ಕರ್ನಾಟಕಕ್ಕೆ ಐದು ಚಿನ್ನ-ಒಂದು ಬೆಳ್ಳಿ ಪದಕಧಾರವಾಡ ಜಿಲ್ಲೆಗೆ ಕೀರ್ತಿ ತಂದ ಕ್ರೀಡಾಪಟಗಳು..!

ಕರ್ನಾಟಕಕ್ಕೆ ಐದು ಚಿನ್ನ-ಒಂದು ಬೆಳ್ಳಿ ಪದಕ

ಧಾರವಾಡ ಜಿಲ್ಲೆಗೆ ಕೀರ್ತಿ ತಂದ ಕ್ರೀಡಾಪಟಗಳು..! 
ಧಾರವಾಡ: ಭಾರತೀಯ ಪ್ಯಾರಾ ಮಾಸ್ಟರ್ ಗೇಮ್ಸ್ ಫೆಡರೇಷನ್ ಕೇರಳಾ ರಾಜ್ಯದ ತ್ರಿಶೂರ ನಲ್ಲಿ ಆ.೧೩ ಮತ್ತು ೧೪ರಂದು ಆಯೋಜಿಸಿದ ರಾಷ್ಟçಮಟ್ಟದ ೨ನೇ ಪ್ಯಾರಾ ಮಾಸ್ಟರ್ ಗೇಮ್ಸ್ನಲ್ಲಿ ಧಾರವಾಡ ಜಿಲ್ಲೆ ಕ್ರೀಡಾಪಟುಗಳು ಉತ್ತಮ ಸಾಧನೆ ಮೂಲಕ ಬಂಗಾರ ಪದಕಗಳನ್ನು ಜಯಸಿದ್ದಾರೆ ಎಂದು ಓಲಂಪಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಶಿವು ಹಿರೇಮಠ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಧಾರವಾಡ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಓರ್ವ ಸದಸ್ಯ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡು, ಐದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಜಯಿಸುವ ಮೂಲಕ ರಾಜ್ಯ ಹಾಗೂ ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದರು. 

ಬ್ಯಾಡ್ಮಿಟನ್ ಸ್ಪರ್ಧೆಯ ಮಹಿಳಾ ವಿಭಾಗ ಸಿಂಗಲ್ಸ್ನಲ್ಲಿ ವಿಕಲಚೇತನರ ಒಕ್ಕೂಟದ ಮಹಿಳಾ ಉಪಾಧ್ಯಕ್ಷೆಯಾದ ಮಂಗಳಾ ಬೆಟಗೇರಿ ಬಂಗಾರ ಪದಕ, ಪುರಷರ ವಿಭಾಗದ ಸಿಂಗಲ್ ಬ್ಯಾಡ್ಮಿಟನ್ ಸ್ಪರ್ಧೆಯಲ್ಲಿ ರಮೇಶ ಸಾಗೋಟಿ ಬಂಗಾರ ಹಾಗೂ ಡಬಲ್ಸ್ನಲ್ಲಿ ಬೆಳ್ಳಿ ಪದಕ ಜಯಸಿದ್ದಾರೆ ಎಂದು ತಿಳಿಸಿದರು. 

ಹಾಗೆಯೇ ಧಾರವಾಡ ತಾಲೂಕಿನ ಯತ್ತಿನಗುಡ್ಡದ ನಿವಾಸಿ ಮಹೇಶ ಗೂಳಪ್ಪನವರ ಗುಂಡು ಎಸೆತ ಹಾಗೂ ಚಕ್ರ ಎಸೆತದಲ್ಲಿ ಬಂಗಾರದ ಬದಕಕ್ಕೆ ಮುತ್ತಿಟ್ಟಿದ್ದಾನೆ. ಎರಡು ಕಾಲು ಸ್ವಾಧೀನ ಕಳೆದುಕೊಂಡ ಇತನು ಉಪಜೀವನಕ್ಕೆ ನಿತ್ಯವೂ ಹಾಲು ಮಾರಾಟ ಮಾಡುತ್ತಲೇ ಈ ಸಾಧನೆ ಮಾಡಿದ್ದಾನೆ ಎಂದು ಹೇಳಿದರು. 

ಇನ್ನೂ ಪುರಷರ ೭೨ ಕೆ.ಜಿ. ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಒಕ್ಕೂಟದ ಗೌರವಾಧ್ಯಕ್ಷರಾದ ಮಹ್ಮದಗೌಸ್ ಕಳಸಾಪೂರ ೧೫೦ ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನದ ಪದಕವನ್ನು ಜಯಸಿದ್ದಾರೆ. ದಿವ್ಯಾಂಗರ ಈ ಸಾಧನೆ ಸಾಮಾನ್ಯರಿಗೂ ಸ್ಫೂರ್ತಿ ಎಂದರೆ ಅತಿಶಯೋಕ್ತಿ ಅಲ್ಲ ಎಂದರು. 

ಚಿನ್ನದ ಪದಕ ಪಡೆದಿರುವ ಈ ಎಲ್ಲ ಕ್ರೀಡಾಪಟುಗಳಿಗೆ ಮಹದ್ಮಗೌಸ್ ಅವರೇ ಮುಖ್ಯ ತರಬೇತಿದಾರರು ಎಂಬುದು ಮತ್ತೊಂದು ವಿಶೇಷ. ಮಹ್ಮದಗೌಸ್ ತಾನು ಬೆಳೆಯುದಷ್ಟೇ ಅಲ್ಲದೇ, ತನ್ನೊಟ್ಟಿಗೆ ಇರುವ ಇತರರ ಬೆಳವಣಿಗೆಗೂ ಶ್ರಮಿಸುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು. 

ಸಾಮಾನ್ಯ ಕ್ರೀಡಾಪಟುಗಳಿಗೆ ಸಿಗುವ ಸರ್ಕಾರದ ಸೌಲಭ್ಯಗಳು, ಗೌರವ ಹಾಗೂ ಪ್ರೋತ್ಸಾಹ   ಅಂಗವಿಕಲರ ಕ್ರೀಡಾಪಟುಗಳಿಗೆ ಸಿಗದಿರುವುದು ದುರಂತ. ಸರ್ಕಾರ, ಸಮಾಜದ ಸಂಘ-ಸAಸ್ಥೆಗಳು ವಿಶೇಷಚೇನ ಕ್ರೀಡಾಪಟುಗಳತ್ತ ಗಮನ ಹರಿಸಿ, ಪ್ರೋತ್ಸಾಹ ನೀಡುವಂತೆ ಮನವಿ ಮಾಡುತ್ತೇನೆ ಎಂದರು. 
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಧಾರವಾಡ ಜಿಲ್ಲಾಧ್ಯಕ್ಷ ಕೇಶವ ತೆಲಗು, ಗೌರವಾಧ್ಯಕ್ಷ ಮಹದ್ಮಗೌಸ್ ಕಳಸಾಪೂರ, ಸದಸ್ಯರಾದ ಮಹೇಶ ಗೂಳಪ್ಪನವರ, ರಮೇಶ ಸಾಗೋಟಿ, ಮಹಿಳಾ ಉಪಾಧ್ಯಕ್ಷೆ ಮಂಗಳಾ ಬೆಟಗೇರಿ ಇದ್ದರು. 
-
ನವೀನ ಹಳೆಯದು

نموذج الاتصال