹದೇವ ಬಿಡ್ನಾಳ, ಡಾ. ಶಿವಲಿಂಗಪ್ಪ ಅಂಗಡಿ. ಡಾ. ಡಾ. ರಾಮನಗೌಡ ಪಾಟೀಲ. ಡಾ. ಶೀಲಾ ಭಂಡಾರಿ, ಡಾ. ನೀಲಾಂಬಿಕಾ ಪಾಟೀಲ, ಡಾ. ನೀತಾ ಕರಿ, ಡಾ. ಅರುಣಾ ಕಟ್ಟಿ, ಡಾ. ವೀಣಾ ಕಟ್ಟೆಗೌಡರ, ಡಾ. ವೀಣಾ ಹೊಳೆಯಣ್ಣವರ, ಡಾ. ಡಾ. ರಾಜೇಶ್ವರಿ ಸಂಗೊಳ್ಳಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.