*ಸಾಹಿತಿ ಎಸ್ ಬಿ ಅಂಗಡಿ ನಿಧನಕ್ಕೆ ಕೇಂದ್ರ ಸಚಿವರ ಸಂತಾಪ*
ಧಾರವಾಡ : ಹಿರಿಯ ಸಾಹಿತಿ ಎಸ್ ಬಿ ಅಂಗಡಿ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಬಿಜೆಪಿ ಮುಖಂಡ ಶರಣು ಅಂಗಡಿ ಸಂತಾಪ ಸೂಚಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಶುವಿನಾಳ ಗ್ರಾಮದಲ್ಲಿ ಶಾಲೆ ಸ್ಥಾಪನೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಿದ ಎಸ್ ಬಿ ಅಂಗಡಿಯವರು ತಮ್ಮ 86 ನೇ ವಯಸ್ಸಿನಲ್ಲಿ ಕೊನೆ ಉಸಿರು ಎಳೆದಿದ್ದಾರೆ. ಮೃತರು ಅಪಾರ ಶಿಷ್ಯ ಬಳಗ ಹಾಗೂ ಓರ್ವ ಪುತ್ರಿ ಹಾಗೂ ಪತ್ನಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಶಿಕ್ಷಣ ಸಂಸ್ಥೆ ಕಟ್ಟಿ ಬಡಮಕ್ಕಳಿಗೆ ಶಿಕ್ಷಣ ನೀಡಿದ ಎಸ್ ಬಿ ಅಂಗಡಿ ಅವರ ಅಗಲಿಕೆಯಿಂದ ತುಂಬಲಾರದ ಹಾನಿಯಾಗಿದೆ. ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಎಸ್ ಬಿ ಅಂಗಡಿ ನೀಡಿದ ಸೇವೆ ಅಪಾರವಾಗಿದೆ ಎಂದು ಸ್ಮರಿಸಿದ್ದಾರೆ.