ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕಚೇರಿಯ ಸಾಮಾನ್ಯ ಸಭಾಭವನ
ನಡೆಸಲು ಅನುಕೂಲವಾಗುವ ಉದ್ದೇಶದಿಂದ ನೂತನ ಅಮೃತ ಮಹೋತ್ಸವ ಸಭಾಭವನದ ಕಾಮಗಾರಿಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಪೌರರಾದ ಶ್ರೀ ಈರೇಶ ಅಂಚಟಗೇರಿ ರವರು ವೀಕ್ಷಣೆ ಮಾಡಿದರು.
ಹಾಗೂ ಮುಂದಿನ ಸಾಮಾನ್ಯ ಸಭೆಯನ್ನು ಧಾರವಾಡ ಕೇಂದ್ರ ಕಚೇರಿಯ ನೂತನ ಕಟ್ಟಡದಲ್ಲಿ ನಡೆಸಲು ಸೂಚಿಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಶ್ರೀ ಸುರೇಶ ಬೆದರೆ ರವರು, ಪಾಲಿಕೆಯ ಅಧೀಕ್ಷಕ ಅಭಯಂತರರಾದ ಶ್ರೀ ತಿಮ್ಮಪ್ಪ ರವರು,ಕಾರ್ಯನಿರ್ವಾಹಕ ಅಭಯಂತರರಾದ ಶ್ರೀ ಆನಂದಕುಮಾರ ಜಳಕಿ ರವರು, ಪಾಲಿಕೆಯ ಸಹಾಯಕ ಆಯುಕ್ತರಾದ ಶ್ರೀ ಆರ್.ಎಂ. ಕುಲಕರ್ಣಿ ರವರು, ಗುತ್ತಿಗೆದಾರರು ಹಾಗೂ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.